CM K Chandrashekhar: (ಫೆ.12): ತೆಲಂಗಾಣದ ಮುಖ್ಯಮಂತ್ರಿ ಮತ್ತೋಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಸಿಎಂ ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ನಾನು ಹುಲಿಯ ಮಗ, ನನ್ನನ್ನು ಕೆಣಕಬೇಡಿ, ಕೆಣಕಿದರೆ ದೆಹಲಿಯ ಅಧಿಕಾರದ ಗದ್ದುಗೆಯಿಂದ ನಿಮ್ಮನ್ನು ಓಡಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜನಗಾಂವ್‍ನಲ್ಲಿ ಜಿಲ್ಲಾಧಿಕಾರಿ ನೂತನ ಕಚೇರಿಯನ್ನು ಉದ್ಘಾಸಿದ ಬಳಿಕ ಸಾರ್ವಜನಿಕ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ನೀವು ನನ್ನ ವಿರುದ್ಧ ಟೀಕೆ ಮಾಡಿರುವುದನ್ನು ನೋಡಿದ್ದೇನೆ. ದೆಹಲಿಯ ಕೋಟೆಗೆ ಬಿರುಗಾಳಿಯಾಗಲು ಸಿದ್ಧನಾಗಿದ್ದೇನೆ. ಎಚ್ಚರವಿರಲಿ ಮೋದಿ ಅವರೆ ನಾನು ಹುಲಿಯ ಮಗ ಎಂದಿದ್ದಾರೆ.ತೆಲಂಗಾಣ ರಾಜ್ಯದ ಜನರ ಸಮಸ್ಯೆಗಳನ್ನು ಪರಿಹರಿಸಲು, ಅವರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಸರ್ಕಾರವನ್ನು ಕೇಂದ್ರದಿಂದ ಕಿತ್ತೊಗೆಯಲು, ತಾವು ರಾಷ್ಟ್ರ ರಾಜಕಾರಣ ಪ್ರವೇಶಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (KCR) ತಿಳಿಸಿದ್ದಾರೆ. ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಮಾಡಿಲ್ಲ. ಕೃಷಿಯ ಒಂದು ಪಂಪ್‍ಸೆಟ್‍ಗೂ ಮೋಟಾರ್ ಪಂಪ್‍ಸೆಟ್ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಯಾವ ಪಿತೂರಿಗೂ ಬಗ್ಗುವುದಿಲ್ಲ
ಇತ್ತೀಚೆಗೆ ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್ ರಾವ್, ಪ್ರಧಾನಿ ಅಲ್ಪ ದೃಷ್ಠಿಯ ನಾಯಕ ಎಂದು ಟೀಕಿಸಿದ್ದಲ್ಲದೆ, ಬಿಜೆಪಿಯನ್ನು ಬಂಗಾಳಕೊಲ್ಲಿಯಲ್ಲಿ ಮುಳುಗಿಸಲಿದೆ ಎಂದಿದ್ದರು.ಪ್ರಧಾನಿ ಇತ್ತೀಚೆಗೆ ಹೈದರಾಬಾದ್‍ಗೆ ಭೇಟಿ ನೀಡಿ ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸದೆ ಚಂದ್ರಶೇಖರ್ ದೂರ ಉಳಿದಿದ್ದು ಅಚ್ಚರಿಗೆ ಕಾರಣವಾಗಿತ್ತು.
ಕೇಂದ್ರ ಬಿಜೆಪಿ ಸರ್ಕಾರದ ಯಾವ ಪಿತೂರಿ, ತಂತ್ರಗಾರಿಕೆಗೂ ನಮ್ಮ ತೆಲಂಗಾಣ ಸರ್ಕಾರ ಬಲಿಯಾಗುವುದಿಲ್ಲ. ಆ ಸರ್ಕಾರವನ್ನೇ ಕಿತ್ತೊಗೆಯುತ್ತೇವೆ. ಕೇಂದ್ರ ಬಿಜೆಪಿ ಸರ್ಕಾರದ ಯಾವ ಬೆದರಿಕೆಗಳಿಗೂ ಬಗ್ಗುವುದಿಲ್ಲ. ನಾನು ರಾಷ್ಟ್ರಮಟ್ಟದಲ್ಲಿ ಹೋರಾಡುತ್ತೇನೆ ಮತ್ತು ಗುಣಾತ್ಮಕ ಬದಲಾವಣೆಗಳನ್ನು ತರುತ್ತೇನೆ. ನಮ್ಮ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಮೋದಿ ಸರ್ಕಾರ ಮುಂದಾಗದೆ ಇದ್ದರೆ, ನಾವೂ ಸುಮ್ಮನೆ ಇರುವುದಿಲ್ಲ. ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ಒಂದೇ ತರ ನೋಡಿ, ಸಮಸ್ಯೆಗಳನ್ನು ಬಗೆಹರಿಸುವ ಇನ್ನೊಬ್ಬ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.
ಇಂದು ಮುಖ್ಯಮಂತ್ರಿಯವರು ಜನ್‍ಗಾಂಗ್ ಗೆ ಭೇಟಿ ನೀಡುವ ವೇಳೆ ಬಿಜೆಪಿ ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂಬ ಆರೋಪಗಳಿವೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೋ ನಿಜಾಮರ ಆಡಳಿತದಲ್ಲಿ ಇದ್ದೇವೆಯೋ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.