ಬೆಂಗಳೂರು: (ಫೆ.18): Property case: ಜಾಮೀನು ನೀಡಲು ಆಸ್ತಿ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಪೊಲೀಸರಿಗೆ ಮೋಸ ಮಾಡಲು ಹೊರಟಿದ್ದ ವ್ಯಕ್ತಿ ಮತ್ತು ರೌಡಿ ಶೀಟರ್ ನನ್ನು ಉತ್ತರ ವಿಭಾಗದ ಯಶವಂತಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಐದು ಸಾವಿರ ಹಣಕ್ಕಾಗಿ ರೌಡಿಯೊಬ್ಬನ ಜಾಮೀನಿಗೆ ತನ್ನ ಜಮೀನು ಪಹಣಿ ತಿದ್ದುಪಡಿ ಮಾಡಿದ್ದ ರೈತ ಹಾಗೂ ರೌಡಿಶೀಟರ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ನಂದಿನಿ ಲೇಔಟ್‌ನ ರೌಡಿ ಯುವರಾಜ್ ಹಾಗೂ ರಾಮನಗರ ತಾಲೂಕಿನ ಹರಿಸಂದ್ರದ ಮದರಸಾಬ ದೊಡ್ಡಿ ಗ್ರಾಮದ ಕೆಂಪಯ್ಯ ಬಂಧಿತ ಆರೋಪಿಯಾಗಿದ್ದಾರೆ.


ವಂಚನೆ ಹೇಗೆ?
ರಾಮನಗರ ತಾಲೂಕಿನ ಮದರಸಾಬ ದೊಡ್ಡಿ ಗ್ರಾಮದ ಕೆಂಪಯ್ಯನಿಗೆ ಬೇಸಾಯ ವೃತ್ತಿ ಆಗಿದ್ದು, ಹಣಕ್ಕಾಗಿ ನ್ಯಾಯಾಲಯಗಳಲ್ಲಿ ಸಿಕ್ಕಸಿಕ್ಕವರಿಗೆ ಜಾಮೀನು ಕೊಡುವುದು ಪ್ರವೃತ್ತಿ ಆಗಿತ್ತು. ಅಂತೆಯೇ 2014ರಲ್ಲಿ ಬ್ಯಾಟರಾಯನಪುರ ಠಾಣೆಯ ಅಪರಾಧ ಪ್ರಕರಣದ ಆರೋಪಿಗೆ ಆತ ಜಾಮೀನು ಕೊಟ್ಟಿದ್ದ. ಆದರೆ ವಿಚಾರಣೆಗೆ ಆ ಆರೋಪಿಯು ಗೈರಾದ ಕಾರಣಕ್ಕೆ ಕೆಂಪಯ್ಯನಿಗೆ ಸೇರಿದ ಸ್ಥಿರಾಸ್ತಿಯನ್ನು ನಗರದ 43ನೇ ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಈ ವಿಚಾರ ಪಹಣಿಯ ಕಲಂ 11ರಲ್ಲಿ ಉಲ್ಲೇಖವಾಗಿತ್ತು. ಹೀಗಿದ್ದರೂ ಹಣದಾಸೆಗೆ ರೌಡಿ ಯುವರಾಜ್‌ಗೆ ಜಾಮೀನಿಗೆ ಭೂ ದಾಖಲೆ ತಿದ್ದುಪಡಿ ಮಾಡಿದ ತಪ್ಪಿಗೆ ಕೆಂಪಯ್ಯ ಈಗ ಜೈಲು ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:Garbage Issue:ಕಸ ಹಾಕುವ ವಿಚಾರಕ್ಕೆ ಎರಡು ಕುಟುಂಬಸ್ಥರ ನಡುವೆ ಮಾರಾಮಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ