Food Dept Recruitment: ಆಹಾರ ಇಲಾಖೆಯಲ್ಲಿ ಹೊಸ ನೇಮಕಾತಿ ನಡೆಯುತ್ತಿದೆ. 14 ಸಾವಿರಕ್ಕಿಂತಲೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ವಿದ್ಯಾರ್ಹತೆ ಅರ್ಜಿ ಶುಲ್ಕ ಸೇರಿದಂತೆ ಪೂರ್ತಿ ವಿವರ ಇಂತಿದೆ.
ವಿದ್ಯಾರ್ಹತೆ
8ನೇ ತರಗತಿ, ಹತ್ತನೇ ತರಗತಿ, ಪಿಯುಸಿ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಪಾಸಾಗಿರುವವರು ಅರ್ಜಿಯನ್ನು ಸಲ್ಲಿಸಬಹುದು.

ಯಾವ ಯಾವ ಹುದ್ದೆ ಮತ್ತು ವಯೋಮಿತಿ
ಮ್ಯಾನೇಜರ್ ಹುದ್ದೆ: ಮ್ಯಾನೇಜರ್ ( ಹಿಂದಿ ) 35 ವರ್ಷವಾಗಿರಬೇಕು
ಜೂನಿಯರ್ ಇಂಜಿನಿಯರ್: 28 ವರ್ಷ. ಸ್ಟೆನೋಗ್ರಾಫರ್ ಗ್ರೇಡ್ 2: 25 ವರ್ಷ, ಟೈಪಿಸ್ಟ್( ಹಿಂದಿ ):25 ವರ್ಷ, ವಾಚ್ ಮ್ಯಾನ್ :25 ವರ್ಷ ವಯಸ್ಸಾಗಿರಬೇಕು. ಇದರ ಜೊತೆಗೆ ವಯಸ್ಸಿನ ಸಡಿಲಿಕೆಯನ್ನು ಕೂಡ ನೀಡಲಾಗಿದ್ದು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಡಿಪಾರ್ಟ್ಮೆಂಟ್ ಆಫ್ ಎಫ್ ಸಿ ಐ ಎಂಪ್ಲೋಯಗಳಿಗೆ 50 ವರ್ಷದ ವರೆಗೆ ವಯಸ್ಸಿನ ಸಡಿಲಿಕೆ ಇರುತ್ತದೆ.
ಪಿಡಬ್ಲ್ಯೂಡಿ ಜನರಲ್ ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯೂಡಿ ಆಫೀಸ್ ಅಭ್ಯರ್ಥಿಗಳಿಗೆ 13 ವರ್ಷ ಪಿಡಬ್ಲ್ಯೂಡಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 15ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಾಗ ಎಷ್ಟು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್ಸಿಎಸ್ಟಿ ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳಿಗೆ 800ರೂ ಅರ್ಜಿ ಶುಲ್ಕ ಇರುತ್ತದೆ.
ಆಯ್ಕೆ ವಿಧಾನ:ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ. ಆನ್ಲೈನ್ ಟೆಸ್ಟ್ , ಕೌಶಲ್ಯ ಪರೀಕ್ಷೆ ನಂತರ ದಾಖಲೆಗಳ ಪರಿಶೀಲನೆ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ಕೊನೆಯ ದಿನ:ಈ ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕವನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದಿನಾಂಕ ಬಿಡುಗಡೆಯಾದ ನಂತರ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದು.