ಹಿಜಾಬ್ ಧರಿಸಿ ಬಂದಿದ್ದಕ್ಕೆ ಗೇಟಿನ ಹೊರಗಡೆ ನಿಲ್ಲಿಸಿ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರು, ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಬಂದರೆ ತಪ್ಪೇನು? ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹಿಜಾಬ್ ಧರಿಸುವ ವಿಚಾರದ ಬಗ್ಗೆ ಕಿಚ್ಚು ತೀವ್ರ ಸ್ವರೂಪ ಪಡೆಯುತ್ತಿದಂತೆ ಉಡುಪಿಯ ಕುಂದಾಪುರದ ಕಾಲೇಜುಗಳಲ್ಲಿ ಇಂದು ರಜೆ ಘೋಷಿಸಲಾಗಿದೆ. ಕುಂದಾಪುರದಾದ್ಯಂತ ಎಂದು ಕಾಲೇಜು ವಿದ್ಯಾರ್ಥಿಗಳು ಧರಣಿ ಹಾಗೂ ಮೆರವಣಿಗೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರ ಪ್ರತಿಯಾಗಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಮೆರವಣಿಗೆ ಮಾಡುತ್ತಿದ್ದಾರೆ.
Students of RN Shetty PU College in Kundapur wore safron shawl and arrived at the college to protest against hijab on Saturday@XpressBengaluru @KannadaPrabha #hijab pic.twitter.com/vSa9hswidM
— Prakash Samaga (@prakash_TNIE) February 5, 2022
ರಾಹುಲ್ ಗಾಂಧಿ ಅವರು ಹಿಜಾಬ್ ವಿಚಾರದಲ್ಲಿ ಟ್ವೀಟ್ ಮಾಡಿದ್ದು, ಶಿಕ್ಷಣದಲ್ಲಿ ಹಿಜಾಬ್ ಹೆಸರಿನಲ್ಲಿ ಮೂಲಕ ಭಾರತದ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ಇಂದು ಜ್ಞಾನದ ದೇವತೆ ಸರಸ್ವತಿಯ ದೇವಿಯನ್ನು ಆರಾಧಿಸುವ ದಿನವಾಗಿದೆ. ಸರಸ್ವತಿದೇವಿ ಎಲ್ಲರಿಗೂ ಬುದ್ದಿ ಕೊಡಲಿ. ಸರಸ್ವತಿದೇವಿ ನಾವು ಯಾವುದೇ ಭೇದಭಾವ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
By letting students’ hijab come in the way of their education, we are robbing the future of the daughters of India.
— Rahul Gandhi (@RahulGandhi) February 5, 2022
Ma Saraswati gives knowledge to all. She doesn’t differentiate. #SaraswatiPuja
ಇದನ್ನೂ ಓದಿ:Hijab: ಹಿಜಾಬ್ ಧರಿಸಿ ವಿಧಾನಸೌಧದಲ್ಲಿ ಕೂರುತ್ತೇನೆ: ಶಾಸಕಿ ಖನೀಜ್ ಫಾತಿಮಾ