ನವದೆಹಲಿ: ಪಂಚರಾಜ್ಯಗಳ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವ ಹೊತ್ತಿನಲ್ಲೇ ಬಿಜೆಪಿ ಪಕ್ಷಕ್ಕೆ ಡಬ್ಲ್ಯೂಡಬ್ಲ್ಯೂಇ (ವೃತ್ತಿಪರ ಕುಸ್ತಿಪಟು) ಕುಸ್ತಿಪಟು (WWE wrestler ) ‘ದಲೀಪ್‌ಸಿಂಗ್ ರಾಣಾ ಅಕಾ ದಿಗ್ರೇಟ್ ಖಾಲಿʼ (The Great Khali) ಇಂದು ಸೇರ್ಪಡೆಗೊಂಡಿದ್ದಾರೆ.
ಫೆ.20 ರಂದು ಪಂಜಾಬ್ ಚುನಾವಣೆ ( Punjab Election) ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮುಂಚಿತವಾಗಿಯೇ ಖಾಲಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದನ್ನೂ ಓದಿ: Commission Mafia: 40 ಪರ್ಸೆಂಟ್ ಕಮಿಷನ್‌ನಿಂದ ಕಾಮಗಾರಿಗಳು ಕಳಪೆ; ಗುತ್ತಿಗೆದಾರರಿಂದ ಗಂಭೀರ ಆರೋಪ!
Dalip Singh Rana, popularly known as ‘The Great #Khali', joined #BJP at Party National Headquarters, Deen Dayal Upadhyay Marg, New Delhi. pic.twitter.com/NM0kvlKQ0o
— Dr Jitendra Singh (@DrJitendraSingh) February 10, 2022
ದಿಲ್ಲಿಯ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ(BJP) ಸೇರ್ಪಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ದಿ ಗ್ರೇಟ್ ಖಾಲಿ, ʻಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಪಕ್ಷದ ರಾಷ್ಟ್ರೀಯ ನೀತಿಗಳಿಂದಾಗಿ ನಾನು ಪ್ರಭಾವಿತನಾಗಿದ್ದೇನೆ. ಪ್ರಧಾನಿ ಮೋದಿಯವರು ರಾಷ್ಟ್ರಕ್ಕಾಗಿ ಮಾಡಿದ ಕೆಲಸವು ಅವರನ್ನು ಉತ್ತಮ ಪ್ರಧಾನಿಯನ್ನಾಗಿ ರೂಪಿಸಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದಲ್ಲಿ ನಾನೂ ಏಕೆ ಭಾಗಿಯಾಗಬಾರದು? ಎಂದು ಯೋಚಿಸಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆʼ ಎಂದರು.

2000 ಇಸವಿಯಲ್ಲಿ ಡಬ್ಲ್ಯೂಡಬ್ಲ್ಯೂಇ ಕುಸ್ತಿಪಟುವಾಗಿ (WWE wrestler) ಪದಾರ್ಪಣೆ ಮಾಡಿದ ಖಾಲಿ ಅವರು, ಅದಕ್ಕೂ ಮುನ್ನ ಪಂಜಾಬ್ ಪೊಲೀಸ್ ಅಧಿಕಾರಿಯಾಗಿದ್ದರು. ವೃತ್ತಿಯನ್ನು ತ್ಯಜಿಸಿದ ನಂತರ ಡಬ್ಲ್ಯೂಡಬ್ಲ್ಯೂಇ ನಲ್ಲೂ ಚಾಂಪಿಯನ್ ಪಟ್ಟ ಗಳಿಸಿದ್ದರು. ಇದನ್ನೂ ಓದಿ: Live: Karnataka Hijab Row: ಹಿಜಾಬ್ ವಿವಾದ ಕುರಿತು ಹೈ ಕೊರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ
2020ರಲ್ಲಿ ಕೃಷಿ ಮಸೂದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆಂಬಲ ನೀಡಿದ್ದರು. ಅಲ್ಲದೆ, ರೈತರನ್ನು ಬೆಂಬಲಿಸುವಂತೆ ಇತರರಿಗೂ ಕರೆ ನೀಡಿದ್ದರು.