ಉಡುಪಿ (udupi); ಹಿಜಾಬ್ ಪ್ರಕರಣದಲ್ಲಿ (Hijab peaceful) ನ್ಯಾಯಾಲಯದ ಆದೇಶ ಬರುವವರೆಗೂ ಜಿಲ್ಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಯೂನಿಫಾರಂ ಕಡ್ಡಾಯ ಇಲ್ಲದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಂದಿನಂತೆಯೇ ತರಗತಿಗೆ ಹಾಜರಾಗಬೇಕು. ಯೂನಿಫಾರಂ ಕಡ್ಡಾಯ ಇರುವ ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ (Hijab) ಧರಿಸದೆ ಹಾಜರಾಗಬೇಕು ಎಂಬ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ (Raghupati Bhat) ಇಂದು ತಿಳಿಸಿದ್ದಾರೆ.
ಉಡುಪಿಯ ತಹಶೀಲ್ದಾರ್ ಕಚೇರಿಯಲ್ಲಿಂದು ಹಿಂದೂ- ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಪ್ರಮುಖರ ನೇತೃತ್ವದಲ್ಲಿ ನಡೆದ ಶಾಂತಿಸಭೆಯ ಬಳಿಕ ಸಭೆಯ ನಿರ್ಣಯವನ್ನು ಸ್ಪಷ್ಟಪಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಜಾಬ್(hijab) ವಿವಾದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪಾಲಿಸಲು ನಿರ್ಧರಿಸಿದ್ದೇವೆ. ಅಲ್ಲಿಯವರೆಗೂ ಹಿಂದೆ, ಮುಸ್ಲಿಂ(Muslim students) ವಿದ್ಯಾರ್ಥಿನಿಯರು ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುತ್ತಿದ್ದರೆ ಮುಂದೆಯೂ ಹಾಕಿಕೊಂಡು ಬರಬಹುದು. ಹಿಜಾಬ್ ಇಲ್ಲದೆ ಸಮವಸ್ತ್ರ ಧರಿಸಿ ಬರುತ್ತಿದ್ದವರು ಅದೇ ಪದ್ಧತಿಯನ್ನು ಪಾಲಿಸಲು ನಿರ್ಣಯಿಸಲಾಗಿದೆ.

ಉಡುಪಿಯಲ್ಲಿ ಹಿಂದಿನಂತೆಯೇ ಸೌಹಾರ್ದ ವಾತಾವರಣ ಮೂಡಬೇಕು ಎಂಬ ನಿಟ್ಟಿನಲ್ಲಿ ಶಾಂತಿಸಭೆ ನಡೆಸಲಾಗಿದ್ದು, ಸರ್ವಧರ್ಮಗಳ ಹಾಗೂ ಸಂಘಟನೆಗಳ ಮುಖಂಡರು ಭಾಗವಹಿಸಿ ಸಹಮತ ವ್ಯಕ್ತಪಡಿಸಿದ್ದಾರೆ.
ಬಳಿಕ ಎಸ್‌ಡಿಪಿಐ(SDPI) ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹಮದ್ ಮಾತನಾಡಿ, ಹಿಜಾಬ್ ವಿವಾದ ಸೌಹಾರ್ದಯುತವಾಗಿ ಬಗೆಹರಿದು ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ನೆಲೆಸಬೇಕು. ಕೆಲ ವಿದ್ಯಾರ್ಥಿಗಳು ಸಾಂವಿಧಾನಿಕ ಹಕ್ಕುಗಳನ್ನು ಒತ್ತಾಯಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಲ್ಲಿ ಎಸ್‌ಡಿಪಿಐ ಮಧ್ಯೆ ಪ್ರವೇಶಿಸುವುದಿಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ.
ನಿಷೇಧಾಜ್ಞೆ(curfew)
ಜಿಲ್ಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಫೆ.14ರಿಂದ 19ರವರೆಗೆ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.