ಮಂಗಳೂರು: (ಫೆ.6) Mangalore International Airport: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಪ್ರವೇಶದ್ವಾರ ಹಾಗೂ ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ ಇಲ್ಲಿ ಪ್ರವೇಶಕ್ಕೂ ಹಾಗೂ ನಿರ್ಗಮನಕ್ಕೆ ಒಂದೇ ರಸ್ತೆಯಾಗಿದ್ದು ಸಾಮಾನ್ಯ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹದೊಂದು ವ್ಯವಸ್ಥೆ ನಿರ್ಮಾಣವಾಗಿದ್ದು. ವಿವಿಐಪಿ ಸಂಸ್ಕೃತಿಯಿಂದಾಗಿ ಸಾಮಾನ್ಯ ಪ್ರಯಾಣಿಕರು ಪರದಾಡುವಂತಾಗಿದೆ.

ಅಲ್ಲದೇ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಟರ್ಮಿನಲ್ ಬಳಿ ವಾಹನಗಳ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಇದ್ದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಪ್ರವೇಶದ್ವಾರದಲ್ಲೇ ಇಳಿಸಿ, ಅದೇ ರಸ್ತೆಯಲ್ಲಿ ಹಿಂತಿರುಗಿ ಹೋಗಬೇಕಾಗಿದೆ.ಇದರಿಂದ ಟ್ರಾಫಿಕ್ ಸಮಸ್ಯೆಯ ಜೊತೆ ವಾಹನದಟ್ಟಣೆಯ ಕೂಡ ಹೆಚ್ಚಾಗುತ್ತಿದೆ.
ಒಂದೇ ರಸ್ತೆಯಲ್ಲೇ ಎಂಟ್ರಿ ಮತ್ತು ಎಕ್ಸಿಟ್
ಪ್ರಯಾಣಿಕರು ಆತುರದಲ್ಲಿ ದೂರದಲ್ಲೇ ವಾಹನವನ್ನು ನಿಲ್ಲಿಸಿ ಲಗೇಜುಗಳನ್ನು ತೆಗೆದುಕೊಂಡು ಹೋಗಬೇಕು. ಇದು ಸಾಮಾನ್ಯ ಜನರ ಪರಿಸ್ಥಿತಿಯಾದರೆ. ಇನ್ನು ವಿವಿಐಪಿ ಪ್ರಯಾಣಿಕರಿಗೆ ಆರಾಮದಾಯಕ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.
ವಿಮಾನನಿಲ್ದಾಣದ ನಿರ್ಗಮನ ದ್ವಾರದಿಂದ ರಾಲಿಯಲ್ಲಿ ಲಗೇಜುಗಳನ್ನು ಹಾಕಿಕೊಂಡು ವಾಹನಗಳು ಇರುವ ಸ್ಥಳಕ್ಕೆ ತೆರಳಲು ಆಗುವುದಿಲ್ಲ ಏಕೆಂದರೆ ದಾರಿಯಲ್ಲಿ ಹೋಗುವಾಗ ದಾರಿಯಲ್ಲಿ ನಿಂತಿರುವ ವಿವಿಐಪಿ ಅವರ ಭದ್ರತಾ ಪಡೆಯ ವಾಹನ ಗಳನ್ನು ನಿಲ್ಲಿಸಿರುತ್ತಾರೆ ಹಾಗೂ ಅಕ್ಕಪಕ್ಕದ ಗನ್ ಮ್ಯನ್ ಹಾಗೂ ಹಿಂಬಾಲಕರು ನಿಂತಿರುತ್ತಾರೆ.
ಹೀಗಿರುವಾಗ ಅವರ ಹತ್ತಿರ ಸುಳಿಯಲು ಬಿಡುವುದಿಲ್ಲ. ಟ್ರಾಲಿಯಲ್ಲಿ ಲಗೇಜು ಗಳು ಇದ್ದರೆ ವಿವಿಐಪಿಗಳು ಹಾಗೂ ಅವರ ಬದ್ರತಾ ವಾಹನಗಳು ತೆರವುಗೊಳಿಸಿದ ಬಳಿಕ ರಾಲಿಯ ಮೂಲಕ ಹೊರಗೆ ತರುವ ಪರಿಸ್ಥಿತಿ ಇದೆ.
ಭದ್ರತೆಯ ಕಾರಣವೊಡ್ಡಿ ಅಲ್ಲೇ ಬ್ಯಾರಿಕೇಡ್ ಹಾಕಿ ಗೊಂದಲವನ್ನು ನಿರ್ಮಾಣ ಮಾಡುತ್ತಾರೆ ಆದ್ದರಿಂದ ಎರಡು ಪ್ರತ್ಯೇಕ ರಸ್ತೆಯನ್ನು ಮಾಡಿಕೊಡಬೇಕು ಎಂದು ಪ್ರಯಾಣಿಕರು ವಿನಂತಿಸಿಕೊಂಡಿದ್ದಾರೆ. ವಿವಿಐಪಿಗಳಿಗೆ ಒಂದು ನ್ಯಾಯ ನಮ್ಮಂತಹ ಸಾಮಾನ್ಯ ಪ್ರಯಾಣಿಕರಿಗೆ ಬೇರೆಯೆ ನ್ಯಾಯ ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಭವಿಷ್ಯದಲ್ಲಿ ಟರ್ಮಿನಲ್, ಆಗಮನ ದ್ವಾರ, ಹಾಗೂ ಪಾರ್ಕಿಂಗ್ ಜಾಗಕ್ಕೆ ಸಂಬಂಧಿಸಿದಂತೆ ಸಮಾನಾಂತರವಾಗಿ ನಿರ್ಮಾಣವಾಗಲಿದೆ.