ಮುಂಬೈ: (ಫೆ.12) Crime: ಅಪರಾಧಗಳ ಪ್ರಕರಣ ಹೆಚ್ಚುತ್ತಿರುವ ಮುಂಬೈನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಕುಟುಂಬಸ್ಥರು ಭಯಭೀತರಾಗುವಂತೆ ಮಾಡಿದೆ. ಮುಂಬೈನ ಅಂಬೋಲಿ ಪ್ರದೇಶದಲ್ಲಿ 54 ವರ್ಷದ ವ್ಯಕ್ತಿಯನ್ನು ಕೊಂದು (Murder) ಆತನ ಶವವನ್ನು ಅಪಾರ್ಟ್‌ಮೆಂಟ್ Apartment ಒಂದರ 7ನೇ ಮಹಡಿಯಿಂದ ಎಸೆದಿರುವ ಘಟನೆ ಇಲ್ಲಿ ನಡೆಸಿದೆ

ಮೃತಪಟ್ಟ ವ್ಯಕ್ತಿಯ ಪತ್ನಿಯೇ ತನ್ನ ಮಗನೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಅವರಿಬ್ಬರನ್ನೂ ಬಂಧಿಸಲಾಗಿದೆ. ಮೃತ ವ್ಯಕ್ತಿಯ ಹೆಂಡತಿ ಮತ್ತು ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ police ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ವಾಸವಾಗಿದ್ದ ಶಂತನುಕೃಷ್ಣ ಶೇಷಾದ್ರಿ ಎಂಬ 54 ವರ್ಷದ ವ್ಯಕ್ತಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಹೆಂಡತಿ ಮತ್ತು ಮಗ ಪೊಲೀಸರಿಗೆ ತಿಳಿಸಿದ್ದರು. ಅವರು ಈ ಮೊದಲು ಕೂಡ ಆತ್ಮಹತ್ಯೆ suside ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಪೊಲೀಸರಿಗೆ ಹೇಳಿದ್ದರು. ಆದರೆ, ಪೊಲೀಸರ ತನಿಖೆ ವೇಳೆ ಅವರಿಬ್ಬರೂ ಸುಳ್ಳು ಹೇಳುತ್ತಿರುವುದು ಗೊತ್ತಾಗಿತ್ತು. ಅಲ್ಲದೆ, ಮಗನ ಜೊತೆ ಸೇರಿ ಗಂಡನನ್ನು ಕೊಂದಿದ್ದ ಮಹಿಳೆ ಬಳಿಕ ಸಾಕ್ಷ್ಯ Vitness ನಾಶಪಡಿಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ಮಂಜುನಾಥ ಶಿಂಗೆ ತಿಳಿಸಿದ್ದಾರೆ. ಮೃತ ವ್ಯಕ್ತಿಯ ಹೆಂಡತಿ ಮತ್ತು ಮಗ son ನನ್ನು ಬಂಧಿಸಲಾಗಿದೆ. ಈ ಪ್ರಕರಣದ ಬಗ್ಗೆ ನಾವು ಹೆಚ್ಚಿನ ತನಿಖೆ Investigation ನಡೆಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.