ಅತ್ಯಾಚಾರ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಶಾಸಕ ಜಮೀರ್ ಅಹ್ಮದ್ ಖಾನ್
Hijab Row:(ಫೆ.15) ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲಿನ ವಿವಾದದಲ್ಲಿ ಹಲವು ರಾಜಕೀಯ ಮುಖಂಡರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವೇಳೆ ಮಹಿಳೆಯರು ಹಿಜಾಬ್ ಧರಿಸಿದ ಕಾರಣ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದೆ ಎಂದು ವಿವಾದದ ಹೇಳಿಕೆ ನೀಡಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ವಿವಾದಕ್ಕೆ ಸಿಲುಕಿದ್ದರು. ಇದೀಗ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೂ ತಮ್ಮ ಹೇಳಿಕೆಯ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಅತ್ಯಾಚಾರಗಳನ್ನು ಕಂಡರೆ ಭಯ ಆತಂಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿಜಾಬ್, ಬುರ್ಖಾ ದರಿಸುವುದರಿಂದ ಅತ್ಯಾಚಾರವನ್ನು ತಡೆಗಟ್ಟಬಹುದೆಂದು ಎಂಬ ಹೇಳಿಕೆಯನ್ನು ನೀಡಿದ್ದೆ ಎಂದು ಹೇಳಿದ್ದರು.
ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಯಾರ ಮನಸ್ಸಿಗಾದರೂ ನೋಯಿಸುವ ಇಲ್ಲವೇ ಅಗೌರವ ತೋರಿಸುವ ದುರುದ್ದೇಶ ನನಗಿಲ್ಲ. ಹೆಣ್ಣುಮಕ್ಕಳ ಕಾಳಜಿಯ ಉದ್ದೇಶದಿಂದ ಹೇಳಿರುವುದು, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಈ ಬಗ್ಗೆ ವಿಷಾದವಿದೆ ಎಂದು ಹೇಳಿದ್ದಾರೆ.
ಸರ್ಕಾರ ಜನರ ಜೀವ ರಕ್ಷಣೆಗಾಗಿ ಅರ್ಧ ಹೆಲ್ಮೆಟ್ ಬದಲು ಪೂರ್ತಿ ಹೆಲ್ಮೆಟ್ ಧರಿಸಲು ಕಡ್ಡಾಯಗೊಳಿಸಲಾಗಿತ್ತು ಅದೇ ರೀತಿ ನನ್ನ ಹೇಳಿಕೆಯು ಹೆಣ್ಣುಮಕ್ಕಳ ಮೇಲಿನ ಕಾಳಜಿಯಿಂದ ಆಗಿದೆ.

ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ಅವರ ಮೈಮೇಲಿನ ಬಟ್ಟೆ ಖಂಡಿತ ಕಾರಣವಲ್ಲ. ಮೈತುಂಬ ಬಟ್ಟೆ ಹಾಕಿದರು ಹಾಕದಿದ್ದರೂ ಅತ್ಯಾಚಾರ ನಡೆಯುತ್ತದೆ ಇರುತ್ತದೆ ಇದಕ್ಕೆ ಕಾರಣ ಕೆಲವು ಪುರುಷರಲ್ಲಿರುವ ರೇಪಿಸ್ಟ್ ಮನಸ್ಥಿತಿ. ಹೆಣ್ಣು ಮಕ್ಕಳ ಅತ್ಯಾಚಾರ ಕಡಿಮೆಯಾಗಬೇಕಾದರೆ ಮೊದಲು ಪುರುಷರು ಬದಲಾಗಬೇಕು ಎಂದು ಹೇಳಿದರು.
ಹೆಣ್ಣುಮಕ್ಕಳಿಗೆ ನಿಜವಾದ ರಕ್ಷಣೆ ನೀಡುವುದು ಶಿಕ್ಷಣ ಮಾತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿಜಾಬ್ ಬುರ್ಖಾ ಧರಿಸಿಯಾದರು ಒಮ್ಮೆ ಅವರು ಶಿಕ್ಷಣ ಪಡೆಯಲಿ. ಆ ಶಿಕ್ಷಣದ ಬಲದಿಂದ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು. ಶಿಕ್ಷಣಕ್ಕಿಂತ ಶಕ್ತಿಯುತವಾದ ಅಸ್ತ್ರ ವಿಲ್ಲ. ಆದ್ದರಿಂದ ಸರ್ಕಾರವನ್ನು ಮತ್ತು ಸಮಾಜವನ್ನು ಕೈಮುಗಿದು ಬೇಡಿಕೊಳ್ಳುತ್ತೇನೆ, ಹಿಜಾಬ್ ಬುರ್ಖಾ ಕಾರಣ ನೀಡಿ ದಯವಿಟ್ಟು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಬೇಡಿ ಎಂದು ವಿನಂತಿಸಿದ್ದಾರೆ.
ಹಿಂದಿನ ದಿನ ನಾನು ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿದೆ ಎಂದು ಹೇಳಿದರು.
ಯಾರ ಮನಸ್ಸನ್ನಾದರೂ ನೋಯಿಸುವ ಇಲ್ಲವೇ ಅಗೌರವ ತೋರಿಸುವ ದುರುದ್ದೇಶ ನನಗಿಲ್ಲ. ಹೆಣ್ಣು ಮಕ್ಕಳ ಮೇಲಿನ ಕಾಳಜಿಯ ಸದುದ್ದೇಶದಿಂದ ಹೇಳಿರುವುದು. ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಆ ಬಗ್ಗೆ ವಿಷಾಧವಿದೆ. 2/7#HijabIsOurPride
— B Z Zameer Ahmed Khan (@BZZameerAhmedK) February 14, 2022
ಜಮೀರ್ ಅಹ್ಮದ್ ನೀಡಿದ್ದ ಹೇಳಿಕೆ ಏನು?
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಹಿಜಾಬ್ ಧರಿಸದೆ ಇರುವುದರಿಂದ ಅತ್ಯಾಚಾರ ಪ್ರಮಾಣ ದೇಶದಲ್ಲಿ ಹೆಚ್ಚಾಗಿದೆ ಎಂದು ಹೇಳಿಕೆ ನೀಡಿದ್ದರು.
ಹಿಜಾಬ್ ಎಂದರೆ ಪರ್ದಾ ಅಥವಾ ಮುಸುಕು ಎಂದರ್ಥ. ವಯಸ್ಸಿಗೆ ಬಂದ ಹುಡುಗಿಯರ ಸೌಂದರ್ಯವನ್ನು ಮರೆಮಾಚಲು ಜಮಾನದಿಂದ ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಬಳಸುವುದು ಕಡ್ಡಾಯವಲ್ಲ ಆದರೆ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಹಿಜಾಬ್ ಬಳಸುತ್ತಾರೆ. ಇದನ್ನು ಬೇಡ ಎನ್ನುತ್ತಿರುವ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೋ ಇಲ್ಲವೋ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.