Body God: (ಫೆ.13):ತಮ್ಮ ಸಂಭಾಷಣೆಯಲ್ಲೆ ಮನಮುಟ್ಟುತಿದ್ದ ಗುರುಪ್ರಾಸಾದ್ ಈಗ ನಟನೆಯಲ್ಲು ಮನಮುಟ್ಟಲಿದ್ದಾರೆ, ಜೀವ, ಪಾರಿಜಾತ, ಗಣಪ, ಕರಿಯ ೨ ಚಿತ್ರದ ನಿರ್ದೇಶಕರಾದ ಪ್ರಭು ಶ್ರೀನಿವಾಸ್ ಅವರು ಒಂದು ಹೆಜ್ಜೆ ಮುಂದೆ ಇಟ್ಟು ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಬಾಡಿ ಗಾಡ್ ಪ್ರಭು ಶ್ರೀನಿವಾಸ್ ನಿರ್ದೇಶನದ ಐದನೇ ಚಿತ್ರ. ಇದೊಂದು ಬ್ಲಾಕ್ ಹ್ಯೂಮರ್ ವಿತ್ ಥ್ರಿಲ್ಲರ್ ಕಥೆಯಾಗಿದ್ದು, ಕಥೆಯೇ ಈ ಚಿತ್ರದ ಹೀರೋ ಎನ್ನುತ್ತಾರೆ.ನಿರ್ದೇಶಕರು.

ಸತ್ತಮೇಲೂ ಮಾತನಾಡುವ ಗುರುಪ್ರಸಾದ್ ಪಾತ್ರ,ಗುರುಪ್ರಸಾದ್ ರವರನ್ನು ನೋಡಿಕೊಳ್ಳಲೂ ಬಂದ ಮನೋಜ್ ಗೆ ಹಣದ ಸಮಸ್ಯೆ ಇದ್ದು ಸುಳ್ಳಿಂದ ಸುಳ್ಳುಗಳ ಸರಮಾಲೆ ಕಟ್ಟಿ ಬದುಕು ಸಮಸ್ಯೆಗಳ ಸಾಗರ ಮುಟ್ಟುತ್ತದೆ.
ಪದ್ಮಜರಾವ್ ರವರು ಮುಖ್ಯಪಾತ್ರ ಒಂದನ್ನು ನಿಭಾಯಿಸಿದ್ದಾರೆ, ಮೊದಲಭಾರಿ ದೀಪಿಕಾ ಆರಾಧ್ಯ ಎಂಬ ನವನಟಿ ನಟಿಸಿದ್ದಾರೆ.

ಗಣಪ ಚಿತ್ರದ ಜನ ಪ್ರಸಿದ್ದ ಪಡೆದ ಹಾಡು “ಮುದ್ದಾಗಿ ನೀನು ನನ್ನ ಕೂಗಿದೇ”ಮತ್ತು ಕರಿಯ ೨ಚಿತ್ರದ “ಅನುಮಾನವೇ ಇಲ್ಲ ಅನುರಾಗಿ ನಾನೀಗ” ಮತ್ತು ಇನ್ನಿತರ ಹಾಡುಗಳ ಸಂಯೋಜಕ ಕರಣ್ ಬಿ ಕೃಪಾ ರವರ ಸಂಗೀತ ಈ ಚಿತ್ರಕ್ಕೂ ಇದೆ. ಅತಿಮುಖ್ಯವಾಗಿ ಕರ್ನಾಟಕ ರತ್ನ ”ಪವರ್ ಸ್ಟಾರ್ “ ಪುನೀತ್ ರಾಜ್ ಕುಮಾರ್ ರವರು ಕೊನೆಯದಾಗಿ ”ಆರೇಸ ಡಂಕಣಕ” ಎಂಬ ಹಾಡೊಂದನ್ನು ಹಾಡಿದ್ದಾರೆ.
ಇದನ್ನೂ ಓದಿ:Rajyabhara:ರಾಜ್ಯಭಾರ ಮಾಡಲು ಹೊರಟವರು.. ನಾಯಕನಾಗಿ ರವಿತೇಜ!