Noise Pollution:ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ದೇವಸ್ಥಾನಗಳಲ್ಲಿ ಇನ್ನು ಮುಂದೆ ಜೋರಾಗಿ ಘಂಟೆ ಬಾರಿಸುವ ಹಾಗಿಲ್ಲ. ಬೆಂಗಳೂರು ಪೊಲೀಸರಿಂದ ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರು ನಗರದ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಬರುತ್ತಿರುವುದಕ್ಕೆ ಬಸವನಗುಡಿ ಪೊಲೀಸ್ ಠಾಣೆಯಿಂದ ದೊಡ್ಡ ಗಣಪತಿ ದೇವಸ್ಥಾನದ ಸಮೂಹಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅಗತ್ಯಕ್ಕಿಂತ ಹೆಚ್ಚು ಶಬ್ಧ ಬರುವಂತೆ ಗಂಟೆ ಶಬ್ದ ಬರುತ್ತಿರುವ ಕಾರಣ ಪ್ರಕರಣ ದಾಖಲು ಮಾಡಿ ನೋಟಿಸ್ ಜಾರಿಗೊಳಿಸಲಾಗಿದೆ. ಡಮರುಗ, ಧ್ವನಿವರ್ಧಕಗಳಿಂದ ಧರಿಸಬಾರದು ಎಂದು ಸೂಚನೆ ನೀಡಲಾಗಿದೆ.

ಇತ್ತೀಚಿಗೆ ದೇವಸ್ಥಾನಗಳಲ್ಲಿ ಘಂಟೆಯ ಜೊತೆ ಎಲೆಕ್ಟ್ರಿಕ್ ಸಾಧನದಿಂದ ಗಂಟೆ, ಡೋಲು ಹಾಗೂ ಜಾಗಟೆ ಶಬ್ದ ಬರುತ್ತಿತ್ತು. ಇದರಿಂದ ಹೆಚ್ಚಿನ ಶಬ್ದ ಬರುತ್ತಿರುವ ಕಾರಣ ಶಬ್ದ ಮಾಲಿನ್ಯ ಉಂಟಾಗುತ್ತಿತ್ತು. ಹೆಚ್ಚಿನ ಶಬ್ದ ಕೇಳಿ ಬಂದಲ್ಲಿ ಶಬ್ದ ಮಾಲಿನ್ಯ ( Noise Pollution (regulation and control rules amended 2000 farmed under the Environment Pollution act 1986) ಅಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚು ಶಬ್ದ ಮಾಲಿನ್ಯ ಮಾಡುತ್ತಿರುವ ದೇವಸ್ಥಾನಗಳ ಪಟ್ಟಿ:
ದೊಡ್ಡ ಗಣೇಶ ದೇವಸ್ಥಾನ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು ಪಟ್ಟಿಯಲ್ಲಿ ಸೇರಿದೆ. ಗಂಟೆ ಶಬ್ದಕ್ಕೂ ಕೂಡ ಮಿತಿ ಹೇರಿದ ರಾಜ್ಯ ಸರ್ಕಾರದ ಪೊಲ್ಯೂಷನ್ ಬೋರ್ಡ್ ಮತ್ತು ಮುಜರಾಯಿ ಇಲಾಖೆ ನೋಟಿಸ್ ಜಾರಿ ಮಾಡಿದೆ.
ನಗರದ ವಿವಿಧ ವಲಯಗಳಿಗೆ ಬೆಳಗ್ಗೆ ಹಾಗೂ ರಾತ್ರಿ ವೇಳೆ ದೇವಸ್ಥಾನಗಳಿಂದ ಬರುವ ಶಬ್ದದ ಪ್ರಮಾಣವನ್ನು ಕೂಡ ವಿವರಿಸಲಾಗಿದೆ.
ಕೈಗಾರಿಕಾ ಪ್ರದೇಶ ( Industrial Area): ಬೆಳಗ್ಗೆ 75 dB, ರಾತ್ರಿ 70dB
ವಾಣಿಜ್ಯ ಪ್ರದೇಶ (Commercial Area) : ಬೆಳಗ್ಗೆ 65dB, ರಾತ್ರಿ 55dB
ವಸತಿ ಪ್ರದೇಶ (Residential Area): ಬೆಳಗ್ಗೆ 55dB, ರಾತ್ರಿ 45dB
ನಿಶಬ್ದ ಪ್ರದೇಶ(Silence Zone) : ಬೆಳಗ್ಗೆ 50dB, ರಾತ್ರಿ 40dB.
ಮೇಲೆ ಹೇಳಿರುವ ಶಬ್ದದ ಪ್ರಮಾಣದಲ್ಲಿ ದೇವಸ್ಥಾನಗಳು ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ ಶಬ್ದವನ್ನು ಹೊರಡಿಸಬೇಕು.
ಬೆಂಗಳೂರು ನಗರ ಬಸವನಕೋಟೆ ಶ್ರೀ ದೊಡ್ಡ ಗಣಪತಿ ಮತ್ತು ಸಮೂಹ ದೇವಾಲಯದಲ್ಲಿ ಮಂಗಳಾರತಿ ಅಭಿಷೇಕ ಇತ್ಯಾದಿ ಸಂದರ್ಭಗಳಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಉಪಯೋಗಿಸುವ ಡಮರುಗ/ಧ್ವನಿವರ್ಧಕಗಳಿಂದ ಹೊರಡಿಸುವ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಉಪಯೋಗಿಸಬಾರದು ಎಂದು ಸೂಚನೆ ನೀಡಿದೆ.
ಇದನ್ನೂ ಓದಿ:Bahuroopi: ಮಾ.11ರಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ; ಮಾರ್ಚ್ 1ರಿಂದಲೇ ಟೀಕೆಟ್ ಖರೀದಿಗೆ ಅವಕಾಶ