Janardhan Reddy into BJP: (ಫೆ.3): ಬಳ್ಳಾರಿಯಲ್ಲಿ ಮತ್ತೆ ರಾಜಕೀಯ ಸದ್ದು ಮಾಡ್ತಿದೆ.ಬಿಜೆಪಿ ಪಕ್ಷಕ್ಕೆ ಬರಲು ಮಾಜಿ ಸಚಿವ ಜನಾರ್ದನ ರೆಡ್ಡಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೌದು ಬಿಜೆಪಿ ಪಕ್ಷಕ್ಕೆ ಬರಲು ದೆಹಲಿಯಲ್ಲಿ ಕಮಲ ಹಿಡಿಯಲು ಸಿದ್ಧಗಿದ್ದಾರೆ.
ಈ ಕುರಿತು ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡುವ ಬಗ್ಗೆ ಬಳ್ಳಾರಿಯಲ್ಲಿ ಸೀಕ್ರೇಟ್ ಮೀಟಿಂಗ್ ಮಾಡಲಾಗುತ್ತಿದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಪಕ್ಷವನ್ನು ಸೇರಲು ಜನಾರ್ದನ ರೆಡ್ಡಿ ಅವರು ಹೊಸ ಪ್ರಯತ್ನಗಳೊಂದಿಗೆ ರಣತಂತ್ರ ಹೂಡುತ್ತಿದ್ದಾರೆ.ಹೈ ಕಮಾಂಡ್ ಮನವೊಲಿಸುವುದರ ಜೊತೆ ಚುನಾವಣಾ ಕಣಕ್ಕಿಳಿಯಲು ರೆಡ್ಡಿ ರೆಡಿಯಾಗುತ್ತಿದ್ದಾರೆ.

ಸಚಿವ ಶ್ರೀರಾಮುಲು ಅವರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿದ್ದು, ನಿನ್ನೆ ಇಡೀ ದಿನ ದೆಹಲಿಯಲ್ಲಿ ಹಲವರ ಭೇಟಿಯಾಗಿದ್ದಾರೆ. ಈ ಮೂಲಕ ಜನಾರ್ದನ ರೆಡ್ಡಿ ಅವರನ್ನು ರಾಜಕೀಯಕ್ಕೆ ಕರೆತರುವ ಸಲುವಾಗಿ ವೇದಿಕೆಯನ್ನು ಸಿದ್ಧಮಾಡುತ್ತಿದ್ದಾರೆ ಶ್ರೀರಾಮುಲು.
ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಕರೆತರಲು ದೆಹಲಿಯ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಶ್ರೀರಾಮುಲು ಅವರು ರೆಡ್ಡಿ ಅವರಿಗೋಸ್ಕರ ನಡೆಸುತ್ತಿರುವ ಪ್ಲಾನ್ ಹಿಟ್ ಆಗುತ್ತಾ?
ದೆಹಲಿಯ ನಾಯಕರು ಜನಾರ್ದನ ರೆಡ್ಡಿ ಅವರಿಗೆ ಅವಕಾಶ ನೀಡಲು ಹಿಂದೇಟು ಹಾಕುರುವುದಕ್ಕೆ ಕಾರಣವೇನು?
- ಅಕ್ರಮ ಗಣಿಗಾರಿಕೆಯ ಪ್ರಕರಣ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಅವರಿಗೆ ಅವಕಾಶ ನೀಡಿದರೆ, ಕರ್ನಾಟಕ ಮಾತ್ರವಲ್ಲದೆ ಬಿಜೆಪಿಗೂ ಹಿನ್ನಡೆಯಾಗಬಹುದು ಎಂಬ ಭೀತಿ ಕಾಡುತ್ತಿದೆ.
- ಜೈಲುವಾಸ ಅನುಭವಿಸಿದ್ದ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾದರೇ ಡಿ.ಕೆ ಶಿವಕುಮಾರ್ ಅವರ ವಿರುದ್ಧ ರಾಜಕೀಯ ತಂತ್ರ ರೂಪಿಸಲು ಸಾಧ್ಯವಾಗುವುದಿಲ್ಲ.
- ಜಾಮೀನಿನ ಮೇಲೆ ಹೊರಗಡೆ ಬಂದಿರುವ ರೆಡ್ಡಿ ಅವರನ್ನು ಇತರ ನಾಯಕರು ಬೆಂಬಲಿಸುವುದಿಲ್ಲ ಎಂಬ ಅನುಮಾನ.
- ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರು, ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಭ್ರಷ್ಟಾಚಾರಕ್ಕೆ ಸಪೋರ್ಟ್ ನೀಡಿದ ಹಾಗೆ ಆಗುತ್ತೆ.
- ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗೆ ಚುನಾವಣೆಯ ವರ್ಷದಲ್ಲಿ ಅತಿ ದೊಡ್ಡ ರಾಜಕೀಯ ಅಸ್ತ್ರ ನೀಡಿದಂತಾಗುತ್ತದೆ. ಯಾಕೆಂದರೆ ಈ ಹಿಂದೆ ಸಿದ್ದರಾಮಯ್ಯ ಅವರು ರೆಡ್ಡಿ ಬ್ರದರ್ಸ್ ವಿರುದ್ಧ ಪಾದಯಾತ್ರೆ ಮಾಡಿ ಜನ ಮನ್ನಣೆ ಪಡೆದಿದ್ದರು. ಗಣಿ ಧಣಿ ರೆಡ್ಡಿ ಅವರನ್ನು ಸೇರಿಸಿಕೊಳ್ಳುವ ಬಿಜೆಪಿ ಗೆ ಇಷ್ಟೆಲ್ಲಾ ಸವಾಲುಗಳು ಮುಂದಿದೆ.