ನವದೆಹಲಿ: ಫೆ.15; Deep Sidhu: ಪಂಜಾಬ್ ನಟ ಕಾರ್ಯಕರ್ತ ದೀಪ್ ಸಿಧು ಇಂದು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಕಳೆದ ವರ್ಷ ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆ ವೇಳೆ ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವ ಆರೋಪದಡಿ ಎರಡು ಬಾರಿ ಬಂಧಿಸಲಾಗಿತ್ತು.

ದೀಪ್ ಸಿಧು ದೆಹಲಿಯಿಂದ ಪಂಜಾಬ್ ಭಟಿಂಡಾಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.ದೆಹಲಿಯ ಬೈಪಾಸ್ ಬಳಿ ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ.ರಾತ್ರಿ 9:30 ಕ್ಕೆ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಏಪ್ರಿಲ್ 17ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಕೆಂಪುಕೋಟೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಬಂಧಿಸಲಾಗಿತ್ತು. ಅನಂತರ ಎರಡನೇ ಪ್ರಕರಣದಲ್ಲಿಯೂ ಸಿಧು ಗೆ ಜಾಮೀನು ನೀಡಲಾಯಿತು.
ಇದನ್ನೂ ಓದಿ:Senior Actress Bhargavi Narayan:ಹಿರಿಯ ನಟಿ, ರಂಗಕರ್ಮಿ ಭಾರ್ಗವಿ ನಾರಾಯಣ್ ನಿಧನ