ಬೆಂಗಳೂರು:(ಫೆ.10): Hijab Controversy:-ಹಿಜಬ್ ವಿವಾದ ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಶಾಲಾ ಮಕ್ಕಳಿಗೆ ಕೇಸರಿ ಶಾಲುಗಳನ್ನು ಪೂರೈಸಿದ್ದೇ ನಾವು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದು ಒಪ್ಪಿಕೊಳ್ಳುವ ಮೂಲಕ ಹಿಜಬ್ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಮುಂದಿನ ರಾಜಕೀಯ ಹಣಾಹಣಿಗೆ ಕರ್ನಾಟಕವನ್ನು ಸಜ್ಜುಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಯೋಧ್ಯೆಯ ಶ್ರೀರಾಮನ ಕಾರ್ಖಾನೆಯಿಂದ ಹನುಮಾನ್ ಟ್ರಾನ್ಸ್ ಪೋರ್ಟ್(Hanuman Transport) ಮೂಲಕ ಕೇಸರಿ ಶಾಲನ್ನು ತರಿಸಿ ಎಲ್ಲೆಡೆ ತಲುಪಿಸಿದ್ದೇ ನಾವುʼ. 50 ಲಕ್ಷ (50 lacks) ಕೇಸರಿ ಶಾಲುಗಳನ್ನು ಸೂರತ್ (Surat) ನಿಂದ ತರಿಸಿದ್ದಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಆದರೆ ಅವರಿಗೆ ಸತ್ಯ ಗೊತ್ತಿಲ್ಲ.
ಈ ಕೇಸರಿ ಶಾಲುಗಳನ್ನು ಸೂರತ್ ನಿಂದ ತರಿಸಿಲ್ಲ, ಬದಲಿಗೆ ಅಯೋಧ್ಯೆಯ ಶ್ರೀರಾಮನ ಕಾರ್ಖಾನೆಯಿಂದ ತರಿಸಲಾಗಿದೆ. ತರಿಸಿ ಎಲ್ಲರಿಗೆ ತಲುಪಿಸಲಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿಲ್ಲದೇ ಇರುವುದೆಂದರೆ ವಿದ್ಯಾರ್ಥಿಗಳು ಸೇರಿದಂತೆ ದೇಶದ ಪ್ರತಿಯೊಬ್ಬರ ಹೃದಯದಲ್ಲಿ ಕೇಸರಿ(Saffron) ಇದೆ. ಇದೇ ಕಾರಣಕ್ಕೆ ಅಯೋಧ್ಯೆಯ ಶ್ರೀರಾಮನ ಫ್ಯಾಕ್ಟರಿಯಿಂದ ಕೇಸರಿ ಶಾಲುಗಳನ್ನು ತರಿಸಿ ಎಲ್ಲೆಡೆ ತಲುಪಿಸಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಇವೆಲ್ಲ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಾಗುವುದಿಲ್ಲ. ಬದಲಿಗೆ ಬಂಡೆ ಕದ್ದು ವಿವಿಧ ರಾಜ್ಯಗಳಿಗೆ ಮಾರುವುದು ಡಿ.ಕೆ.ಬ್ರದರ್ಸ್(DK Brothers)ಗೆ ಗೊತ್ತಿದೆ ಎಂದು ಕುಟುಕಿದ್ದಾರೆ.