ಕೊಪ್ಪಳ: (ಫೆ.8): Religious Amiability ಹಿಜಾಬ್ , ಕೇಸರಿ ಶಾಲು ವಿವಾದ ಎಲ್ಲೆಡೆ ಮನೆ ಮಾಡಿರುವಾಗ ಈ ಮಧ್ಯೆ ಮುಸ್ಲಿಂ ವ್ಯಕ್ತಿಯ ಅಂತ್ಯಸಂಸ್ಕಾರ ಮಾದರಿಯಾಗಿದೆ. ಯಾಕೆಂದರೆ ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಹಿಂದೂ ವಿಧಿ ವಿಧಾನಕ್ಕೆ ಅವಕಾಶ ನೀಡಲಾಗಿರುವುದು ವಿಶೇಷವಾಗಿದೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಹುಸೇನ್ ಸಾಬ್ ನೂರ್ ಬಾಷಾ ಎಂಬುವವರ ಅಂತ್ಯಕ್ರಿಯೆ ವೇಳೆ ರಾತ್ರಿಯಿಡೀ ಭಜನೆ ಮಾಡಿ ಗ್ರಾಮಸ್ಥರು ಭಾವೈಕ್ಯತೆ ಮೆರೆದಿದ್ದಾರೆ.

ಮುಸ್ಲಿಂ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಹಾಗೂ ಮುಸ್ಲಿಂ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಎರಡು ರೀತಿಯ ಧಾರ್ಮಿಕ ಆಚರಣೆಗಳು ಅವಕಾಶ ನೀಡಲಾಗಿದೆ ಭಾವೈಕ್ಯತೆಗೆ ಮಾದರಿಯಾಗಿದ್ದಾರೆ.ವ್ಯಕ್ತಿಯು ಯಾವ ಧರ್ಮದವರು ಆಗಿದ್ದರೂ ಮಾನವೀಯತೆ ಪ್ರೀತಿ ಹಾಗೂ ಹೊಂದಾಣಿಕೆ ಮುಖ್ಯ ಎಂದು ಗ್ರಾಮಸ್ಥರು ಸಾರಿದ್ದಾರೆ.
ಹಿಜಾಬ್ ಧರಿಸಿ ಶಾಲೆಗೆ ಬರುತ್ತೇನೆ ಎಂದು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ ಇನ್ನೊಂದೆಡೆ ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾಗುತ್ತೇನೆ ಎಂದು ಪೈಪೋಟಿ ನಡೆಯುತ್ತಿದೆ. ಈ ಕುರಿತು ಹೈಕೋರ್ಟ್ಗೆ ಕೂಡ ಅರ್ಜಿಗಳು ಸಲ್ಲಿಕೆಯಾಗಿವೆ. ಇದರೆಲ್ಲದರ ಮಧ್ಯೆ ಇಲ್ಲಿನ ಗ್ರಾಮಸ್ಥರು ದ್ವೇಷ ಬಿಟ್ಟು ಭಾವೈಕ್ಯತೆ ಮೆರೆದಿರುವುದು ಮೆಚ್ಚುವಂತಹ ವಿಷಯವಾಗಿದೆ. ವ್ಯಕ್ತಿಯ ಪಾರ್ಥಿವ ಶರೀರದ ಮುಂದೆ ಮಹಿಳೆಯರು ಕುಳಿತಿರುವುದನ್ನು ಕಾಣಬಹುದು ಇನ್ನೊಂದೆಡೆ ಗ್ರಾಮಸ್ಥರು ಸೇರಿ ಒಟ್ಟಾಗಿ ಭಜನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:Hijab: ಹಿಜಾಬ್ ಹಾಗು ಧರ್ಮದ ಆಚರಣೆ ಕುರಿತು ಮಧ್ಯ ಪ್ರವೇಶಿಸದಂತೆ ಹೈಕೋರ್ಟ್ ಮೊರೆ ಹೋದ ವಿದ್ಯಾರ್ಥಿನಿ