Brain Dead: (ಫೆ.12): ಮದುವೆಯಾಗಿ ಸುಖ ಜೀವನ ಕಾಣಬೇಕಿದ್ದ ಯುವತಿಯೊಬ್ಬಳ ಕನಸು ಆರತಕ್ಷತೆಯಲ್ಲಿ ಕೊನೆಕೊಂಡಿದೆ. ತನ್ನ ಮದುವೆಯ ಆರತಕ್ಷತೆಯಲ್ಲಿ ಕುಸಿದು ಬಿದ್ದು ಮದುಮಗಳು ಅಸ್ವಸ್ಥಳಾಗಿದ್ದು. ತಕ್ಷಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಲ್ಲಿನ ವೈದ್ಯರು ಆಕೆಯನ್ನು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿರುವ ಮನಕಲಕುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.

ಚೈತ್ರಾ (26) ಬ್ರೈನ್ ಡೆಡ್ ಆಗಿ ಅಸ್ವಸ್ಥಳಾದ ಮದುಮಗಳು. ಈ ಯುವತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರು. ಆಕೆಯ ನಿಧನಾನಂತರ ಚೈತ್ರಾಳ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿ, ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಓವರ್ ಟೇಕ್ ಮಾಡಲು ಹೋಗಿ ಬಸ್ ಪಲ್ಟಿ: ಸ್ಥಳದಲ್ಲಿ ಇಬ್ಬರ ಸಾವು
ಹಾವೇರಿ: ಲಾರಿ ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿ ನಡೆದಿದೆ. ಸೇತುವೆಯ ಮೇಲಿಂದ ಸರ್ವಿಸ್ ರಸ್ತೆಗೆ ಬಸ್ ಉರುಳಿಬಿದ್ದಿದೆ. ಖಾಸಗಿ ಬಸ್ಸಿನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ . 15 ಪ್ರಯಾಣಿಕರಿಗೆ ಗಾಯಗಳಾಗಿವೆ, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಮೇಲೆ ಈ ಅಪಘಾತ ಸಂಭವಿಸಿದ್ದು,ಬೆಂಗಳೂರಿನಿಂದ ಗೋಕಾಕಗೆ ಈ ಸ್ಲೀಪರ್ ಬಸ್ ಹೊರಟಿತ್ತು. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಕ್ರೇನ್ ಸಹಾಯದಿಂದ ಬಸ್ ಮೇಲೆತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ:Black Magic: ವಾಮಾಚಾರಕ್ಕಾಗಿ ಬಾಲಕನ ಅಪಹರಣ: ಮೂವರ ಬಂಧನ