Sneharshi: (ಫೆ.15): ಶ್ರೀ ಲಕ್ಷ್ಮೀಬೆಟ್ರಾಯ ಕಂಬೈನ್ಸ್ ಲಾಂಛನದಲ್ಲಿ ನಾಗತಿಹಳ್ಳಿ ಪ್ರತಿಭ ಹಾಗೂ ಕಿರಣ್ ನಾರಾಯಣ್ ನಿರ್ಮಿಸಿರುವ “ಸ್ನೇಹರ್ಷಿ” ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಈ ಚಿತ್ರಕ್ಕಾಗಿ ರಾಜು ಎನ್.ಕೆ ಗೌಡ ಅವರು ಬರೆದಿರುವ ಅರಿವಿಲ್ಲದೆ ಶುರುವಾದಂತಿದೆ ಎಂಬ ಹಾಡು ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿದ್ದು, ಜನಮನಸೂರೆಗೊಂಡಿದೆ. ಈಗಾಗಲೇ 1.3 ಮಿಲಿಯನ್ ಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.
ಹಾಡಿನಲ್ಲಿ ಅಭಿನಯಿಸಿರುವ ನಾಯಕ ಕಿರಣ್ ನಾರಾಯಣ್ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಸುರದ್ರೂಪಿ ನಟ ಸಿಕ್ಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಪ್ರಶಂಸೆಯ ನುಡಿಗಳಿಗೆ ಕಿರಣ್ ನಾರಾಯಣ್ ಧನ್ಯವಾದ ತಿಳಿಸಿದ್ದಾರೆ.
ನಾಯಕನಾಗಿ ನಟಿಸಿರುವ ಕಿರಣ್ ನಾರಾಯಣ್ ಈ ಚಿತ್ರದ ನಿರ್ದೇಶಕರು ಹೌದು. ನಾಗತಿಹಳ್ಳಿ ಪ್ರತಿಭ ಕಥೆ ಬರೆದಿದ್ದಾರೆ. ಸುಮಧುರ ಹಾಡುಗಳಿಗೆ ಆಕಾಶ್ ಅಯ್ಯಪ್ಪ ಸಂಗೀತ ನೀಡಿದ್ದಾರೆ. ರವಿಕಿಶೋರ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ.
ಕಿರಣ್ ನಾರಾಯಣ್ ಅವರಿಗೆ ನಾಯಕಿಯಾಗಿ ಸಂಜನಾ ಅಭಿನಯಿಸಿದ್ದಾರೆ. ಸುಧಾ ಬೆಳವಾಡಿ, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ:Varada:ಸದ್ದು ಮಾಡುತ್ತಿದೆ “ವರದ” ಚಿತ್ರದ ಟ್ರೇಲರ್. ಇದೇ 18 ರಂದು ಚಿತ್ರ ಬಿಡುಗಡೆ.