ನವದೆಹಲಿ: ಫೆ.8 Praveen Kumar Sobti: ಐತಿಹಾಸಿಕ ಮಹಾಭಾರತದಲ್ಲಿ ಭೀಮ್ ಪಾತ್ರವನ್ನು ನಿರ್ವಹಿಸಿದ ನಟ ಪ್ರವೀಣ್ ಕುಮಾರ್ ಸೋಬ್ತಿ (74) ಅವರು ನಿಧನರಾಗಿದ್ದಾರೆ. ಪ್ರವೀಣ್ ಕುಮಾರ್ ಅವರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದರು ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪ್ರವೀಣ್ ಕುಮಾರ್ ಅವರ ನಿಧನದ ಸುದ್ದಿಯಿಂದ ಮತ್ತೊಮ್ಮೆ ಮನೋರಂಜನಾ ಜಗತ್ತು ಶೋಕದಲ್ಲಿ ಮುಳುಗಿದೆ.
ನಟನಾಗಿ ಅಭಿನಯಿಸುತ್ತಿದ್ದ ಪ್ರವೀಣ್ ಕುಮಾರ್ ಅವರು ತಮ್ಮ ವೃತ್ತಿಜೀವನವನ್ನು ಆಟಗಾರರಾಗಿ ಪ್ರಾರಂಭಿಸಿದ್ದರು. ಪ್ರವೀಣ್ ಕುಮಾರ್ ಅವರು ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಹಾಗೂ ಅಥ್ಲೆಟ್ ಆಟಗಾರರಾಗಿ ಮಿಂಚಿದರು.

ಏಷ್ಯನ್ ಗೇಮ್ಸ್ ನಲ್ಲಿ 2 ಚಿನ್ನ 1 ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆದ್ದಿದ್ದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕವನ್ನು ಕೂಡ ಗೆದ್ದಿದ್ದರು. ಕ್ರೀಡೆಗೆ ಅಭೂತಪೂರ್ವ ಕೊಡುಗೆ ನೀಡಿದ್ದ ಪ್ರವೀಣ್ ಕುಮಾರ್ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸರ್ಕಾರದಿಂದ ಬಿಎಸ್ಸೆಫ್ ನಲ್ಲಿ ಪ್ರವೀಣ್ ಕುಮಾರ್ ಅವರಿಗೆ ಕೆಲಸವೂ ಸಿಕ್ಕಿತ್ತು ಕೆಲವು ದಿನ ಕೆಲಸ ಮಾಡಿ ನಂತರ ನಟನೆಯತ್ತ ಮುಖ ಮಾಡಿದ್ದರು.

ಪ್ರವೀಣ್ ಕುಮಾರ್ ಅವರು ತಮ್ಮ ಮೊದಲ ಬಾಲಿವುಡ ಚಿತ್ರಕ್ಕೆ ಸಹಿ ಹಾಕಿದ್ದರು. ಪ್ರವೀಣ್ ಅವರು ಅನೇಕ ಚಿತ್ರಗಳಲ್ಲಿ ಸಾಹಸಮಯ ದೃಶ್ಯಗಳನ್ನು ಮಾಡಿದ್ದರು. ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸೂಪರ್ ಹಿಟ್ ಶಾ ಚಿತ್ರದಲ್ಲಿ ಮುಕ್ತ ಸಿಂಗ್ ಪಾತ್ರ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಕರಿಷ್ಮ ಕುದೃತ್ ಕಾ, ಯುದ್ಧ, ಜಬರ್ದಸ್ತ್, ಸಿಂಘಸನ್ , ಖುದ್ಗಜ್ , ಲೋಹ, ಮೊಹಬತ್ ಕೆ ದುಶ್ಮನ್, ಎಲೇಕಾ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಬಿ ಆರ್ ಚೋಪ್ರಾ ಅವರ ನಿರ್ದೇಶನದ ಮಹಾಭಾರತ ದಲ್ಲಿ ಭೀಮನ ಪಾತ್ರಕ್ಕೆ ಜೀವ ತುಂಬಿದ್ದರು. ಅಂದಿನಿಂದ ಅವರು ಎಲ್ಲೇ ಹೋದರೂ ಭೀಮ ಎಂದೇ ಗುರುತಿಸುತ್ತಿದ್ದರು. ಅಷ್ಟೆಲ್ಲ ಜನಪ್ರಿಯತೆ ಗಳಿಸಿದ್ದ ನಂತರವೂ ಪ್ರವೀಣ್ ಕುಮಾರ್ ಅವರು ಕೊನೆಯ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಕಳೆದಿದ್ದರು. ಸರ್ಕಾರಕ್ಕೂ ಧನ ಸಹಾಯಕ್ಕಾಗಿ ಮನವಿ ಮಾಡಿದ್ದರು.

ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರವೀಣ್ ಕುಮಾರ್ ಅವರಿಗೆ ಏಷ್ಯನ್ ಗೇಮ್ಸ್ ವತಿಯಿಂದ ಪದಕ ಪಡೆದಿದ್ದ ಸಲುವಾಗಿ ಪಿಂಚಣಿಯನ್ನು ನೀಡುತ್ತಿದ್ದರು ಆದರೆ ಸರ್ಕಾರದಿಂದ ಯಾವುದೇ ಪಿಂಚಣಿ ಸಿಗಲಿಲ್ಲ ಎಂದು ಹೇಳಿದ್ದರು ಹಲವು ಬಾರಿ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. 2013ರಲ್ಲಿ ಪ್ರವೀಣ್ ಕುಮಾರ್ ಅವರು ರಾಜಕೀಯ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದರು. ಆಮ್ ಆದ್ಮಿ ಪಕ್ಷಕ್ಕೆ, ದೆಹಲಿಯ ಬಜೀಪೂರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.