ಮುಂಬೈ: ಫೆ.16 Bappi Lahiri: ಖ್ಯಾತ ಸಂಗೀತ ನಿರ್ದೇಶಕ ಹಿನ್ನೆಲೆ ಗಾಯಕರಾಗಿದ್ದ ಬಪ್ಪಿ ಲಹಿರಿ ಅವರು ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕೊಡುಗೆ ನೀಡಿದ್ದ ಗಾಯಕ ಬಪ್ಪಿ ಲಹಿರಿ ಅವರು ತಮ್ಮ ಹಾಡುಗಳಿಂದಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಬಪ್ಪಿ ಲಹಿರಿ ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಡಿಸ್ಕೋ ಡಾನ್ಸರ್, ರಾತ್ ಬಾಕಿ, ಬೊಂಬಾಯಿ ಸೆ ಆಯ ಮೆರ ದೋಸ್ತ್, ಸೇರಿದಂತೆ ಹಲವಾರು ಹಾಡುಗಳನ್ನು ನೀಡಿದ್ದರು.
ಕನ್ನಡ ಚಿತ್ರರಂಗಕ್ಕೆ ಕೊಡುಗೆ:
ಕನ್ನಡ ಚಿತ್ರರಂಗದಲ್ಲಿಯೂ ಪಪ್ಪಿ ಅವರು ಕೆಲಸ ಮಾಡಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಭವ್ಯ ಅಭಿನಯದ ಕೃಷ್ಣ ನೀ ಬೇಗನೆ ಬಾರೋ, ಆಫ್ರಿಕಾದಲ್ಲಿ ಶೀಲಾ, ಗುರು ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು ಹಾಗೂ ಇತ್ತೀಚಿಗೆ ಲವ್ ಇನ್ ಮಂಡ್ಯ ಚಿತ್ರಕ್ಕೆ ಹಾಡಿದ್ದರು. ಭಾರತಕ್ಕೆ ಡಿಸ್ಕೋ ಪರಿಚಯಿಸಿದ್ದ ಗಾಯಕರಲ್ಲಿ ಒಬ್ಬರಾಗಿದ್ದ ಬಪ್ಪಿ ಅವರು, ಬಪ್ಪಿ ಡಾ ಎಂದೇ ಖ್ಯಾತಿ ಪಡೆದಿದ್ದರು.
ಗಾಯಕರಲ್ಲದೆ ಪಪ್ಪಿ ಅವರು ನಿರ್ಮಾಪಕರಾಗಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. 2014ರಲ್ಲಿ ಬಿಜೆಪಿಗೆ ಸೇರಿದ್ದರು ಪಶ್ಚಿಮಬಂಗಾಳದ ಶ್ರೇರಾಂಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು. ಪಪ್ಪಿ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಬಂಗಾಳಿ ಹಿಂದಿ ಚಿತ್ರರಂಗ ಕಂಬನಿ ಮಿಡಿದಿದೆ.
ಇದನ್ನೂ ಓದಿ: Actor Deep Sidhu:ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ದುರ್ಮರಣ