ಬೆಂಗಳೂರು: (ಫೆ.15): Bike Theft: ಜೈಲಿನಲ್ಲಿ ಸಹ ಕೈದಿಯೋರ್ವನಿಂದ ಸೇಫ್ಟಿ ಪಿನ್ ಬಳಸಿ ಬೈಕ್ ಕಳ್ಳತನ ಮಾಡುವ ಟ್ರೈನಿಂಗ್ ಪಡೆದು ಬೈಕ್ ಕಳ್ಳತನ ಮಾಡುತ್ತಿದ್ದ ಚೋರರನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯ ರೂಪೇನ ಅಗ್ರಹಾರ ನಿವಾಸಿಗಳಾದ ಕಿಶೋರ್ ಹಾಗೂ ಪ್ರವೀಣ್ ಬಂಧನಕ್ಕೊಳಗಾದ ವ್ಯಕ್ತಿಗಳು. ಇನ್ನೂ ಆರೋಪಿಗಳಿಂದ 15 ಲಕ್ಷ ಮೌಲ್ಯದ 18 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.

ಬೈಕ್ ಕದಿಯುವುದೇ ಕಾಯಕ ಮಾಡಿಕೊಂಡಿದ್ದ ಕಿಶೋರ್ ಕಳೆದ ಒಂದೆರಡು ವರ್ಷಗಳಿಂದ ನಗರದ ವಿವಿಧೆಡೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡುತ್ತಿದ್ದ. ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ. ಜೈಲಿನಲ್ಲಿ ಸಹ ಕೈದಿಯಿಂದ ಸೆಫ್ಟಿ ಫಿನ್ ಬಳಸಿ ಹೇಗೆ ಬೈಕ್ ಕಳ್ಳತನ ಮಾಡಬೇಕು ಎಂಬುದನ್ನು ಕಲಿತಿದ್ದ.
ಜೈಲಿನಿಂದ ಹೊರಗೆ ಬರ್ತಿದ್ದಂತೆ ಸಹಚರ ಪ್ರವೀಣ್ ಜೊತೆ ಸೇರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹ್ಯಾಂಡಲ್ ಮುರಿದು ಸೆಫ್ಟಿ ಪಿನ್ ಬಳಸಿ ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಕೆ.ಜಿ.ಹಳ್ಳಿ, ಹೈಗ್ರೌಂಡ್ಸ್ , ಬಾಣಸವಾಡಿ, ಕೆಂಗೇರಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ:Crime: ಮೊಬೈಲ್ ಕಳ್ಳತನಕ್ಕೆ ಬಂದು 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ!