ಬೆಂಗಳೂರು:(ಫೆ.15): Fake Offer Letter: ಕೆಲಸ ಕೊಡಿಸುವುದಾಗಿ ಸಂದರ್ಶನ ನಡೆಸಿ ಪ್ರತಿಷ್ಠಿತ ಐಬಿಎಂ ಕಂಪೆನಿಯ ನಕಲಿ ಆಫರ್ ಲೇಟರ್ ನೀಡಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ವಂಚಕರನ್ನು ಬಂಧನ ಮಾಡಲಾಗಿದೆ.
ಸಂಪಿಗೆಹಳ್ಳಿ ಪೊಲೀಸರು ಅಂತರಾಜ್ಯ ವಂಚಕರಾದ ಕಾಳಿಪ್ರಸಾದ್, ಅಭಿಜಿತ್ ಹಾಗೂ ಅಭಿಷೇಕ್ ಮೊಹಾಂತಿ ಎಂಬುವರನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಪುಣೆ ಮೂಲದ ಆರೋಪಿ ಸಂಜೀವ್ ಗಂಗರಾಮ್ ಗೋರ್ಖಾ ಎಂಬುವವರನ್ನು ಬಂಧಿಸಿದ್ದರು.



ಆನ್‌ಲೈನ್ ವೆಬ್ ಸೈಟ್ ಗಳಲ್ಲಿ ವಂಚನೆ:
ನೌಕರಿ ಡಾಟ್ ಕಮ್ ಸೇರಿದಂತೆ ಇನ್ನಿತರ ಆನ್‌ಲೈನ್ ವೆಬ್ ಸೈಟ್ ಗಳಲ್ಲಿ ಐಬಿಎಂ, ಕಾಗ್ನಿಜೆಂಟ್ ಕಂಪೆನಿಗಳಲ್ಲಿ ಕೆಲಸ ಖಾಲಿಯಿದೆ. ಆಸಕ್ತ ಅರ್ಹ ಅರ್ಭ್ಯರ್ಥಿಗಳು ಸಂಪರ್ಕಿಸಿ ಎಂದು ಪೋಸ್ಟ್ ಹಾಕುತ್ತಿದ್ದರು. ಪೋಸ್ಟ್ ನೋಡಿ ನಂಬುತ್ತಿದ್ದ ಆಭ್ಯರ್ಥಿಗಳು ತಮ್ಮ ಪ್ರೊಫೈಲ್ ಕಳುಹಿಸುತ್ತಿದ್ದರು. ಪೋನ್ ನಂಬರ್ ಪಡೆದು ಆನ್ ಲೈನ್ ನಲ್ಲಿ ಸಂದರ್ಶನ ನಡೆಸುತ್ತಿದ್ದರು. ಜೊತೆಗೆ ಜಾಬ್ ಗೆ ಜಾಯ್ನ್ ಆಗಲು ಹಣ ಕಟ್ಟಬೇಕು ಎಂದು ನಿರುದ್ಯೋಗಿಗಳಿಗೆ ನಂಬಿಸಿ ಸಾವಿರಾರು ರೂಪಾಯಿ ಹಣ ಪಡೆಯುತ್ತಿದ್ದರು. ಬಳಿಕ ಐಬಿಎಂ ಕಂಪೆನಿಯ ಹೆಸರಿನ ನಕಲಿ ಆಫರ್ ಲೇಟರ್ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಐಬಿಎಂ ಕಂಪೆನಿಯ ಹೆಚ್.ಆರ್ ಸಂಪರ್ಕಿಸಿ ಎಂದು ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು.
ಇನ್ನೂ ಅಭ್ಯರ್ಥಿಗಳು ಐಬಿಎಂ ಕಂಪೆನಿ ಬಳಿ ಹೋಗಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗುತ್ತಿತ್ತು. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಬೆಂಗಳೂರಿನಲ್ಲಿ ಐದು ಹಾಗೂ ಮಹಾರಾಷ್ಟ್ರದಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Crime: ಕುಡಿದ ಮತ್ತಿನಲ್ಲಿ ನಡೆಯಿತು ಹತ್ಯೆ! ಕೊಲೆಗೆ ಕಾರಣವಾಯ್ತು ಆ ಮೊಬೈಲ್