Hijab Controversy: (ಫೆ.11):ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಇಂದು ಮತ್ತೊಂದು ಅರ್ಜಿ ಸಲ್ಲಿಕೆ ಆಗಿದೆ. ವಿವಾದಕ್ಕೆ ಸಂಬಂಧಿಸಿ ಮತ್ತೊಂದು ರಿಟ್ ಅರ್ಜಿ ಸಲ್ಲಿಕೆ ಆಗಿದ್ದು, ಇಂದು ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಈ ಅರ್ಜಿ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶಕ್ಕೆ ತಡೆ ಕೋರಿ ಆಯಿಷತ್, ಶಿಫಾ ಮತ್ತು ಇತರೆ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ
ವಕೀಲರಾದ ನಿಶಾಂತ್ ಪಾಟೀಲ್, ಶಾಹುಲ್ ಹಮೀದ್, ಮೊಹ್ಮದ್ ನಿಯಾಸ್ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ದೇವದತ್ ಕಾಮತ್ ಅವರು ಈ ಅರ್ಜಿ ವಾದ ಮಂಡಿಸಲಿದ್ದಾರೆ.
ಈಗಾಗಲೇ ಹೈ ಕೋರ್ಟ್ ಮುಂದಿನ ಆದೇಶವರೆಗೂ ಧಾರ್ಮಿಕ ವಸ್ತ್ರಗಳಿಲ್ಲದೇ ಶಾಲೆ ಕಾಲೇಜುಗಳಿಗೆ ತೆರಳುವಂತೆ ಮಧ್ಯಂತರ ಆದೇಶದ ನೀಡಿದೆ. ಈ ಆದೇಶಕ್ಕೆ ತಡೆ ಕೋರಿ ಹಿಜಾಬ್ ಸಹಿತ ತರಗತಿ ಹಾಜರಾಗಲು ಅವಕಾಶ ಕೋರಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.