ಬೆಂಗಳೂರು: (ಫೆ.15): Crime: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಗಟ್ಟಿ ಮೊಬೈಲ್ ಕಸಿದುಕೊಳ್ಳಲು ಮುಂದಾದ ವ್ಯಕ್ತಿಯ ಮೇಲೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಣನಕುಂಟೆ ನಿವಾಸಿಯಾಗಿರುವ ಮಂಜುನಾಥ್ ನನ್ನು ಹತ್ಯೆ ಮಾಡಿದ ಆರೋಪದಡಿ ಮಂಡ್ಯ ಮೂಲದ ಶರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಈತನ ವಿರುದ್ಧ 2014 ರಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ಈತನ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು. ಆದ್ರೆ ಕೆಲ ವರ್ಷಗಳು ಅಪರಾಧ ಚಟುವಟಿಕೆಯಲ್ಲಿ ದೂರ ಇದ್ದ ಕಾರಣದಿಂದ 2019 ರಲ್ಲಿ ಈತನ ಮೇಲೆ ಹಾಕಲಾಗಿದ್ದ ರೌಡಿಶೀಟರ್ ತೆಗೆಯಲಾಗಿತ್ತು. ಜೊತೆಗೆ ಕಳೆದ ಐದು ವರ್ಷದ ಹಿಂದೆ ಇತ ಮದುವೆಯಾಗಿದ್ದು, ಮಕ್ಕಳಾಗಿರಲಿಲ್ಲ. ಅನಾರೋಗ್ಯದಿಂದ ಮಂಜುನಾಥ್ ಪತ್ನಿ ಒಂದೂವರೆ ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ಬೇಸತ್ತಿದ್ದರಿಂದ ಕುಡಿತದ ದಾಸನಾಗಿದ್ದ ಮಂಜುನಾಥ ಓಡಾಡಿಕೊಂಡಿದ್ದ.

ಘಟನೆಯ ವಿವರ
ಇನ್ನೂ ಶರತ್ ನಿನ್ನೆ ರಾತ್ರಿ ಮೃತ ಮಂಜುನಾಥ್ ಆತನ ಇಬ್ಬರು ಸ್ನೇಹಿತರು ಅಡ್ಡಗಟ್ಟಿದ್ದಾರೆ. ಈ ವೇಳೆ ಮೊಬೈಲ್ ಕೊಡುವಂತೆ ಮಂಜುನಾಥ್ ತಾಕೀತು ಮಾಡಿದ್ದ. ಮೊಬೈಲ್ ಕೊಡಲು ನಿರಾಕರಿಸಿದ ಶರತ್ ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಇಬ್ಬರು ಜಗಳವಾಡಿಕೊಂಡಿದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಸಿಮೆಂಟ್ ಕಲ್ಲಿನಿಂದ ಶರತ್ ಕಾಲಿಗೆ ಹೊಡೆದಿದ್ದಾನೆ. ಇದಕ್ಕೆ ಪ್ರತಿರೋಧವಾಗಿ ಅದೇ ಕಲ್ಲನ್ನು ಕಸಿದು ಮಂಜುನಾಥ್ ತಲೆ ಮೇಲೆ ಹಾಕಿದ್ದಾನೆ. ಕುಡಿದು ಟೈಟಾಗಿದ್ದ ಮಂಜುನಾಥ್ ತೀವ್ರ ರಕ್ತಸ್ರಾವದಿಂದ ಕುಸಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಜೊತೆಯಲಿದ್ದ ಇಬ್ಬರು ಸ್ನೇಹಿತರು ಪರಾರಿಯಾಗಿದ್ದಾರೆ. ಕೃತ್ಯ ಎಸಗಿದ ಬಳಿಕ ಕೋಣನಕುಂಟೆ ಪೊಲೀಸರ ಮುಂದೆ ಆರೋಪಿ ಶರತ್ ಸರೆಂಡರ್ ಆಗಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ:Onslaught:ಬಿಜೆಪಿ ಕಾರ್ಯಕರ್ತರಿಂದ ಗೂಂಡಾಗಿರಿ: ತಾ.ಪಂ ಇಒ ಮೇಲೆ ಹಲ್ಲೆ!