ಜಾರ್ಖಂಡ್:(ಫೆ.16)Temple Build: ಭಾರತ ದೇಶವು ಶಾಂತಿ ಹಾಗೂ ಸಾಮಾಜಿಕ ಸೌಹಾರ್ಧತೆಗೆ (India’s social harmony) ಉದಾಹರಣೆ ಎಂಬುದಕ್ಕೆ ಆಗಾಗ್ಗೆ ನಡೆಯುವ ಅಪರೂಪದ ಘಟನೆಗಳು ಸಾಕ್ಷಿಯಾಗುತ್ತಿವೆ. ಅಂತೆಯೇ ರಾಷ್ಟ್ರವ್ಯಾಪಿಯಾಗಿ ಹಿಜಾಬ್ ವಿವಾದ ತಲೆದೋರಿರುವ ಹೊತ್ತಿನಲ್ಲಿ ಮುಸ್ಲಿಂ ಉದ್ಯಮಿಯೊಬ್ಬರು 30 ಲಕ್ಷ ರೂ.ಗಳನ್ನು ಖರ್ಚು ಮಾಡಿ ಹಿಂದೂ ದೇವಾಲಯವನ್ನು ನಿರ್ಮಿಸಿರುವ ಅಪರೂಪದ ಘಟನೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಾರ್ಖಂಡ್‌ನ ದುಮ್ಕಾದ Jharkhand’s Dumka ಹಮೀದ್‌ಪುರ ಗ್ರಾಮದ ಉದ್ಯಮಿ ಮೊಹಮ್ಮದ್ ನೌಶಾದ್ ಶೇಖ್ (55) ಸುಮಾರು 30 ಲಕ್ಷ ರೂ.ಗಳನ್ನು ಖರ್ಚು ಮಾಡಿ ಶ್ರೀಕೃಷ್ಣ ಹಿಂದೂ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಾಲಯವು ಸುಮಾರು 1600* 6400 ಚದರ ಅಡಿಗಳಷ್ಟು ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಸೋಮವಾರ ಮೂರ್ತಿಗಳ ಪ್ರತಿಷ್ಠಾಪನೆಯನ್ನೂ ಮಾಡಲಾಗಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಹಿಂದೂ ದೇವಾಲಯವನ್ನು ನಿರ್ಮಿಸಿರುವ ಮೊಹಮ್ಮದ್ ನೌಶಾದ್ ಶೇಖ್ ಅವರು(Mohammad Naushad Sheikh) 2019 ರಲ್ಲಿ ಬಂಗಾಳದ ನಾಡಿಯಾ ಜಿಲ್ಲೆಯ ಮಾಯಾಪುರದಲ್ಲಿ ಶ್ರೀಕೃಷ್ಣನ ದೇವಾಲಯವನ್ನು ನಿರ್ಮಿಸಲು ಕೇಳಿದ್ದರು. ಅಲ್ಲಿ ಅವಕಾಶ ಸಿಗಲಿಲ್ಲವಾದ್ದರಿಂದ ಜಾರ್ಖಂಡ್‌ನ ಗ್ರಾಮವೊಂದರಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ ಎನ್ನಲಾಗಿದೆ.
ದೇಣಿಗೆ ನಿರಾಕರಣೆ:
ಸ್ವ- ಇಚ್ಚೆಯಿಂದ ದೇವಸ್ಥಾನವನ್ನು ನಿರ್ಮಿಸಿರುವ ನೌಶಾದ್ ಹರಿದು ಬಂದ ದೇಣಿಗೆಯನ್ನೂ ನಿರಾಕರಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು, ʻನಾನು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ದೃಢವಾದ ನಂಬಿಕೆಯುಳ್ಳವನು. ನನ್ನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಯಾರಿಂದಲೂ ದೇಣಿಗೆ ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಯಾರಾದರೂ ಅದನ್ನು ನೀಡಿದ್ದರೂ ನಾನು ಅದನ್ನು ನಿರಾಕರಿಸುತ್ತಿದ್ದೆ ಎಂದಿದ್ದಾರೆ. ಇಷ್ಟೇ ಅಲ್ಲದೆ, ಸಂದರ್ಶಕರಿಗೆ ವಸತಿಸೌಲಭ್ಯಕ್ಕಾಗಿ ಶೆಡ್ ನಿರ್ಮಾಣ, ಭಜನೆ, ಕೀರ್ತನೆಗಳನ್ನು ಸ್ಥಾಪಿಸಲು ಆಗುವ ಖರ್ಚು ವೆಚ್ಚವನ್ನೂ ನಾನೇ ನಿಭಾಯಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.