ತುಮಕೂರು:(ಫೆ.18):Hijab Row: ಹಿಜಾಬ್ ವಿವಾದ ತಾರಕಕ್ಕೇರಿದ್ದಕ್ಕೆ ಉಪನ್ಯಾಸಕಿ ರಾಜೀನಾಮೆ ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತಿಪಟೂರು ಮೂಲದ ಅತಿಥಿ ಉಪನ್ಯಾಸಕಿ ಚಾಂದಿನಿ ರಿಸೈನ್ ಹಿಜಾಬ್ ವಿವಾದ (Hijab Row) ಕಾರಣದಿಂದ ರಾಜೀನಾಮೆ ನೀಡಿದ್ದಾರೆ.
ಚಾಂದಿನಿ ತುಮಕೂರಿನ ಕೆಲ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು. ಪ್ರತಿನಿತ್ಯ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದರು. ಆದರೆ, ಇದೀಗ ಹಿಜಾಬ್ ವಿವಾದ ತಾರಕಕ್ಕೇರಿದ ಪರಿಣಾಮ ರಾಜೀನಾಮೆ ನೀಡಿದ್ದಾರೆ. ಜೈನ್ ಕಾಲೇಜಿನ ಅತಿಥಿ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಲಾಗಿದೆ.

ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂದು ಕೋರ್ಟ್ ಆದೇಶದಂತೆ ಸರ್ಕಾರ ನಮಗೆ ಸೂಚನೆ ನೀಡಿದೆ, ಹೀಗಾಗಿ ನೀವು ಹಿಜಾಬ್ ಧರಿಸಿ ತರಗತಿಯೊಳಗೆ ಹೋಗಿ ಪಾಠ ಮಾಡುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ ಹಿನ್ನೆಲೆಯಲ್ಲಿ ಮನ ನೊಂದು ಅತಿಥಿ ಉಪನ್ಯಾಸಕಿ ರಾಜಿನಾಮೆ ನೀಡಿದ ಘಟನೆ ನಡೆದಿದೆ.
ತರಗತಿಗೆ ಬಹಿಷ್ಕಾರ ಹಾಕಿದ ವಿದ್ಯಾರ್ಥಿಗಳು:
ಹಿಜಾಬ್ ತೆಗೆಯಿರಿ ಎಂದು ಹೇಳುವ ಮೂಲಕ ನನ್ನ ಆತ್ಮಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ಅತಿಥಿ ಉಪನ್ಯಾಸಕಿ ಹೇಳಿದ್ದಾರೆ.ಕಳೆದ ಮೂರು ವರ್ಷಗಳಿಂದ ನಾನು ಜೈನ್ ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದೆ. ಅಲ್ಲಿಂದ ಇಲ್ಲಿವರೆಗೂ ಏನೂ ತೊಂದರೆ ಆಗಿರಲಿಲ್ಲ. ಆದರೆ ನಿನ್ನೆ ಪ್ರಾಂಶುಪಾಲರು ಕರೆದು ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತದ ಬಟ್ಟೆ ಧರಿಸಿ ಪಾಠ ಮಾಡಬಾರದು ಎಂದು ಆದೇಶ ಬಂದಿದೆ ಎಂದು ಹೇಳಿದ್ದರು.
ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ಅನುಮತಿ ಇಲ್ಲದಿರುವ ಸಂಬಂಧ ಅನೇಕ ಮಂದಿ ತರಗತಿಗಳಿಗೆ ಬಹಿಷ್ಕಾರ ಹಾಕಿ ಕಾಲೇಜು ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾಗುತ್ತಿದ್ದಾರೆ.
ಹಿಜಾಬ್ ವಿವಾದ ಮತ್ತಷ್ಟು ತಾರಕಕ್ಕೇರುತ್ತಿದೆ. ಹೈಕೋರ್ಟ್ ವಿಚಾರಣೆಯನ್ನು ನಡೆಸುತ್ತಿದ್ದು ಅಂತಿಮ ತೀರ್ಪನ್ನು ಮುಂದೂಡುತ್ತಲೇ ಬಂದಿದೆ.ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡದ ಕಾರಣ ಚಾಂದಿನಿ ರಿಸೈಸ್ ಅವರು ವೀಡಿಯೋ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಹಿಜಾಬ್ ವಿವಾದ: ತುಮಕೂರು ಜೈನ್ ಕಾಲೇಜಿನ ಅತಿಥಿ ಉಪನ್ಯಾಸಕಿ ರಾಜಿನಾಮೆ !#ಹಿಜಾಬ್ #HijabisOurRight #HijabControversy #HijabRow #jaincollage #guestlecture #tumkur #resigned #secularnews #secularkannada #seculartv @SecularTVKannad pic.twitter.com/zGWdOXBnjK
— Secular Tv ᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠ (@SecularTVKannad) February 18, 2022