World Radio Day: (ಫೆ.13) ಹಿಂದೆಲ್ಲಾ ಟಿವಿ ಬರುವ ಮೊದಲು ಮನೋರಂಜನೆಗಾಗಿ ಇದ್ದದ್ದು ಕೇವಲ ರೇಡಿಯೋ ಮಾತ್ರ.. ಎಲ್ಲರ ಮನೆಗಳಲ್ಲಿ ಬೆಳಗ್ಗೆ ಆಕಾಶವಾಣಿ ಪ್ರಾದೇಶಿಕ ಸಮಾಚಾರ ದೊಂದಿಗೆ ದಿನ ಆರಂಭವಾಗುತ್ತಿತ್ತು. ರೇಡಿಯೋದಲ್ಲಿ ಸುದ್ದಿ ಬಂದರೆ ಮಾತ್ರ ನಿಜವಾದ ಸುದ್ದಿ ಎಂದು ನಂಬುತ್ತಿದ್ದರು.

ಇನ್ನೂ ರೇಡಿಯೋದಲ್ಲಿ ಬರುತ್ತಿದ್ದ ಧಾರಾವಾಹಿ, ಕ್ರಿಕೆಟ್ ಕಾಮೆಂಟರಿ ಕೇಳಿದರೆ ಎದುರು ಕೂತು ನೋಡಿದಷ್ಟೇ ಅನುಭವ ಆಗುತ್ತಿತ್ತು. ಅನುಭವ ನಿಮಗೂ ಆಗಿರಬಹುದು. ರೇಡಿಯೋ ಬಗ್ಗೆ ಇಷ್ಟೆಲ್ಲಾ ಹೇಳುತ್ತಿದ್ದೇನೆಂದರೆ ಇಂದು ಏನಾದರೂ ವಿಶೇಷ ಇದ್ದೇ ಇರುತ್ತದೆ ಎಂದರ್ಥ! ಹೌದು ಇಂದು ವಿಶ್ವ ರೇಡಿಯೋ ದಿನ.. ಇಂಟರ್ನೆಟ್ ಫೇಸ್ಬುಕ್ ಟ್ವಿಟರ್ ಇನ್ನಿತರ ಸಾಮಾಜಿಕ ಜಾಲತಾಣಗಳ ಕಾಲ ವಾಗಿರುವುದರಿಂದ ರೇಡಿಯೋ ಕೇಳುವುದು ಮರೆತಾಗಿದೆ.

ಮೈಸೂರಿನಲ್ಲಿ ನಮ್ಮ ದೇಶದ ಮೊಟ್ಟಮೊದಲು ರೇಡಿಯೋ ಕಾರ್ಯಕ್ರಮ ಪ್ರಸಾರವಾಗಿದ್ದು ಎಂಬುದು ವಿಶೇಷ. ಪ್ರಾಧ್ಯಾಪಕರಾಗಿದ್ದ ಡಾ.ಎಮ್.ವಿ.ಗೋಪಾಲಸ್ವಾಮಿಯವರು ಮುತುವರ್ಜಿಯಿಂದ 1935ರಲ್ಲೇ ಮೊದಲ ಆಕಾಶವಾಣಿ ಕೇಂದ್ರ ಕಾರ್ಯಾರಂಭವಾಯಿತು. ಕುವೆಂಪು ಕವನ ವಾಚನದೊಂದಿಗೆ ಬಾನುಲಿ ಪ್ರಸಾರ ಕಾರ್ಯ ಮೊದಲುಗೊಂಡಿತು.ಡೆಟ್ರಾಯಿಟ್, ಮಿಚಿಗನ್‌ನಲ್ಲಿರುವ ಸ್ಟೇಷನ್ 8MK, ಮೊದಲ ರೇಡಿಯೋ ಸುದ್ದಿ ಕಾರ್ಯಕ್ರಮವನ್ನು 31 ಆಗಸ್ಟ್, 1920 ರಂದು ಪ್ರಸಾರ ಮಾಡಲಾಯಿತು.
ಈ ಬಾರಿಯ ಥೀಮ್…Radio and Trust
ಭಾರತದಲ್ಲಿ ಆಕಾಶವಾಣಿ ಎಂದರೆ ಚಿತ್ರಗೀತೆ ವಾರ್ತೆ ಕೃಷಿ ನಾಟಕ ಸೇರಿದಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ ವಾತಾವರಣದ ಡೀಟೇಲ್ಸ್, ಯುದ್ಧ ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಆಕಾಶವಾಣಿ ಆಸರೆಯಾಗಿತ್ತು.
On #WorldRadioDay, @sudarsansand's beautiful Sand Art with message "Radio and Trust" at Puri beach in India . pic.twitter.com/spMDXYmBJl
— ALL INDIA RADIO आकाशवाणी (@AkashvaniAIR) February 13, 2022
ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ವೆಲ್ ಕೇಳುಗರಿಗೆ ಆಪ್ತರಾಗಿದ್ದ ರೇಡಿಯೋ ಇಂದು ಅಪರೂಪವಾಗಿದೆ.ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಬಹು ದೂರ ಸರಿದಿದೆ ಎಂದೇ ಹೇಳಬಹುದು.
ಪ್ರತಿ ವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಮೂಲಕ ರೇಡಿಯೋವನ್ನು ನೆನಪಿಸಿ ಕೊಳ್ಳೋಣ. ಇಂದಾದರೂ ನಿಮ್ಮ ಮನೆಯಲ್ಲಿರುವ ಹಳೆ ರೇಡಿಯೋವನ್ನು ಶುಚಿಮಾಡಿ ಒಮ್ಮೆ ಕೇಳಿ.. ಮೊಬೈಲ್ ಮಾರುಕಟ್ಟೆಯಲ್ಲಿ ರೇಡಿಯೋ ಕೊಂಡುಕೊಳ್ಳುವವರ ಸಂಖ್ಯೆ ಕೂಡ ಕಡಿಮೆಯಾಗಿದೆ.