ಬೆಂಗಳೂರು: (ಫೆ.2): Muslim Delegation: ಮುಸ್ಲಿಂ ಸಮುದಾಯದವರ ಮೇಲೆ ನಿರಂತರ ದೌರ್ಜನ್ಯ ಹಾಗೂ ಆರಾಧನಾಲಯ ಗಳ ಮೇಲೆ ದಾಳಿ ನಡೆಯುತ್ತಿರುವ ಕುರಿತು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವೇದಿಕೆಯಾದ ಮುಸ್ಲಿಂ ಮುತ್ತಹಿದಾ ಮಹಾಜ್ ನಿಯೋಗವು ಇಂದು ನಗರದ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿದರು.

ಮುಸ್ಲಿಂ ಸಮುದಾಯದವರ ಮೇಲೆ ಹಾಗೂ ಆರಾಧನಾಲಯಗಳನ್ನು ಮೇಲೆ ದಾಳಿ ಹಾಗೂ ಇಲಾಖೆಯ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚಿಸಲಾಯಿತು. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿರುವ ಮಸೀದಿ ಹಾಗೂ ಗದಗ ಜಿಲ್ಲೆಯ ನರಗುಂದಲ್ಲಿ ಯುವಕನ ಮೇಲೆ ನೆಡೆದ ಹತ್ಯೆಯ ಪ್ರಕರಣ ಕುರಿತು ಡಿಜಿಪಿ ಅವರೊಂದಿಗೆ ಕಳವಳ ತೋಡಿಕೊಂಡರು.
ಡಿಜೆಪಿಯವರು ಈ ಬಗ್ಗೆ ಪ್ರತಿಕ್ರಿಯಿಸಿ, ನಿಯೋಗದೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ನರಗುಂದದ ಪ್ರಕರಣ ಹಾಗೂ ಮಸೀದಿ ದಾಳಿಯ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು. ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಮುಂದೆ ಎಂದು ಈ ರೀತಿಯ ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿಯೋಗದ APCR ನ ರಾಜ್ಯ ಕಾರ್ಯದರ್ಶಿ ಅಡ್ವೋಕೇಟ್ ಮೊಹಮ್ಮದ್ ನಿಯಾಝ್, ಜಮಾತೆ ಇಸ್ಲಾಮಿ ಹಿಂದ್ ನ ರಾಜ್ಯಾಧ್ಯಕ್ಷರಾದ ಡಾ.ಬೆಳಗಾಮಿ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಹಿರಿಯ ಮುಸ್ಲಿಂ ಮುಖಂಡ ಜಿ.ಎ.ಬಾವಾ, ಜಮಾಅತ್ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ, ಮಹಾಝ್ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಎಸ್ಐಓ ಕಾರ್ಯದರ್ಶಿಗಳಾದ ಅಬ್ದುಲ್ ಹಸೀಬ್ ಹಾಗೂ ನಾಸೀರ್ ಉಡುಪಿ ಮತ್ತು ಜಮೀಯ್ಯತುಲ್ ಉಲೇಮಾದ ತಫ್ಹೀಮ್ ಮಾರೂಪ್ ಉಪಸ್ಥಿತರಿದ್ದರು.