ಮೈಸೂರು, (ಫೆ.13): Drunk Habit: ಕುಡಿತದ ಚಟ ಬಿಡಿಸಲು ಯತ್ನಿಸಿದ ಪತ್ನಿಯನ್ನು ಆಕೆಯ ಪತಿಯೇ ಕೊಲೆಮಾಡಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕ್ಯಾತಮಾರನಹಳ್ಳಿ ಎ.ಕೆ.ಕಾಲನಿ ನಿವಾಸಿ ಸಂಧ್ಯಾ(25) (Sandhya) ಅವರೇ ಕೊಲೆಯಾದವರು ಎಂದು ಗುರುತಿಸಲಾಗಿದೆ. ಆರೋಪಿಯಾದ ಪತಿ ಕಿರಣ್ (Kiran) ಅನ್ನು ಪೊಲೀಸರು ಬಂಧಿಸಿದ್ದಾರೆ.

ಕಿರಣ್ ಮತ್ತು ಸಂಧ್ಯಾ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹಿತರಾಗಿದ್ದು, ದಂಪತಿಗೆ ಒಂದು ಮಗು ಇದೆ. ಕಿರಣ್ ಮದುವೆಯಾದಾಗಲಿಂದಲೂ ಮದ್ಯಪಾನದ ವ್ಯಸನಿಯಾಗಿದ್ದನು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಇದರಿಂದ ಬೇಸತ್ತ ಸಂಧ್ಯಾ ಆತನನ್ನು ಕುಡಿತದ ಚಟದಿಂದ ಬಿಡಿಸಲು ವ್ಯಸನ ಮುಕ್ತಿ ಕೇಂದ್ರಕ್ಕೆ (Mental health care) ದಾಖಲಿಸಿದ್ದರು.
ವ್ಯಸನ ಮುಕ್ತಿ ಕೇಂದ್ರದಿಂದ ಹೊರಬಂದ ಕಿರಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮತ್ತೆ ಕುಡಿತದ ಚಟ ರೂಢಿಸಿಕೊಂಡಿದ್ದರು. ಪತ್ನಿ ಕುಡಿತ ಬಿಡುವಂತೆ ಒತ್ತಾಯಿಸಿದ್ದು, ಈ ವಿಚಾರದ ನಡುವೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ಕಿರಣ್ ಕತ್ತು ಹಿಸುಕಿ ಸಂಧ್ಯಾರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ (Police) ಅಧಿಕಾರಿಗಳು ತಿಳಿಸಿದ್ದಾರೆ.ಈ ಸಂಬಂಧ ಉದಯಗಿರಿ ಪೊಲೀಸ್ (Police station) ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.
ಜಿಂಕೆ ಮಾಂಸ ಕದಿಯಲು ಯತ್ನಿಸಿದ್ದ ಆರೋಪಿಗಳು ಅಂದರ್ ತುಮಕೂರು
ತುಮಕೂರು: (ಫೆ.13): Deer Meat :ಜಿಂಕೆ ಮಾಂಸ (Meat) ಮಾರಲು ಯತ್ನಿಸಿದ ಆರೋಪಿಗಳು ಅರಣ್ಯಾಧಿಕಾರಿಗಳನ್ನು(Forest officer) ಕಂಡು ಪರಾರಿಯಾಗುವಾಗ ಬಂಧನಕ್ಕೊಳಗಾದ ಘಟನೆ ಮಧುಗಿರಿ ತಾಲೂಕಿನ ತಿಪ್ಪಾಪುರದಲ್ಲಿ ನಡೆದಿದೆ. ಬ್ರಹ್ಮದೇವರಹಳ್ಳಿಯ ಶಿವಕುಮಾರ್, ಚಿನ್ನೇನಹಳ್ಳಿಯ ಆದರ್ಶ ಬಂಧಿತ ಆರೋಪಿಗಳು.

ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ ಜಿಂಕೆ ಮಾಂಸ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖದೀಮರು ತಿಪ್ಪಾಪುರ (Tippapura) ಗ್ರಾಮದ ಬಳಿ ಗಂಡು ಜಿಂಕೆಯೊಂದನ್ನು ಬೇಟೆಯಾಡಿದ್ದರು. ಈ ವೇಳೆ 5 ಕೆ.ಜಿ. ಜಿಂಕೆ ಮಾಂಸವನ್ನು ಮಾರಾಟ (Sale) ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.ಆರೋಪಿಗಳು ಬೇಟೆಯಾಡಲು ಬಳಸುತ್ತಿದ್ದ ವಸ್ತುಗಳು ಸೇರಿ ದ್ವಿಚಕ್ರ (Two willer Bike) ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ:Crime: ಮಗನೊಂದಿಗೆ ಸೇರಿ ಪತಿಯನ್ನೇ ಕೊಂದು 7ನೇ ಮಹಡಿಯಿಂದ ಶವ ಎಸೆದ ಖತರ್ನಾಕ್ ಮಹಿಳೆ