ಬೆಂಗಳೂರು:(ಫೆ.16): Crime: ಅಸ್ಸಾಂನಿಂದ ನಗರಕ್ಕೆ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೇಂದ್ರ ವಿಭಾಗದ ವಿಲ್ಸನ್ ಗಾರ್ಡನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿರ ಆರೋಪಿಯಿಂದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

1,503 ನಿಷೇಧಿತ ಯಾಬಾ ಮಾತ್ರೆ ಖರೀದಿ:
ನಗರದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ದಿದರುಲ್ಲಾ ಇಸ್ಲಾಂ ಮುಸ್ತಫಾ(30) ತನ್ನ ದುಂದು ವೆಚ್ಚಕ್ಕಾಗಿ ಹಣ ಸಂಪಾದಿಸಬೇಕೆಂದು ಕಳ್ಳ ದಾರಿ ಹಿಡಿದಿದ್ದ. ಅಸ್ಸಾಂನ ಭರದ್ ಪುರ ಸ್ಟೇಷನ್ ರಸ್ತೆಯಲ್ಲಿರುವ ಪರಿಚಯಸ್ತನಿಂದ 1,503 ನಿಷೇಧಿತ ಯಾಬಾ ಮಾತ್ರೆಗಳನ್ನು ಖರೀದಿಸಿ ತಂದು ನಗರದ ವಿಲ್ಸನ್ ಗಾರ್ಡನ್‌ನ ಆನೆ ಪಾರ್ಕ್ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ.
ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ಹಲಸೂರು ಗೇಟ್‌ನ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಲ್ಸನ್ ಗಾರ್ಡನ್ ಠಾಣೆಯ ಇನ್ಸ್‌ಪೆಕ್ಟರ್.ಬಿ. ಶಂಕರಾಚಾರ್, ಪಿಎಸ್ ಐಗಳಾದ ಮಗದುಮ್ , ಪ್ರಿಯದರ್ಶಿನಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 18 ಲಕ್ಷ ಮೌಲ್ಯದ ನಿಷೇಧಿತ ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:Cannabis: ಆಂಧ್ರಪ್ರದೇಶ ಸಿಎಂ ಫೋಟೋ ದುರ್ಬಳಕೆ ಮಾಡಿಕೊಂಡು ಗಾಂಜಾ ಮಾರಾಟ: ಮೂವರ ಬಂಧನ