Channaveera Kanavi: (ಫೆ.16): ಕವಿ ನಾಡೋಜ ಚೆನ್ನವೀರ ಕಣವಿ ಅವರು ಇಂದು ಅಸೌಖ್ಯದಿಂದ ನಿಧನರಾಗಿದ್ದಾರೆ. ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶ್ವಾಸಕೋಶದಲ್ಲಿರುವ ತೀವ್ರತೆ ಹೆಚ್ಚಾಗಿ ಎದೆಯ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿತ್ತು ಇದರಿಂದ ಉಸಿರಾಟದ ಶಕ್ತಿ ಕುಂಠಿತವಾಗಿತ್ತು. ಆದರೆ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ನಾಡೋಜ ಚನ್ನವೀರ ಕಣವಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಮತ್ತೆ ಆರೋಗ್ಯ ಕ್ಷೀಣಿಸುತ್ತಿತ್ತು ಚೆನ್ನವೀರ ಕಣವಿಯವರು ಕೋರನ ಸೋಂಕಿನಿಂದ ಬಳಲುತ್ತಿದ್ದರು.
ಚೆಂಬೆಳಕಿನ ಕವಿ ಎಂದೇ ಪ್ರಖ್ಯಾತವಾಗಿದ್ದ ನಾಡೋಜ ಚನ್ನವೀರ ಕಣವಿ ಅವರು ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಸಕ್ಕರೆಪ್ಪ, ಪಾರ್ವತವ್ವ ದಂಪತಿಗಳಿಗೆ 28-6-1928 ರಲ್ಲಿ ಜನಿಸಿದರು.
ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದು ಬಳಿಕ ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದರು. ಬಾಲ್ಯದಲ್ಲಿ ನಾಟಕದಲ್ಲಿ ಆಸಕ್ತಿ ಹೊಂದಿದ್ದ ಚೆನ್ನವೀರ ಕಣವಿ ಅವರು ಗಾಂಧಿ ಟೋಪಿ ನಾಟಕದಲ್ಲಿ ಅಭಿನಯಿಸಿದ್ದರು.
ಅನಂತರ ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು ಧಾರವಾಡದ ಮುರುಘಾಮಠದಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ, ಕರ್ನಾಟಕ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಚೆನ್ನವೀರ ಕಣವಿಯವ ಕವನಗಳನ್ನು ನೋಡಿ ಡಿವಿಜಿಯವರು ಮೆಚ್ಚಿಕೊಂಡಿದ್ದರು.
ಸದಾ ಲವಲವಿಕೆಯಿಂದ ಇರುತ್ತಿದ್ದ ಅವರು ಪತ್ನಿ ಶಾಂತಾದೇವಿ ನಿಧನ ಹೊಂದಿದ ಕತ್ತಲು ಆವರಿಸಿತ್ತು.ಪತ್ನಿಯೂ ಕೂಡಾ ಸಾಹಿತಿ ಕನ್ನಡದ ಖ್ಯಾತ ಕತೆಗಾರ್ತಿ ಆಗಿದ್ದರು. ಕಾವ್ಯಾಕ್ಷಿ ಭಾವಜೀವಿ ಆಕಾಶಬುಟ್ಟಿ ಮಧುಚಂದ್ರ ಮಣ್ಣಿನ ಮೆರವಣಿಗೆ ದಾರಿದೀಪ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ
ಚೆನ್ನವೀರ ಕಣವಿ ಅವರಿಗೆ ಸಂದ ಪ್ರಶಸ್ತಿಗಳು:
ಚೆನ್ನವೀರ ಕಣವಿ ಅವರು ರಚಿಸಿರುವ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1996 ರಲ್ಲಿ ಹಾಸನದಲ್ಲಿ ನಡೆದ 65 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. 2008ರ ಆಳ್ವಾಸ್ ನುಡಿಸಿರಿಯಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪಂಪ ಪ್ರಶಸ್ತಿ ಬಸವ ಗುರು ಕಾರುಣ್ಯ ಪ್ರಶಸ್ತಿ ನಾಡೋಜ ಪ್ರಶಸ್ತಿ ಕರ್ನಾಟಕ ಕವಿರತ್ನ ಪ್ರಶಸ್ತಿ ಅನಕೃ ನಿರ್ಮಾಣ ಪ್ರಶಸ್ತಿ ಹಾಗೂ 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಲಭಿಸಿತು.
ಕವಿ ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ
ಚಂಬೆಳಕಿನ ಕವಿ, ನಾಡೋಜ ಶ್ರೀ ಚೆನ್ನವೀರ ಕಣವಿ ಅವರ ನಿಧನಕ್ಕೆ ಮುಖ್ಯಮಂತ್ರಿ @BSBommai ಅವರಿಂದ ಸಂತಾಪ. pic.twitter.com/ibzfKR3o2V
— CM of Karnataka (@CMofKarnataka) February 16, 2022
ಇದನ್ನೂ ಓದಿ:Bappi Lahiri: ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ