Hijab Row Live Updates: (ಫೆ.18):ಹಿಜಾಬ್ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ಎಜಿ ನಾವದಗಿ ವಾದ ಮಂಡನೆ ಮಾಡದರು. ಹಿಜಾಬ್ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ಮುಂದುವರೆದು, ನಿನ್ನೆ ಅರ್ಜಿದಾರರಪರ ವಾದ ಮಂಡನೆಯಾಯಿತು. ಇಂದು ಸರ್ಕಾರದ ಪರ ವಾದ ಮಂಡನೆ ನೆಡೆಯಿತು. ವಾದ ಪ್ರತಿವಾದಗಳನ್ನು ಗಮನಿಸಿ ಹೈಕೋರ್ಟ್ ಮುಂದಿನ ಸೋಮವಾರ ಫೆ.21 ರಂದು ವಿಚಾರಣೆಯನ್ನು ಮುಂದೂಡಿತು.
🔴ಹಿಜಾಬ್ ವಿಚಾರಣೆಯನ್ನು ಫೆ.21 ಕ್ಕೆ ಮುಂದೂಡಿಕೆ:
ಉರ್ದು ಶಾಲೆಗಳಲ್ಲೂ ಹಿಜಾಬ್ ಧರಿಸುವುದು ನಿರ್ಬಂಧಿಸಲಾಗಿದೆ.ಹಿಜಾಬ್ ಧರಿಸಿ ಬಂದರೆ ಕಾಲೇಜಿನೊಳಗೆ ಪ್ರವೇಶವಿಲ್ಲ. . ಈ ಬಗ್ಗೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಅರ್ಜಿದಾರರ ಪರ ಮೊಹಮ್ಮದ್ ತಾಹೀರ್ ವಾದ ಮಂಡಿಸಿದರು.
ಎಜಿ ಅವರು ಪ್ರತಿಕ್ರಿಯೆ ನೀಡಿ, ದಾಖಲೆಗಳೊಂದಿಗೆ ಲಿಖಿತವಾಗಿ ಮಾಹಿತಿ ನೀಡಲಿ, ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುತ್ತೇವೆ ಎಂದರು.ಹೈಕೋರ್ಟ್ ಆದೇಶದ ಹೆಸರಲ್ಲಿ ಹಿಜಾಬ್ ನಿರ್ಬಂಧಿಸಲಾಗುತ್ತಿದೆ ಎಂದು ಮೊಹಮ್ಮದ್ ತಾಹೀರ್ ಹೇಳಿದಕ್ಕೆ. ಅಗತ್ಯ ಮಾಹಿತಿ ಒದಗಿಸಿದರೇ ಎಜಿ ಗಮನಹರಿಸುತ್ತಾರೆ ಎಂದರು.ಸೂಕ್ತ ಅರ್ಜಿ ಸಲ್ಲಿಸದೇ ನಿರ್ದೇಶನ ನೀಡುವುದು ಹೇಗೆ ಎಂದು ಸಿಜೆ ಕೇಳಿದ್ದು, ವಿಚಾರಣೆ ಫೆ.21 ಕ್ಕೆ ಮುಂದೂಡಿಕೆ ಮಾಡಲಾಗಿದೆ.
________________________________________________
🔴 ಎಜಿ ನಾವದಗಿ ವಾದ ಮಂಡನೆ
ಹಿಜಾಬ್ ಧಾರ್ಮಿಕ ಸ್ವಾತಂತ್ರ್ಯದ ವಿಚಾರವಷ್ಟೇ ಅಲ್ಲ. ಆತ್ಮಸಾಕ್ಷಿಯ ಸ್ವಾತಂತ್ರ್ಯದ ಪ್ರಶ್ನೆಯೂ ಆಗಿದೆ. ಅರ್ಜಿದಾರರ ಪರ ವಕೀಲ ಯೂಸುಫ್ ರ ವಾದ ಹೀಗಿದೆ ಎಂದು ಹೇಳಿದ್ದು, ಅರ್ಜಿದಾರರ ಪ್ರಶ್ನೆಗೆ ನಿಮ್ಮ ಉತ್ತರವೇನು ಎಂದು ಸಿಜೆ ಕೇಳಿದ್ದಾರೆ.
ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ವಿರುದ್ಧವಾಗಿದೆಯೇ ಪರಿಶೀಲಿಸಬೇಕು. ಧಾರ್ಮಿಕ ಸ್ವಾತಂತ್ರ್ಯವನ್ನು ಈ 3 ರೀತಿಯಲ್ಲಿ ಪರೀಕ್ಷಿಸಬೇಕು. ಕೋವಿಡ್ ವೇಳೆಯಲ್ಲಿ ಎಲ್ಲಾ ಚರ್ಚ್, ದೇವಾಲಯ ಮಸೀದಿ ಮುಚ್ಚಲಾಗಿತ್ತು. ಸಾರ್ವಜನಿಕ ಆರೋಗ್ಯದ ಕಾರಣದಿಂದ ಇಂತಹ ನಿರ್ಬಂಧಕ್ಕೆ ಅವಕಾಶವಿದೆ. ಆತ್ಮಸಾಕ್ಷಿಯ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿದೆ. ಕೆಲವರಿಗೆ ಯಾವುದೇ ಶಕ್ತಿಯ ಬಗ್ಗೆಯೇ ನಂಬಿಕೆ ಇರದಿರಬಹುದು. ದೇವರಿಲ್ಲ ಎಂಬ ಭಾವನೆಗೂ ಸಂವಿಧಾನದಲ್ಲಿ ಸ್ಥಾನವಿದೆ ಎಂದು ಎಜಿ ವಾದ ಮಂಡಿಸಿದ್ದಾರೆ.
____________________________________________
🔴 ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ
ಒಂದು ಬಾರಿ ಒಂದೊಂದು ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರಾದವರನ್ನು ಸಮಿತಿ ಅಧ್ಯಕ್ಷರಾಗಿ ಮಾಡಬಹುದೇ? ಅವರ ರಾಜಕೀಯ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ? ರಾಜ್ಯ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಕೇಳಿದ್ದಾರೆ.
ಈ ಪಕ್ಷ ಆ ಪಕ್ಷ ಎಂದು ಹೇಳುತ್ತಿಲ್ಲ. ಶಾಸಕ ಅಧ್ಯಕ್ಷರಾದರೆ ಉಳಿದ ಸದಸ್ಯರ ಕಥೆಯೇನು. ಕಾಫಿ ಟೀ ಕುಡಿಯುವುದಲ್ಲದೇ ಅಡಳಿತದಲ್ಲೂ ಭಾಗವಹಿಸಲು ಸಾಧ್ಯವೇ ಎಂದು ಸರ್ಕಾರಕ್ಕೆ ಕೇಳಿದಾಗ ಇದು ಚಿಂತಿಸಬೇಕಾದ ವಿಷಯವೇ ಎಂದು ಎಜಿ ಅವರು ಹೇಳಿದರು.
ಸಮಿತಿಯ ಸದಸ್ಯರನ್ನು ಯಾರು ನೇಮಿಸುತ್ತಾರೆ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದರು. ಸಮವಸ್ತ್ರದ ವಿಚಾರವಾಗಿ ಇದರ ಮೊದಲು ಯಾವುದೇ ವಿವಾದ ಆಗಿರಲಿಲ್ಲ. ಯಾವುದೇ ವಿದ್ಯಾರ್ಥಿಗಳೂ ದೂರು ನೀಡಿರಲಿಲ್ಲ ಎಂದು ಎಜಿ ಉತ್ತರಿಸಿದರು.
______________________________________________
🔴 ಸರ್ಕಾರದ ವ್ಯವಹರಣೆ ನಿಯಮದಡಿಯೇ ಸುತ್ತೋಲೆ ಹೊರಡಿಸಲಾಗುತ್ತದೆ: ಎಜಿ ವಾದ ಮುಂದುವರಿಕೆ
ಅಧೀನ ಕಾರ್ಯದರ್ಶಿ ಸಚಿವರ ಅನುಮೋದನೆ ನಂತರವೇ ಆದೇಶ ಹೊರಡಿಸುತ್ತಾರೆ. ಹೀಗಾಗಿ ಇದನ್ನು ಸರ್ಕಾರದ ಆದೇಶ ಎಂದು ಪರಿಗಣಿಸಬಹುದು ಎಂದು ಎಜಿ ನಾವದಗಿ ಹೇಳಿದರು. ಸರ್ಕಾರದ ಕಾರ್ಯನಿರ್ವಹಣೆ ನಿಯಮದಡಿ ಆದೇಶ ಹೊರಡಿಸಬಹುದೇ? ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಬಹುದೇ ಪರಿಶೀಲಿಸಿ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ. ನಾನು ಮೂಲ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ನೀಡುತ್ತೇನೆ. ಸಾಮಾನ್ಯವಾಗಿ ಸರ್ಕಾರದ ವ್ಯವಹರಣೆ ನಿಯಮದಡಿಯೇ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಎಜಿ ಹೇಳಿದ್ದಾರೆ.
_______________________________________________
🔴 ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮವಸ್ತ್ರ ತರಲಾಗಿದೆ ಎಜಿ ವಾದ
ಒಂದು ಕಡೆ ಸಮವಸ್ತ್ರದ ಬಗ್ಗೆ ಉನ್ನತ ಸಮಿತಿ ರಚಿಸುತ್ತೇವೆಂದಿದ್ದೀರಿ, ಮತ್ತೊಂದು ಕಡೆ ಸಮವಸ್ತ್ರದ ಬಗ್ಗೆ ಸಮಿತಿಗೆ ನಿರ್ಧಾರ ನೀಡಿದ್ದೀರಿ. ಇದು ಸರ್ಕಾರದ ವಿರೋದಾಭಾಸದ ಹೇಳಿಕೆಯಲ್ಲವೇ ಎಂದು ಸಿಜೆ ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ಎಜಿ ಅವರು, ಪರಿಸ್ಥಿತಿಯ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮೊದಲಿಗೆ ಸರ್ಕಾರಕ್ಕೆ ಸಮವಸ್ತ್ರಸಂಹಿತೆ ತರುವ ಉದ್ದೇಶವಿರಲಿಲ್ಲ. ಶಿಕ್ಷಣ ಕಾಯ್ದೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಲಾಗಿದೆ ಎಂದು ಎಜಿ ವಾದ ಮಂಡಿಸಿದ್ದಾರೆ.
014 ರಿಂದಲೂ ಕಾಲೇಜು ಅಭಿವೃದ್ದಿ ಸಮಿತಿಗಳಿವೆ. ಈವರೆಗೆ ಯಾವುದೇ ಕಾಲೇಜುಗಳು ಇದನ್ನು ಪ್ರಶ್ನಿಸಿಲ್ಲ. ವಿದ್ಯಾರ್ಥಿಗಳೂ ಈವರೆಗೆ ಕಾಲೇಜು ಅಭಿವೃದ್ದಿ ಸಮಿತಿಯ ರಚನೆ ಪ್ರಶ್ನಿಸಿಲ್ಲ.
ಶಿಕ್ಷಣ ಕಾಯ್ದೆಯ ಸೆಕ್ಷನ್ನ್ನು ಎಜಿ ಓದಿ, ಶಾಲೆಗಳಿಗೆ ನಿರ್ವಹಣಾ ಸಮಿತಿಯಿದೆ. ಕಾಲೇಜಿಗೆ ನಿರ್ವಹಣಾ ಸಮಿತಿ ಇಲ್ಲ. ನಿಯಮ 11 ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರದ ಅಧಿಕಾರ ನೀಡಲಾಗಿದೆ. ಕಾಲೇಜುಗಳಲ್ಲೂ ಶಿಕ್ಷಣ ಕಾಯ್ದೆ ಜಾರಿಗೊಳಿಸುವ ಉದ್ದೇಶದಿಂದ ಆದೇಶಿಸಲಾಗಿದೆ.
__________________________________________________
🔴 ಹೈಕೋರ್ಟ್ ತೀರ್ಪುಗಳ ಉಲ್ಲೇಖದ ಅಗತ್ಯವೇನು? ಸಿಜೆ ಪ್ರಶ್ನೆ
ಸರ್ಕಾರಿ ಆದೇಶದಲ್ಲಿ ನೇರವಾಗಿ ಹೇಳಿಲ್ಲ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರ ಧಾರ್ಮಿಕ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸಿರಲಿಲ್ಲ ಎಂದು ಎಜಿ ಹೇಳಿದ್ದು, ಸರ್ಕಾರ ಕಾಲೇಜು ಅಭಿವೃದ್ದಿ ಸಮಿತಿಗೆ ಅಧಿಕಾರ ನೀಡಿದೆ ಎಂದಿದ್ದೀರಿ ಆದರೂ ಹೈಕೋರ್ಟ್ ತೀರ್ಪುಗಳ ಉಲ್ಲೇಖದ ಅಗತ್ಯವೇನಿತ್ತು ಎಂದು ಸಿಜೆ ಪ್ರಶ್ನಿಸಿದ್ದಾರೆ. ಸರ್ಕಾರದ ಆದೇಶದಲ್ಲಿರುವ ವಿವರಣೆ ಉಪೇಕ್ಷಿಸಿ ಸಮಿತಿ ನಿರ್ಧರಿಸಬಹುದೇ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಕೇಳಿದ್ದಾರೆ. ನಾವು ಆ ತೀರ್ಪುಗಳನ್ನು ಉಲ್ಲೇಖಿಸದೇ ಇರಬಹುದಿತ್ತು. ಅಧಿಕಾರಿಗಳು ಏಕೆ ಉಲ್ಲೇಖಿಸಿದರೋ ತಿಳಿದಿಲ್ಲ. ಆದರೆ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ. ಸಮವಸ್ತ್ರದ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ ಎಂದು ಎಜಿ ಹೇಳಿದ್ದಾರೆ. ಸರ್ಕಾರದ ಆದೇಶಗಳು ವೈನ್ನಂತಲ್ಲ, ಹಳೆಯದಾದಂತೆ ಅವು ಉತ್ತಮಗೊಳ್ಳುವುದಿಲ್ಲ ಎಂದು ನ್ಯಾ.ಕೃಷ್ಣ ದೀಕ್ಷಿತ್ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ್ದಾರೆ.
_______________________________________________
🔴 ನಾವದಗಿ ವಾದಕ್ಕೆ ಪ್ರಶ್ನಿಸಿದ ನ್ಯಾ.ಕೃಷ್ಣ ದೀಕ್ಷಿತ್
ಎಜಿ ನಾವದಗಿ ವಾದ ಮಂಡಿಸಿ, ನಾವು ಹಿಜಾಬ್ ವಿಚಾರವನ್ನೂ ಸಮಿತಿಗೆ ನೀಡಿದ್ದೇವೆ. ಇದಕ್ಕೆ ಪ್ರಶ್ನಿಸಿದ ನ್ಯಾ ದೀಕ್ಷಿತ್ ಅವರು, ಒಂದು ವೇಳೆ ಕಾಲೇಜು ಅಭಿವೃದ್ದಿ ಸಮಿತಿ ಅನುಮತಿ ನೀಡಬಹುದು ಆದರೆ ಹಿಜಾಬ್ ಗೆ ಅನುಮತಿ ನೀಡಿದರೆ ನಿಮಗೆ ಆಕ್ಷೇಪವಿಲ್ಲವೇ ಎಂದು ಸಿಜೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಜಿ ಅವರು, ಅಂತಹ ದೂರುಗಳು ಬಂದರೆ ಸರ್ಕಾರ ಪರಿಗಣಿಸುತ್ತದೆ ಎಂದರು.
ಎಜಿ ಅವರ ಉತ್ತರಕ್ಕೆ ಮರು ಪ್ರಶ್ನಿಸಿದ ನ್ಯಾ.ದೀಕ್ಷಿತ್ ಅವರು, ಹಾಗಾದರೇ ಅರ್ಜಿಗಳು ದಾಖಲಾಗಬೇಕೆಂದು ಬಯಸುತ್ತೀರಾ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ತಿಳಿಸಿತು.
____________________________________________
🔴 ಎಜಿ ನಾವದಗಿ ವಾದ ಮಂಡನೆ
ಸಮಾನತೆ, ಶಿಸ್ತಿಗೆ ಪೂರಕವಾದ ಸಮವಸ್ತ್ರ ಧರಿಸಲು ಸೂಚಿಸಲಾಗಿದೆ. ಸರ್ಕಾರದ ಆದೇಶವನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗಿದೆ. ಯಾವುದೇ ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯಿಂದ ಸಮಸ್ಯೆ ಆಗಿರಲಿಲ್ಲ ಎಂದು ನಾವದಗಿ ವಾದ ಮಂಡಿಸಿದರು.
____________________________________________
🔴 ಎಜಿ ನಾವದಗಿ ವಾದ ಮಂಡನೆ
1985 ರಿಂದಲೂ ಸಮವಸ್ತ್ರ ಸಂಹಿತೆ ಪಾಲಿಸುತ್ತಿರುವ ಹಿನ್ನೆಲೆ, ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಮಾತ್ರ ಧರಿಸುವಂತೆ ಸೂಚಿಸಲಾಯಿತು. ಇದಕ್ಕೆ ವಿದ್ಯಾರ್ಥಿನಿಯರು, ಅವರ ಪೋಷಕರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು.
ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿತು. ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ನಂತರ ಕಾಲೇಜು ಅಭಿವೃದ್ದಿ ಸಮಿತಿ ಮತ್ತೊಂದು ನಿರ್ಣಯ ಅಂಗೀಕರಿಸಿತು. ಹಿಂದೆ ಇದ್ದಂತೆಯೇ ಸಮವಸ್ತ್ರ ಸಂಹಿತೆ ಮುಂದುವರಿಸಲು ನಿರ್ಧರಿಸಲಾಯಿತು.
ಸರ್ಕಾರ ಈ ಬಗ್ಗೆ ಆದೇಶ ಹೊರಡಿಸುವ ಮೊದಲೇ ರಿಟ್ ಸಲ್ಲಿಸಲಾಗಿತ್ತು ಅರ್ಜಿ ಸಲ್ಲಿಸಿದರೂ ಕೆಲ ಕಾಲೇಜಿನಲ್ಲಿ ಪ್ರತಿಭಟನೆ ಮುಂದುವರಿಯಿತು. ಕರ್ನಾಟಕದ ಉಡುಪಿಯ ಪಿಯು ಕಾಲೇಜಿನಲ್ಲಿ ಇದರ ಬಗ್ಗೆ ವಿವಾದ ಬುಗಿಲೆಬ್ಬಿತು.
ಕಳೆದ ಫೆ.5 ರಂದು ಆದೇಶ ಹೊರಡಿಸಿತು. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು ಎಂದು ವಾದ ಮಂಡಿಸಿದರು. ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು ಎಂದು ಹೇಳಿದರು.
ವಿದ್ಯಾವಿಕಾಸ ಯೋಜನೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ಸಮವಸ್ರ ನೀಡುತ್ತದೆ. ಪಿಯು ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಸಮವಸ್ತ್ರ ನಿಗದಿಪಡಿಸಬೇಕು. ಸಮವಸ್ತ್ರ ನಿಗದಿಪಡಿಸದ ಕಾಲೇಜುಗಳಲ್ಲಿ ಗೌರವಯುತ ಸಮವಸ್ತ್ರ ಧರಿಸಬೇಕು ಎಂದು ವಾದ ಮಂಡಿಸಿದರು.
____________________________________________
🔴 ನ್ಯಾ ದಿಕ್ಷಿತ್ ಅವರ ಪ್ರಶ್ನೆಗೆ ಉತ್ತರಿಸಿದ ಎಜಿ ನಾವದಗಿ
ಈ ಪ್ರಶ್ನೆಗೆ ಉತ್ತರಿಸಿದ ಎಜಿ ಅವರು,ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ ಎಂದರು. ಸರ್ಕಾರ ಫೆ.5 ರ ಆದೇಶ ಹೊರಡಿಸುವ ಕಾರಣ ವಿವರಿಸುತ್ತೇನೆ. ಶಾಲಾ ಅಭಿವೃದ್ದಿ ಸಮಿತಿಯಲ್ಲಿ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ. ಇದರಲ್ಲಿ ಶಾಸಕರು ಸೇರಿದಂತೆ, ಉಪನ್ಯಾಸಕರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಪಂಗಡಗಳ ಸದಸ್ಯರು ಈ ಸಮಿತಿಯಲ್ಲಿರುತ್ತಾರೆ.
_______________________________________________
🔴 ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದಿಯೇ: ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ?
19.3.2013 ರಲ್ಲೇ ಸಮವಸ್ತ್ರದ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಕಾಲೇಜು ಅಭಿವೃದ್ದಿ ಸಮಿತಿ 2013 ರಲ್ಲೇ ನಿರ್ಣಯ ಅಂಗೀಕರಿಸಿದೆ. ಉಡುಪಿಯ ಕಾಲೇಜಿನ ಅಭಿವೃದ್ಧಿ ಸಮಿತಿ. ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆಯೇ. ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
________________________________________________
🔴 ಹಿಜಾಬ್ ವಿಚಾರದಲ್ಲಿ ಸರ್ಕಾರ ಆದೇಶದ ಹಿಂದಿನ ಉದ್ದೇಶವೇನು? ಸಿಜೆ ಪ್ರಶ್ನೆ
ಶಬರಿ ಮಲೆ, ಶಾಯಿರಾ ಬಾನು ಕೇಸ್ನ ಆಧಾರದಲ್ಲಿ ನಿರ್ಧರಿಸಬೇಕು. ಹಿಜಾಬ್ ಅತ್ಯಗತ್ಯವೇ ಅಲ್ಲವೇ ನಿರ್ಧರಿಸಬೇಕು. ಸಂವಿಧಾನದಡಿ ನೈತಿಕವಾಗಿದೆಯೇ, ವೈಯಕ್ತಿಕವಾಗಿ ಗೌರವಯುತವಾಗಿಯೇ. ಹಿಜಾಬ್ ಈ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಬೇಕು. ಸರ್ಕಾರದ ಆದೇಶದ ಹಿಂದಿನ ಉದ್ದೇಶವೇನು ಎಂದು ಸಿಜೆ ಕೇಳಿದ್ದಾರೆ.
__________________________________________________
🔴 ಸರ್ಕಾರದ ಪರ ವಾದ ಮಂಡಿಸಲಿರುವ ವಕೀಲ ನಾವದಗಿ
ಸರ್ಕಾರದ ಪರ ವಕೀಲರಾದ ಪ್ರಭುಲಿಂಗ್ ನಾವದಗಿ ವಾದಮಂಡನೆ ಮಾಡಲಿದ್ದು, ಪ್ರತಿವಾದಿ 1 ರಿಂದ 4 ರ ಪರವಾಗಿ ನಾನು ವಾದ ಮಂಡಿಸುತ್ತಿದ್ದೇನೆ. ಸರ್ಕಾರದ ಫೆ.5ರ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿ, ಶಿಕ್ಷಣ ಕಾಯ್ದೆಯಡಿ ಈ ಆದೇಶವನ್ನು ಸರ್ಕಾರ ಹೊರಡಿಸಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಇದು ಸರ್ಕಾರದ ನಿಲುವು. ಹಿಜಾಬ್ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಿದ್ದಾರೆ.
___________________________________________________
🔴 ಅರ್ಜಿ ಸಲ್ಲಿಸುವುದು ಆಘಾತಕಾರಿ ವಿಚಾರ
ಅಧ್ಯಕ್ಷರಿಗೆ ಸಂಸ್ಥೆ ರಿಟ್ ಅರ್ಜಿ ಸಲ್ಲಿಸಲು ಒಕ್ಕೂಟ ಅನುಮತಿ ನೀಡಿದೆಯೇ ಎಂದು ಸಿಜೆ ಪ್ರಶ್ನಿಸಿದ್ದಾರೆ. ಅನುಮತಿ ನೀಡದೇ ಹೇಗೆ ಒಕ್ಕೂಟದ ಪರ ಅರ್ಜಿ ಸಲ್ಲಿಸಿದ್ದೀರಿ ಎಂದು ಸಿಜೆ ಕೇಳಿದರು. ಈ ಬಗ್ಗೆ ಉತ್ತರಿಸಿ ನಿರ್ಣಯ ಹೈಕೋರ್ಟ್ ಗೆ ಸಲ್ಲಿಸಿಲ್ಲ ಎಂದು ಜಿ.ಆರ್.ಮೋಹನ್ ಹೇಳಿದರು. ಈ ರೀತಿಯ ಅರ್ಜಿಗಳು ಸಲ್ಲಿಸುವುದು ಅಘಾತಕಾರಿ ವಿಷಯ ಎಂದು ಸಿಜೆ ಹೇಳಿದರು.
___________________________________________________
🔴 ಪ್ರತಿವಾದಗಳನ್ನು ಜನರು ಯೂಟ್ಯೂಬ್‌ನಲ್ಲಿ ಕೇಳಲಿ: ಸಿಜೆ
ಪ್ರತಿವಾದಿಗಳ ವಾದ ಮಂಡನೆಯನ್ನೂ ಜನರು ಯೂಟ್ಯೂಬ್ ನಲ್ಲಿ ಕೇಳಲಿ ಬಿಡಿ ಎಂದು ಸಿಜೆ ಹೇಳಿದರು. ಹಿಜಾಬ್ಧ ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಹೋದರೇ ಪ್ರವೇಶ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರಿಂದ ವಾದ ಮಂಡನೆ.
ಸಿಜೆ ಉತ್ತರಿಸಿ, ಪೊಲೀಸ್ ಅಲ್ಲದ ವ್ಯಕ್ತಿಗಳು ಅಡ್ಡಿಪಡಿಸಿದರೆ ಪೊಲೀಸ್ ದೂರು ನೀಡಿ ಎಂದು ಸಿಜೆ ಹೇಳಿದರು. ಸಮರ್ಪಕ ಮಾಹಿತಿಯಿಲ್ಲದೇ ನೀವು ಅರ್ಜಿ ಸಲ್ಲಿಸಿದ್ದೀರಿ ಎಂದು ಸಿಜೆ ಪ್ರಶ್ನಿಸಿದ್ದಾರೆ.ಈ ರೀತಿಯ ಅರ್ಜಿಗಳಿಂದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದು ಸಿಜೆ ಹೇಳಿದರು.
____________________________________________________
🔴 ಹಿಜಾಬ್ ಅರ್ಜಿ ವಿಚಾರಣೆ:
ಹಿಜಾಬ್ ಅರ್ಜಿ ವಿಚಾರಣೆ ಆರಂಭವಾಗಿದ್ದು, 3 ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಸಿಜೆ ಹೇಳಿದ್ದಾರೆ. ಹೊಸ ಅರ್ಜಿಗಳಲ್ಲಿ 10 ನಿಮಿಷ ನೀಡಲಾಗುವುದು.ದುಪಟ್ಟಾವನ್ನು ಹಿಜಾಬ್ ನಂತರ ಬಳಸಲು ಅನುಮತಿ ಕೋರಿಕೆ ಈ ಅರ್ಜಿ ಸಂಬಂಧ ವಿಚಾರಣೆ ನಡೆಸಲು ಹಿರಿಯ ವಕೀಲ ರವಿವರ್ಮಕುಮಾರ್ ಮನವಿ ಮಾಡಿದರು.