Rose: (ಫೆ.13):ವ್ಯಾಲೆಂಟೈನ್ ಡೇ ಹತ್ತಿರ ಬೇರೆ ಬಂದಿದೆ.. ಈ ಸಮಯದಲ್ಲಿ ಹೆಚ್ಚು ಬೇಡಿಕೆ ಇರೋ ಹೂವು ಅಂದ್ರೆ ಗುಲಾಬಿ.. ಪ್ರೀತಿಯನ್ನು ವ್ಯಕ್ತಪಡಿಸುವ ಸಂಕೇತವಾಗಿ ಗುಲಾಬಿ ಹೂವನ್ನು ಬಳಸುತ್ತಾರೆ.
ಗುಲಾಬಿ ಹೂವಿನ ಬೆಲೆ ಗಗನಕ್ಕೇರಿದೆ. ಇದಕ್ಕೆ ಕಾರಣ ಬರೀ ವ್ಯಾಲೆಂಟೆನ್ಸ್ ಡೇ ಅಲ್ಲ. ಕೊರೋನಾ ನಂತರ ಮದುವೆ ಕಾರ್ಯಕ್ರಮಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಗುಲಾಬಿ ಹೂಗಳನ್ನು ಬಳಸುತ್ತಿದ್ದಾರೆ. ಅದ್ದರಿಂದ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಗುಲಾಬಿ ಹೂಗಳಿಗೆ ಬೇಡಿಕೆ ಇದೆ.

ಅಂತರಾಷ್ಟ್ರೀಯ ಫ್ಲವರ್ಸ್ ಹರಾಜು ಲಿಮಿಟೆಡ್ನ ಸದಸ್ಯರ ಪ್ರಕಾರ, ಕಳೆದ ವರ್ಷ ಪ್ರೇಮಿಗಳ ವಾರದಲ್ಲಿ 4.5 ಲಕ್ಷ ಗುಲಾಬಿ ಕಾಂಡಗಳು ಮಾರಾಟವಾಗಿದ್ದವು. ಈ ವರ್ಷ 5.50 ಲಕ್ಷ ಗುಲಾಬಿ ಹೂವಿನ ಕಾಂಡಗಳು ಮಾರಾಟವಾಗಿದೆ.

ಕಳೆದ ವರ್ಷ ಒಂದು ಗುಲಾಬಿ ಹೂವಿನ ಕಾಂಡದ ಬೆಲೆ ಮೂವತ್ತೆರಡು ರೂಪಾಯಿಗಳು ಇದ್ದರೆ ಈ ವರ್ಷ 25ರಿಂದ 30 ಬೆಲೆ ಇದೆ. ಆದರೆ ಪ್ರೇಮಿಗಳ ದಿನಾಚರಣೆ ಗಾಗಿ ಬೆಲೆಯೂ ಹೆಚ್ಚಳ ಮಾಡಲಾಗಿದೆ. ಒಂದು ಕಾಂಡದ ಬೆಲೆ ನಲವತ್ತು ರೂಪಾಯಿಗೆ ಏರಿದೆ. ಬೆಲೆ ಎಷ್ಟೇ ಏರಿಕೆಯಾದರೂ ಗುಲಾಬಿ ಹೂಗಳ ಬೇಡಿಕೆಯು ಕಡಿಮೆಯಾಗಿಲ್ಲ ಎನ್ನುವುದು ವಿಶೇಷ.
ಮದುವೆ ಆಚರಣೆಗಳು ಹಬ್ಬಗಳು ಕಾರಣಕ್ಕಾಗಿ ಗುಲಾಬಿ ಹೂಗಳ ಹೆಚ್ಚಾಗಿದೆ. ಹೂಗಳ ರಾಜ ಎಂದೇ ಫೇಮಸ್ ಗುಲಾಬಿ ಹೂವು ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ.
ಇದನ್ನೂ ಓದಿ:Bahuroopi: ಮಾ.11ರಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ; ಮಾರ್ಚ್ 1ರಿಂದಲೇ ಟೀಕೆಟ್ ಖರೀದಿಗೆ ಅವಕಾಶ