ಮೈಸೂರು: Robot Food Servant: ದೂರದ ಮಹಾನಗರಗಳಲ್ಲಿ ರೋಬೋಗಳೇ ಆರ್ಡರ್ (order) ಕೊಟ್ಟ ತಕ್ಷಣ ಟೇಬಲ್ (table) ಮುಂದೆ ಊಟ, ತಿಂಡಿ ತಂದುಕೊಡುತ್ತವೆ ಎಂಬುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಇದೀಗ ಅದೇ ತಂತ್ರಜ್ಞಾನ ಮೊಟ್ಟ ಮೊದಲ ಬಾರಿಗೆ ಮೈಸೂರಿಗೆ (Mysuru) ಕಾಲಿಟ್ಟಿದೆ.
ಇಲ್ಲಿನ ಸಿದ್ದಾರ್ಥ ಹೋಟೆಲ್‌ನಲ್ಲಿ ಈ ಹೊಸ ತಂತ್ರಜ್ಞಾನವನ್ನು ಮೊಟ್ಟ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಹೊಸದಿಲ್ಲಿ ಮೂಲದ ಕಾಂಪೋಂಟ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ (Robot) ರೋಬೋವನ್ನು ಹೋಟೆಲ್‌ನಲ್ಲಿ ಸೇವೆಗೆ ಸಜ್ಜುಗೊಳಿಸಿರುವ ಆಡಳಿತ ಮಂಡಳಿ ಅದಕ್ಕೆ ಸುಂದರಿ ಎನ್ನುವ ಹೆಸರನ್ನಿಟ್ಟಿದೆ. ಜೊತೆಗೆ ಕೆಂಪು ರೇಶ್ಮೆ ಸೀರೆ, ಬಿಂದಿ, ಮುತ್ತಿನ ಹಾರವನ್ನು ಕೊರಳಿಗೆ ಹಾಕಿ ಗ್ರಾಹಕರ ಗಮನ ಸೆಳೆಯುವ ರೀತಿಯಲ್ಲಿ ರೋಬೋ ಅಲಂಕಾರ ಮಾಡಲಾಗಿದೆ.

ರೋಬೋಟ್ ವಿಶೇಷತೆ ಏನು?
ಸೆನ್ಸಾರ್ ಆಧಾರದಲ್ಲಿ ಹೋಟೆಲ್‌ನಲ್ಲಿ ಎಲ್ಲ ಟೇಬಲ್‌ಗಳ ಬಳಿ ಮ್ಯಾಗ್ನೆಟಿಕ್ ಸ್ಟ್ರ್ತ್ಯೆಪ್ ಅನ್ನು ಅಳವಡಿಸಿದ್ದು, ಇದರ ಮೇಲೆ ರೋಬೋ ಸಂಚಾರ ಮಾಡಲಿದೆ. ಹೋಟೆಲ್‌ನ 20 ಟೇಬಲ್‌ಗಳಿಗೆ ಸದ್ಯ ಸಂಪರ್ಕ ಕಲ್ಪಿಸಲಾಗಿದ್ದು, ಗ್ರಾಹಕರು ಬಂದ ತಕ್ಷಣ ರೋಬೋ ನೀರನ್ನು (Water) ತೆಗೆದುಕೊಂಡು ಹೋಗಿ ಆರ್ಡರ್ ಪಡೆದುಕೊಳ್ಳಲಿದೆ. ಹೋಟೆಲ್‌ನಲ್ಲಿ ಆ ದಿನದ ವಿಶೇಷ ಏನು? ಏನೇನು ಸಿಗುತ್ತದೆ? ಎನ್ನುವ ಮೆನು ಮಾಹಿತಿಯನ್ನು ರೋಬೋ ಗ್ರಾಹಕರ ಮುಂದೆ ಹೇಳಲಿದೆ. ನಂತರ ಆರ್ಡರ್ ಸ್ವೀಕರಿಸಿ, ಅಚ್ಚುಕಟ್ಟಾಗಿ ಕೊಟ್ಟ ಆರ್ಡರ್‌ಅನ್ನು ಸರಿಯಾದ ಟೇಬಲ್‌ಗೆ ತಂದು ತಲುಪಿಸಲಿದೆ.
ರೋಬೋ ಕೈನಲ್ಲಿ ಎರಡು ಟ್ರೇಗಳನ್ನು ಅಳವಡಿಸಲಾಗಿದ್ದು, ಅವುಗಳಲ್ಲಿ ಗರಿಷ್ಠ 10 ಕೆಜಿ ತೂಕದ ವಸ್ತುಗಳನ್ನು ಇಡಬಹುದಾಗಿದೆ. ಒಮ್ಮೆ 4 ಗಂಟೆಗಳ ಕಾಲ ಬ್ಯಾಟರಿ ರೀಚಾರ್ಚ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಈ ರೋಬೋ ಹೊಂದಿದ್ದು, ೨೦ ಟೇಬಲ್‌ಗಳಿಗೆ ಸೇವೆ ನೀಡುವ ಶಕ್ತಿ ಹೊಂದಿದೆ. ಮೈಸೂರಿನ ಬಗ್ಗೆಯೂ ಮಾಹಿತಿ ಹೋಟೆಲ್‌ಗೆ ಆಗಮಿಸಿದ ಗ್ರಾಹಕರು ಊಟ, ತಿಂಡಿಯ ಜೊತೆಗೆ ಅಗತ್ಯವಾದ ಸ್ಥಳೀಯ ಮಾಹಿತಿಗಳನ್ನೂ ಈ ರೋಬೋ ಮೂಲಕ ಪಡೆದುಕೊಳ್ಳಬಹುದು.
ಆಹಾರದ ಜೊತೆ ಪ್ರವಾಸಿ ತಾಣಗಳ ಮಾಹಿತಿ
ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು, ಬಸ್, ರೈಲು, (Bus, train, auto) ಆಟೋಗಳ ಮಾಹಿತಿ, (Root map) ರೂಟ್ ಮ್ಯಾಪ್, ಮೈಸೂರಿನ ಸಂಕ್ಷಿಪ್ತ ಇತಿಹಾಸವನ್ನು (History) ರೋಬೋದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮಾಹಿತಿ ಒದಗಿಸಲಿದೆ. ಈ ಮೂಲಕ ಕೇವಲ ಊಟ, ತಿಂಡಿಯನ್ನು ನೀಡುವುದು ಮಾತ್ರವಲ್ಲದೇ, ಪ್ರವಾಸಿಗರಿಗೆ ಅಗತ್ಯವಾದ ಸೇವೆಗಳನ್ನೂ ಒದಗಿಸಲಿದೆ. ಬಹುಮುಖಿಯಾಗಿ ಉಪಯೋಗಕ್ಕೆ ಬರುವ ಈ ರೋಬೋ, ಟೇಬಲ್‌ಗಳ ಮೇಲೆ ಇರುವ ತಟ್ಟೆ, ಲೋಟಗಳನ್ನೂ ತೆಗೆದುಕೊಂಡು ವಾಶ್ ಬೆಸನ್‌ಗೆ ಹಾಕುವುದು, ಬಿಲ್ ನೀಡುವ ಕೆಲಸವನ್ನೂ ನಿರ್ವಹಿಸಲಿದೆ.
ಹೋಟೆಲ್ ಉದ್ಯಮದಲ್ಲೂ ಹೊಸ ತಂತ್ರಜ್ಞಾನ ಅಗತ್ಯವಾಗಿ ಬೇಕಿದೆ. ಇಂದು ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ದೊರಕುತ್ತಿದೆ. ಹೀಗಿರುವಾಗ ಮುಂದೆ ಹೋಟೆಲ್‌ಗಳಲ್ಲಿ ಸರ್ವ್ ಮಾಡಲು ಕೆಲಸಗಾರರು ಸಿಗುವುದು ಕಷ್ಟ. ಹೀಗಾಗಿ ನಾವು ರೋಬೋಗಳ ಮೊರೆ ಹೋಗಿದ್ದೇವೆ. ಪ್ರಾಯೋಗಿಕವಾಗಿ ಒಂದು ರೋಬೋ ಅಳವಡಿಕೊಳ್ಳಲಾಗಿದ್ದು, ಇದರ ಯಶಸ್ಸನ್ನು ಆಧರಿಸಿ ಮತ್ತಷ್ಟು ರೋಬೋಗಳನ್ನು ಬಳಸಿಕೊಳ್ಳಲಾಗುವುದು. ಮೈಸೂರಿನಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರೋಂಗ ಮಾಡಿದ ಸಂತೋಷ ನಮಗೆ ಇದೆ. ಅಗತ್ಯಕ್ಕೆ ಅನುಗುಣವಾಗಿ ರೋಬೋವನ್ನು ಮತ್ತಷ್ಟು ಅಪ್‌ಗ್ರೇಡ್ ಮಾಡಲಾಗುವುದು.
ಪಿ.ವಿ.ಗಿರಿ, ಸಿದ್ದಾರ್ಥ ಹೋಟೆಲ್ ಅಧ್ಯಕ್ಷ
ಇದನ್ನೂ ಓದಿ:Temple Build:ಸ್ವಂತ ಹಣದಲ್ಲಿ ಹಿಂದೂ ದೇವಾಲಯ ಸ್ಥಾಪಿಸಿದ ಮುಸ್ಲಿಂ ಉದ್ಯಮಿ