IPL cricket Bengaluru ಬೆಂಗಳೂರು- ಫೆ.12: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಇಂದು ಬೆಂಗಳೂರಿನಲ್ಲಿ ನಡೆದಿದ್ದು, ಪ್ರಮುಖ ಆಟಗಾರರನ್ನು ಖರೀದಿ ಮಾಡಲಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜಿಯಾಂಟ್ಸ್ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ತಂಡಕ್ಕೆ ಪ್ರಮುಖ ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿ ಮಾಡಲಾಗಿದೆ.
ಭಾನುವಾರವೂ ಬಿಡ್ಡಿಂಗ್ ಪ್ರಕ್ರಿಯೆ ಮುಂದುವರಿಯಲಿದೆ.
ಈಗಾಗಲೇ ನಡೆದಿರುವ ಆಟಗಾರರ ಪೈಕಿ ಇಂಡಿಯನ್ ಪ್ರೀಮಿಯರ್ ಲೀಗ್ IPL –2022 (ಐಪಿಎಲ್) ಮೆಗಾ Megha ಹರಾಜು ಪ್ರಕ್ರಿಯೆಯಲ್ಲಿ ಯುವ ಆಟಗಾರ ಇಶಾನ್ ಕಿಶನ್ Ishan kishan ಅವರನ್ನು ಮುಂಬೈ ಇಂಡಿಯನ್ಸ್ Mubai Indians(ಎಂಐ) ₹15.25 ಕೋಟಿ CR ನೀಡಿ ಖರೀದಿಸಿದೆ. ಸದ್ಯ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಇಶಾನ್ ಕಿಶನ್ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನೂ ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಒಳ್ಳೆಯ ನಿರೀಕ್ಷೆ ಹೊಂದಿದ್ದರು. ಆದರೆ ಹರಾಜು ಆರಂಭವಾದ ಬಳಿಕ ಎಲ್ಲವೂ ತಲೆಕೆಳಗೆ ಆದಂತಾಗಿದೆ. ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೇವಲ ರೂ. 6.25 ಕೋಟಿ ಬೆಲೆಗೆ ಮಾರಾಟವಾಗಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿದೆ. ಚನ್ನೈಸೂಪರ್ ಕಿಂಗ್ಸ್‌ನಲ್ಲಿದ್ದ ಡು ಪ್ಲೆಸೀಸ್ ಅವರನ್ನು ಆರ್‌ಸಿಬಿ ತಂಡ ಖರೀದಿಸಿದ ಬೆನ್ನಲ್ಲೇ ಡೇವಿಡ್ ವಾರ್ನರ್ ಅವರನ್ನೂ ಖರೀದಿಸಬಹುದು ಎನ್ನುವ ಮಾತುಗಳು ಕೇಳಿಬಂದಿತ್ತು. ಅಲ್ಲದೆ, ಮುಂಬೈ ಇಂಡಿಯನ್ಸ್ ವಾರ್ನರ್ ಅವರನ್ನು ವಶಪಡಿಸಿಕೊಳ್ಳಲು ಕೊನೆಯವರೆಗೂ ಪ್ರಯತ್ನಿಸಿತ್ತು. ಆದರೆ, ಕನಿಷ್ಠ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ delli capital ವಾರ್ನರ್ Devidf warner ಮಾರಾಟ sale ವಾಗಿರುವುದು ಹಲವರಿಗೆ ಬೇಸರದ ಸಂಗತಿಯೂ ಆಗಿದೆ.
ಈ ಹಿಂದೆ ಡೇವಿಡ್ ವಾರ್ನರ್ ಡೆಲ್ಲಿ ಡೇರ್ ಡೇವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದರು ನಂತರದಲ್ಲಿ ಸನ್‌ರೈಸಸ್ ಹೈದ್ರಾಬಾದ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಹಾಗೂ ತಂಡದ ಕ್ಯಾಪ್ಟನ್ ಆಗಿಯೂ ಉತ್ತಮ ಪ್ರದರ್ಶನ ನೀಡಿದ್ದರು. ವಾರ್ನರ್ ಅವರನ್ನು ಇಷ್ಟು ಕಡಿಮೆ ಬೆಲೆಗೆ ಬಿಡ್ ನಡೆಸುವುದರ ಹಿಂದೆ ಮತ್ತೊಮ್ಮೆ ಅವರನ್ನ ಅವಮಾನ ಮಾಡುವ ಉದ್ದೇಶವಿದೆಯ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
We're sure you loved that bid @mipaltan 😉💙
— IndianPremierLeague (@IPL) February 12, 2022
Welcome back to the Paltan @ishankishan51 pic.twitter.com/xwTbSi9z7b
ದಾಖಲೆ ಮಾರಾಟ:
ಇನ್ನು ಯುವ ವಿಕೆಟ್ viket ಕೀಪರ್ ಬ್ಯಾಟ್ಸ್ ಮನ್ ಜಾರ್ಖಂಡ್ ನ ಇಶಾನ್ ಕಿಶನ್ ಹಾಲಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಬರೆದಿದ್ದು, ಐಪಿಎಲ್ 2022 ಹರಾಜಿನ ಈವರೆಗಿನ ದುಬಾರಿ ಆಟಗಾರ ಎನಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ತಂಡದಿಂದ ದೊಡ್ಡ ಮೊತ್ತದ ಬಿಡ್ ಪಡೆದುಕೊಂಡ ಇಶಾನ್ ಕಿಶನ್ 15. 25 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾದರು. ಐಪಿಎಲ್ ಹರಾಜಿನಲ್ಲಿ ಈವರೆಗೂ 15 ಕೋಟಿ ಮೊತ್ತದ ಗಡಿ ದಾಟಿದ ಕೆಲವೇ ಕೆಲವು ಪ್ಲೇಯರ್ ಗಳಲ್ಲಿ ಇಶಾನ್ ಕಿಶನ್ ಒಬ್ಬರಾಗಿದ್ದಾರೆ. ಯುವರಾಜ್ ಸಿಂಗ್ 16 ಕೋಟಿಗೆ ಮಾರಾಟವಾಗಿದ್ದರೆ, ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ಖರೀದಿಯಾಗಿದ್ದರು. ಆದರೆ, ಬೆನ್ ಸ್ಟೋಕ್ಸ್ ಅವರ 14.50 ಕೋಟಿ ರೂಪಾಯಿ ದಾಖಲೆಯನ್ನು ಇಶಾನ್ ಕಿಶನ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಯಾವ ಆಟಗಾರರಿಗೆ ಎಷ್ಟು ಕೋಟಿ?
- ಶಾರ್ದೂಲ್ ಠಾಕೂರ್ – ಡೆಲ್ಲಿ ಕ್ಯಾಪಿಟಲ್ಸ್ – ₹10.75 ಕೋಟಿ
- ಪ್ರಸಿದ್ಧ ಕೃಷ್ಣ – ರಾಜಸ್ಥಾನ್ ರಾಯಲ್ಸ್ – ₹10 ಕೋಟಿ
- ಜಾನಿ ಬೆಸ್ಟೊ – ಪಂಜಾಬ್ ಕಿಂಗ್ಸ್ – ₹6.75 ಕೋಟಿ
- ದಿನೇಶ್ ಕಾರ್ತಿಕ್ – ಆರ್‌ಸಿಬಿ – ₹5.50 ಕೋಟಿ
- ಟಿ.ನಟರಾಜನ್ – ಸನ್‌ರೈಸರ್ಸ್ ಹೈದರಾಬಾದ್ – ₹4 ಕೋಟಿ
- ದೀಪಕ್ ಚಾಹರ್ – ಚೆನ್ನೈ ಸೂಪರ್ ಕಿಂಗ್ಸ್ – ₹14 ಕೋಟಿ
- ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – ₹15.25 ಕೋಟಿ
- ಅಂಬಟಿ ರಾಯುಡು – ಚೆನ್ನೈ ಸೂಪರ್ ಕಿಂಗ್ಸ್ – ₹6.75 ಕೋಟಿ
- ಮಿಚೆಲ್ ಮಾರ್ಷ್ – ಡೆಲ್ಲಿ ಕ್ಯಾಪಿಟಲ್ಸ್ – ₹6.5 ಕೋಟಿ
- ಕೃಣಾಲ್ ಪಾಂಡ್ಯ – ಲಖನೌ ಸೂಪರ್ ಜೈಂಟ್ಸ್ – ₹8.25 ಕೋಟಿ
- ವಾಷಿಂಗ್ಟನ್ ಸುಂದರ್ – ಸನ್‌ರೈಸರ್ಸ್ ಹೈದರಾಬಾದ್ – ₹8.75 ಕೋಟಿ
- ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – ₹8.25 ಕೋಟಿ
- ಆರ್.ಅಶ್ವಿನ್ – ರಾಜಸ್ಥಾನ್ ರಾಯಲ್ಸ್ – ₹5 ಕೋಟಿ
- ಪ್ಯಾಟ್ ಕಮಿನ್ಸ್ – ಕೆಕೆಆರ್ – ₹7.25 ಕೋಟಿ
- ಕಗಿಸೊ ರಬಾಡ – ಪಂಜಾಬ್ ಕಿಂಗ್ಸ್ – ₹9.25 ಕೋಟಿ
- ಟ್ರೆಂಟ್ ಬೋಲ್ಟ್ – ರಾಜಸ್ಥಾನ್ ರಾಯಲ್ಸ್ – ₹8 ಕೋಟಿ
- ಶ್ರೇಯಸ್ ಅಯ್ಯರ್ – ಕೆಕೆಆರ್ – ₹12.25 ಕೋಟಿ
- ಮೊಹಮ್ಮದ್ ಶಮಿ – ಗುಜರಾತ್ ಟೈಟನ್ಸ್ – ₹6.25 ಕೋಟಿ
- ಫಫ್ ಡುಪ್ಲೆಸಿಸ್ – ಆರ್‌ಸಿಬಿ – ₹7 ಕೋಟಿ
- ಕ್ವಿಂಟನ್ ಡಿಕಾಕ್ – ಲಖನೌ ಸೂಪರ್ ಜೈಂಟ್ಸ್ – ₹6.75 ಕೋಟಿ
- ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ – ₹6.25 ಕೋಟಿ
- ಹರ್ಷಲ್ ಪಟೇಲ್ – ಆರ್‌ಸಿಬಿ – ₹10.75 ಕೋಟಿ
- ದೀಪಕ್ ಹೂಡಾ – ಲಖನೌ ಸೂಪರ್ ಜೈಂಟ್ಸ್ – ₹5.75
- ನಿತೀಶ್ ರಾಣಾ – ಕೆಕೆಆರ್ – ₹8 ಕೋಟಿ
- ಜೇಸನ್ ಹೋಲ್ಡರ್ – ಲಖನೌ ಸೂಪರ್ ಜೈಂಟ್ಸ್ – ₹8.75 ಕೋಟಿ
- ಡ್ವೇನ್ ಬ್ರಾವೊ – ಚೆನ್ನೈ ಸೂಪರ್ ಕಿಂಗ್ಸ್ – ₹4.40 ಕೋಟಿ
- ದೇವದತ್ತ ಪಡಿಕ್ಕಲ್ – ರಾಜಸ್ಥಾನ್ ರಾಯಲ್ಸ್ – ₹7.75 ಕೋಟಿ
- ಜೇಸನ್ ರಾಯ್ – ಗುಜರಾತ್ ಟೈಟನ್ಸ್ – ₹2 ಕೋಟಿ
- ಶಿಮ್ರಾನ್ ಹೆಟ್ಮೆಯರ್ – ರಾಜಸ್ಥಾನ್ ರಾಯಲ್ಸ್ – ₹8.5 ಕೋಟಿ
- ಮನೀಶ್ ಪಾಂಡೆ – ಲಖನೌ ಸೂಪರ್ ಜೈಂಟ್ಸ್ – ₹4.6 ಕೋಟಿ
- ವಾಣಿಂದು ಹಸರಂಗ – ಆರ್‌ಸಿಬಿ – ₹10.75 ಕೋಟಿ
- ಭಾನುವಾರವೂ ಹರಾಜು ಮುಂದುವರಿಯಲಿದೆ…………….