Hijab: (ಫೆ.8):ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಇಂದು ರಿಟ್ ವಿಚಾರಣೆ ನಡೆಯಲಿದೆ. ವಾದ ಮಂಡನೆಗೆ ಸಿದ್ಧವಾಗಿರುವುದಾಗಿ ರಾಜ್ಯ ಸರ್ಕಾರದ ಪರ ಎಜಿ ಪ್ರಭುಲಿಂಗ್ ಹೇಳಿಕೆ ನೀಡಿದ್ದಾರೆ. ಲಿಖಿತ ಹೇಳಿಕೆಯನ್ನು ಕೋರ್ಟಿಗೆ ಸಲ್ಲಿಸಲಾಗಿದ್ದು ಇನ್ನು ಕೆಲವರು ಅರ್ಜಿ ಸಲ್ಲಿಸುತ್ತಿದ್ದಾರೆ ಹಾಗೂ ಕಾಲಾವಕಾಶ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ಪರ ವಕೀಲರಾದ ಎಜಿ ಪ್ರಭುಲಿಂಗ್ ಹೇಳಿದ್ದಾರೆ.

ಎಷ್ಟೇ ಕೇಸ್ ಸಲ್ಲಿಸಿದರು ಒಂದೇ ವಿಚಾರಣೆ ನಡೆಯಲಿದೆ ನೀಡುವ ತೀರ್ಪು ಎಲ್ಲಾ ಕೆಲಸಗಳಿಗೂ ಅನ್ವಯವಾಗಲಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಪ್ರಕರಣದ ಪಟ್ಟಿಯಲ್ಲಿ 61ನೇ ನಂಬರ್ ಆಗಿ ಹಿಜಾಬ್ ಪ್ರಕರಣವಿದೆ.
ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಕುರಿತ ಸಂಘರ್ಷ ನಡೆಯುತ್ತಿದ್ದು. ಈ ಕುರಿತು ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಸಂಬಂಧಪಟ್ಟಂತೆ ವಿಚಾರಣೆ ಹೈಕೋರ್ಟಿನ ಏಕಸದಸ್ಯಪೀಠ ದಲ್ಲಿ ನಡೆಯಿತು.
ಅರ್ಜಿ ವಿಚಾರಣೆ ಆರಂಭದಲ್ಲಿ ನ್ಯಾಯಾಧೀಶರು ಸಂವಿಧಾನವೇ ನಮಗೆ ಭಗವದ್ಗೀತೆ, ವಿದ್ಯಾರ್ಥಿಗಳು ರಸ್ತೆಯಲ್ಲಿ ರುವುದನ್ನು ನೋಡಲು ಸಾಧ್ಯವಿಲ್ಲ ವಾಟ್ಸಾಪ್ ಓಪನ್ ಮಾಡಿದರೆ ದಿನನಿತ್ಯ ಇದೇ ಕುರಿತಂತೆ ಚರ್ಚೆಗಳು ನಡೆಯುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವತಿಯರ ಪರ ವಾದ ಮದಿಸಿದ ವಕೀಲರು:
ನಾವು ನಮ್ಮ ಹಕ್ಕಿಗಾಗಿ ಬಂದಿದ್ದೇವೆ. ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಈಗಾಗಲೇ ಪರೀಕ್ಷೆಗಳು ಸಮೀಪಿಸುತ್ತಿದೆ ಹಿಜಾಬ್ ಧರಿಸಿ ಬರಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು. ಹಿಜಾಬ್ ಹಾಗೂ ಸಮವಸ್ತ್ರ ಒಂದೇ ಬಣ್ಣದಲ್ಲಿ ಇರುವಂತೆ ಸಮವಸ್ತ್ರ ಇರಬೇಕು ಎಂದು ಮನವಿ ಮಾಡಿದ್ದಾರೆ ಸರ್ಕಾರ ಈಗಾಗಲೇ ಸಮವಸ್ತ್ರದ ಕುರಿತು ಆದೇಶ ಹೊರಡಿಸಿದೆ ಎಂದು ಅರ್ಜಿದಾರರ ಪರ ವಕೀಲರು ಆದೇಶದ ಪ್ರತಿಯನ್ನು ಓದಿದರು.
ಹಿಜಾಬ್ ಆಚರಣೆಯ ಒಂದು ಅಂಗ ಎಂಬುದರ ಬಗ್ಗೆ ವಾದವನ್ನು ಮಂಡಿಸಲಾಯಿತು.
ಹಿಜಾಬ್ ಮುಸ್ಲಿಮರ ಅವಿಭಾಜ್ಯ ಅಂಗ ಎಂಬುದರ ಕುರಿತು ನ್ಯಾಯಾಧೀಶರು ಮಾಹಿತಿ ಕೇಳಿದರು, ಇಸ್ಲಾಂ ಕಾನೂನಿನ ಮುಲ್ಲಾ ಪುಸ್ತಕದಲ್ಲಿದೆ ಎಂದು ಮಾಹಿತಿ ನೀಡಿದರು. ಇದರ ಕುರಿತು quran.com ಎಂಬ ವೆಬ್ಸೈಟಿನಲ್ಲಿ ಪ್ರತಿ ಇದೆ ಎಂದು ಹೇಳಿದರು.
ಹಿಜಾಬ್ ಮೂಲಭೂತ ಹಕ್ಕಲ್ಲ ಎಂದು ಸರ್ಕಾರ ಹೇಳಲು ಬರುವುದಿಲ್ಲ. ಮೂಲಭೂತ ವಲ್ಲದ ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬಹುದು. ಈ ವೇಳೆ ಕರ್ನಾಟಕದ ಹೈಕೋರ್ಟ್ ವೈದ್ಯಕೀಯ ಪರೀಕ್ಷೆಯ ವೇಳೆ ಹಿಜಾಬ್ ಧರಿಸಲು ಅನುಮತಿ ನೀಡಿದೆ ಹಾಗೆ ಇಲ್ಲಿಯೂ ಕೂಡ ಅನುಮತಿ ನೀಡಬೇಕು ಎಂದು ವಕೀಲರು ಮನವಿ ಮಾಡಿದರು.
ಎದೆಯ ಮೇಲೆ ಶಿರದ ಮೇಲೆ ವಸ್ತ್ರವನ್ನು ಧರಿಸಬೇಕು. ಖಾಸಗಿ ಅಂಗಗಳ ಮೇಲೆ ವಸ್ತ್ರ ಧರಿಸಬೇಕು. ಪತಿ ಮಕ್ಕಳು ಹಾಗೂ ಸಖಿಯರ ಮುಂದೆ ವಿಚಾರಿಸಲು ವಿನಾಯ್ತಿ ಇದೆ ಹಾಗೂ ಇಸ್ಲಾಂ ಧರ್ಮದ ಎಲ್ಲಾ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ವಾದ ಮಂಡಿಸಿದರು.
ಮೂಲಭೂತ ಆಚರಣೆಗಳನ್ನೂ ಧರ್ಮದ ನಂಬಿಕೆಗಳ ನೆಲೆಗಟ್ಟಿನಲ್ಲಿ ಆಧಾರ ಮಾಡಬೇಕು. ಜಾತ್ಯತೀತ ಭಾವನೆ ಆಧಾರದ ಮೇಲೆ ಹಿಜಾಬ್ ತರಬಾರದು. ಧಾರ್ಮಿಕ ಅಧಿಕಾರಿಗಳನ್ನು ಮೀರಿ ಸರ್ಕಾರ ಯಾವುದೇ ಆದೇಶ ತರುವಂತಿಲ್ಲ ಎಂದು ಹೇಳಿದರು.
ಮಹಿಳೆಯು ವಯಸ್ಕರಾದ ಬಳಿಕ ಮುಖ ಮತ್ತು ಕೈ ತೋರಿಸುವಂತಿಲ್ಲ ಎಂದು ಕುರಾನ್ ದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಮಹಿಳೆಯರು ಹಿಜಾಬ್ ಧರಿಸುವುದು ಎಂದು ಹೇಳಿದ್ದಾರೆ. ಹಿಜಬ್ ಮೂಲಭೂತ ಹಕ್ಕು ಎಂದು ಕೇರಳ ಹೈಕೋರ್ಟ್ ಹೇಳಿದ್ದು, ಏಕ ಸದಸ್ಯ ಪೀಠವು ತೀರ್ಪನ್ನು ಎತ್ತಿ ಹಿಡಿದಿದೆ ಸಿಬಿಎಸ್ಸಿ ಪರೀಕ್ಷೆ ಬೇಳೆ ಹಿಜಾಬ್ ಧರಿಸಲು ಅನುಮತಿ ನೀಡಿದೆ ಹಾಗಾಗಿ ಕರ್ನಾಟಕದ ಎಲ್ಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು.
ಸರ್ಕಾರದ ಪರ ವಕೀಲರು ಹೇಳಿದ್ದೇನು?
ನಾವು ಸಂವಿಧಾನಿಕ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಬಹುದು ಎಲ್ಲಾ ವಿಷಯಗಳಿಗೂ ಔದಾರ್ಯ ತೋರಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ವಾದವನ್ನು ಮಂಡಿಸಿದರು.
ಹಿಜಾಬ್ ಕುರಿತು ಹೇಳಿದ್ದೇನು?
ನಾವು ಬುರ್ಖಾ ಬಗ್ಗೆ ಮಾತನಾಡುತ್ತಿಲ್ಲ, ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ವಿಚಾರಿಸುವುದು ಖಾಸಗಿತನದ ಹಕ್ಕು ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸರ್ಕಾರದ ಆದೇಶ ವ್ಯಾಪ್ತಿಗೆ ಮೀರಿದೆ. ವಸ್ತ್ರಸಂಹಿತೆ ಸಂಬಂಧ ಸರ್ಕಾರ ಸ್ಪಷ್ಟವಾದ ಆದೇಶವನ್ನು ಇನ್ನೂ ನೀಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶರು ಕುರಾನ್ ಪ್ರತಿಯೊಂದು ತರಿಸಿಕೊಂಡು ಮಹಿಳೆಯರು ಧರಿಸುವ ವಸ್ತ್ರದ ಬಗ್ಗೆ ಮಾಹಿತಿಯನ್ನು ಪಡೆದರು. ಖುರಾನ್ ನಲ್ಲಿ ಕೆಲವು ಮೂಲಭೂತ ಆಚರಣೆಗಳ? ಇವುಗಳ ವ್ಯಾಪ್ತಿ ಏನು ಎಂದು ವಕೀಲರಿಗೆ ಕೇಳಿದರು.
ಸರ್ಕಾರಗಳು ಆದೇಶವನ್ನು ಹೊರಡಿಸಬಹುದು, ನಾಗರಿಕರು ಇದಕ್ಕೆ ಪ್ರಶ್ನೆಯನ್ನು ಮಾಡಬಹುದು. ಆದೇಶವನ್ನು ನೀಡುವಂತಿಲ್ಲ ಎಂದು ಹೇಳುವ ಹಾಗಿಲ್ಲ. ಸರ್ಕಾರ ಸಂವಿಧಾನದ ಒಂದು ಭಾಗವಾಗಿದೆ. ಸರ್ಕಾರದ ಊಹೆಗಳ ಮೇಲೆ ನಿರ್ಧಾರಕ್ಕೆ ಬರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು. ಈ ವೇಳೆ ಕೇರಳ ಹೈಕೋರ್ಟ ಮುಂದಿಟ್ಟ ನ್ಯಾಯಾಲಯ ಕೈ ಹಾಗೂ ಮುಖ ಅಪರಿಚಿತರಿಗೆ ತೋರಿಸಬಹುದು ಎಂದು ಹೇಳಿದೆಯಲ್ಲ. ಹಾಗಾದರೆ ಹಿಜಬಿ ಯಾಕೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರು ಪ್ರಶ್ನೆ ಮಾಡಿದರು.