ಕಾಬುಲ್: (ಫೆ.7): Media Ban: ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಾಗಿನಿಂದ ಹಲವಾರು ಬದಲಾವಣೆಗಳು ಕಾಣಿಸುತ್ತಿದೆ.ಆಫ್ಘಾನಿಸ್ತಾನದ ಕಾಬುಲ್
51 ಟಿವಿ ಸ್ಟೇಷನ್, 132 ರೇಡಿಯೋ ಸ್ಟೇಷನ್ಸ್ ಹಾಗೂ 49 ಆನ್ಲೈನ್ ಮೀಡಿಯಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿದೆ.114 ಪತ್ರಿಕೆಗಳ ಪೈಕಿ ಕೇವಲ 20 ಮಾತ್ರ ಮುದ್ರಣವನ್ನು ಮುಂದುವರಿಸುತ್ತಿರುವುದು ವಿಷಾದನೀಯ.

ಆಫ್ಘಾನಿಸ್ತಾನದ ಮಾಧ್ಯಮ ಸಮುದಾಯದ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಐ ಎಫ್ ಜೆ ತಾಲಿಬಾನ್ ನ ತೆಕ್ಕೆಗೆ ಬೀಳುವ ಮೊದಲು 5069 ಪತ್ರಕರ್ತರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಕೇವಲ 2334 ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶೇಕಡಾ 72ರಷ್ಟು ಮಹಿಳಾ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. 243 ಮಹಿಳಾ ಪತ್ರಕರ್ತರು ಈಗಲೂ ಕೂಡ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಲ್ಲಿನ ಪತ್ರಕರ್ತರು ಉದ್ಯೋಗ ಕಳೆದುಕೊಳ್ಳುವುದರ ಜೊತೆಗೆ ಅಲ್ಲಿಂದ ಬೇರೆ ಕಡೆಗೆ ಪಲಾಯನ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲಿನ ನಾಗರಿಕರಿಗೆ ಯಾವುದೇ ಮಾಹಿತಿ ದೊರೆಯದಂತೆ ಮಾಧ್ಯಮಗಳಿಗೆ ನಿರಾಕರಿಸಲಾಗಿದೆ ಎಂದು ಐ ಎಫ್ ಜೆ ಪ್ರಧಾನ ಕಾರ್ಯದರ್ಶಿ ಆಂಟೋನಿ ಬೆಳ್ಳಂಜೆರ್ ತಿಳಿಸಿದ್ದಾರೆ. ಇನ್ನು ಕೆಲವರು ಅಫ್ಘಾನಿಸ್ತಾನದಲ್ಲಿನ ಮಾಧ್ಯಮಗಳ ಪರಿಸ್ಥಿತಿಯನ್ನು ಬಗೆಹರಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.