ನವದೆಹಲಿ: (ಫೆ.1): Union Budget Highlights: ದೆಹಲಿಯ ಸಂಸತ್ತಿನಲ್ಲಿ ಇಂದು ಕೇಂದ್ರ ಬಜೆಟ್ ಮಂಡನೆಯಾಗಿದ್ದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1 ಗಂಟೆ 33 ನಿಮಿಷಗಳ ಕಾಲ ‘ಕೇಂದ್ರ ಹಣಕಾಸು ಆಯವ್ಯಯ-2022’ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದರು.

ಈ ಬಾರಿಯ ಬಜೆಟ್ ಹೈಲೈಟ್ಸ್ ಹೀಗಿದೆ:
400 ವಂದೇ ಮಾತರಂ ರೈಲು:
ವಂದೇಮಾತರಂ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ದೇಶದಲ್ಲಿ ಒಟ್ಟು 400 ಹೊಸತಲೆಮಾರಿನ ರೈಲುಗಳು ಸಂಚಾರ ಆಗಲಿದೆ ಹಾಗೂ ಸಮಯ ಪಾಲನೆ ಮತ್ತು ಪ್ರಯಾಣಿಕರಿಗಾಗಿ ಆಧುನಿಕ ಸೌಕರ್ಯಗಳನ್ನು ರೈಲುಗಳು ಒದಗಿಸಲಿದೆ.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಾರ್ಗೋ ಟರ್ಮಿನಲ್ ಅಭಿವೃದ್ಧಿ:
100 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳು ಮುಂದಿನ ಮೂರು ವರ್ಷದಲ್ಲಿ ಅಭಿವೃದ್ಧಿಪಡಿಸಲಾಗುವುದು ಹಾಗೂ ಮೆಟ್ರೋ ವ್ಯವಸ್ಥೆಯನ್ನು ನಿರ್ಮಿಸಲು ಹೊಸ ಮಾರ್ಗಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಸಂಸ್ಥೆಗಳ ಖಾಸಗೀಕರಣದ ಬಗ್ಗೆ ಪ್ರಸ್ತಾಪ:
ಸಾರ್ವಜನಿಕ ಸಾಮ್ಯದ ಸಂಸ್ಥೆಗಳ ಖಾಸಗೀಕರಣದ ಕುರಿತು ಮಾತನಾಡಿದ್ದು, ಎಲ್ಐಸಿ ಐಪಿಓ ಮತ್ತು ಇಸ್ಪಾತ್ ನೀಲಾಂಚಲ್ ಕಂಪನಿಯನ್ನು ಟಾಟಾ ಸ್ಟೀಲ್ ಸಂಸ್ಥೆಗೆ ವಹಿಸುವ ಬಗ್ಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ:
25 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ.ರೈತರಿಗೆ ಒನ್ ಸ್ಟೇಷನ್ ಓನ್ ಪ್ರಾಡಕ್ಟ್ ಯೊಜನೆ. ಮಲ್ಟಿ ಮಾಡೆಲ್ ಮೆಜೆಸ್ಟಿಕ ಪಾರ್ಕ ಸ್ಥಾಪನೆ ಮಾಡಲಾಗುವುದು.
2023 ಅಂತರಾಷ್ಟ್ರೀಯ ಮಿನಿಟ್ ವರ್ಷ ಘೋಷಣೆ
ಕಡಿಮೆ ಖಾದ್ಯ ತೈಲ ಆಮದು:
ಖಾದ್ಯತೈಲ ಬಂದು ಕಡಿಮೆ ಮಾಡಲು ಪ್ರೋತ್ಸಾಹ ನೀಡಲಾಗಿದೆ. ಬೆಳೆಯ ಮೌಲ್ಯಮಾಪನಕ್ಕೆ ಕಿಸಾನ್ ಬಳಕೆ.
ಒನ್ ಕ್ಲಾಸ್ ಒನ್ ಟಿವಿ ಚಾನೆಲ್:
ಶಾಲೆಗಳು ಕೊರೋನ ಕಾರಣದಿಂದ ಬಂದ್ ಆಗಿರುವ ಹಿನ್ನೆಲೆಯಲ್ಲಿ. ಒಂದರಿಂದ 12ನೇ ತರಗತಿ ಮಕ್ಕಳಿಗೆ ಟಿವಿ ಚಾನೆಲ್ ಮಾಡಲು ನಿರ್ಧಾರ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯೋಜನೆ ಜಾರಿ ಮಾಡಲು ಕೇಂದ್ರ ನಿರ್ಧರಿಸಿದೆ. ಇ ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನೆಲ್ ಮೂಲಕ ಶಿಕ್ಷಣ ಬೋಧನೆ
MSME ಸಾಲ ಖಾತ್ರಿ ಯೋಜನೆ
ಕಿರು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅನುಕೂಲಕ್ಕಾಗಿ ಜಾರಿಗೊಳಿಸಿದ್ದ ಎಲ್ಲಾ ಸಾಲ ಖಾತ್ರಿ ಯೋಜನೆಗಳನ್ನು ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲಾಗಿದೆ.
ಅಂಗನವಾಡಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ ಜಾರಿ ಮಾಡಲಾಗುವುದು. 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು.
ಸಹಜ ಕೃಷಿ:
ಆಹಾರಧಾನ್ಯವನ್ನು ಕನಿಷ್ಟ ಬೆಂಬಲದಲ್ಲಿ ಖರೀದಿಸಲು ಕೇಂದ್ರ ಸರ್ಕಾರವು 2.37 ಲಕ್ಷ ಕೋಟಿ ಮೊತ್ತವನ್ನು ಮೀಸಲಿಟ್ಟಿದೆ.
ದೇಶದಲ್ಲಿ ರಾಸಾಯನಿಕ ಮುಕ್ತ ಸಹಜ ಕೃಷಿಗೆ ಒತ್ತು ನೀಡಲಾಗಿದೆ..
ಸಹಜ ಕೃಷಿಗಾಗಿ ಅನುದಾನವನ್ನು ಬದಲಿಸಲಾಗುವುದು.
ಎಣ್ಣೆಕಾಳುಗಳ ದೇಶಿಯ ಉತ್ಪಾದನೆ ಹೆಚ್ಚಿಸಲು ಹಾಗೂ ಬೆಳೆ ಅಂದಾಜು, ಕೀಟನಾಶಕ ಸಿಂಪಡಣೆಗೆ ಟೋನ್ ಬಳಕೆಗೆ ಅವಕಾಶ ನೀಡಲಾಗುವುದು.
ಮೊದಲ ಹಂತದಲ್ಲಿ ಗಂಗಾನದಿ 5 ಕಿಮೀ ಸುತ್ತಳತೆಯಲ್ಲಿ ಇರುವ ಕೃಷಿ ಭೂಮಿಯಲ್ಲಿ ಮೊದಲ ಹಂತದಲ್ಲಿ ಚಾಲನೆ ನೀಡಲಾಗುವುದು.
ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವುದು.
ಕೃಷಿ ವಿವಿಗಳಲ್ಲಿ ಸಿಲಬಸ್ ಪುನರ್ ರಚನೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹ. ನೈಸರ್ಗಿಕ ಕೃಷಿ ಹಾಗೂ ರಾಸಾಯನಿಕ ಮುಕ್ತ ಸಾವಯವ ಕೃಷಿ ಹಾಗೂ ಶೂನ್ಯ ಬಜೆಟ್ ಆಧುನಿಕ ಕೃಷಿ ಪದ್ಧತಿಗಳ ಕಲಿಕೆಗೆ ಆದ್ಯತೆ.
ಕೃಷಿರಂಗದ ಸ್ಮಾರ್ಟ್ ಅಪ್ ಗಳಿಗೆ ಹಾಗೂ ಗ್ರಾಮೀಣ ಉದ್ಯಮಗಳಿಗೆ ನೆರವಾಗುವಂತೆ ನಬಾರ್ಡ ಸಹಯೋಗದಲ್ಲಿ ಸಹಾಯಧನ.
ಇ ಪಾಸ್ಪೋರ್ಟ್ ಜಾರಿ:
ಚಿಪ್ ಒಳಗೊಂಡ ಇ ಪಾಸ್ ಪೋರ್ಟ್ ಜಾರಿಗೊಳಿಸಲಾಗುವುದು. ಹೊಸ ತಂತ್ರಜ್ಞಾನದೊಂದಿಗೆ ಯೋಜನೆ ಜಾರಿಯಾಗುತ್ತಿದೆ. ಮುಂದಿನ ವರ್ಷದಲ್ಲಿ ಆರು ಸಾವಿರ ಕೋಟಿ ಅನುದಾನ ನೀಡಲಾಗುವುದು.
ಬ್ಯಾಟರಿ ಬದಲಾವಣೆ ಸ್ಟೇಷನ್:
ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ಬದಲಾವಣೆ ಯೋಜನೆ ಜಾರಿ ಮಾಡಲಾಗುವುದು. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಬ್ಯಾಟರೀ ಸ್ಟಾಪಿಂಗ್ ಸೌಕರ್ಯ ಜಾರಿಗೊಳಿಸಲಾಗುವುದು.
ಕೇಂದ್ರ ಯೋಜನೆಗೆ ಇ ಬಿಲ್:
ಕೇಂದ್ರದಲ್ಲಿ ಯೋಜನೆಗಳ ನಿರ್ವಹಣೆಗಾಗಿ ಇ ಬಿಲ್ ವ್ಯವಸ್ಥೆ ಜಾರಿ ಮಾಡಲಾಗುವುದು. ಗುತ್ತಿಗೆದಾರರು ಈಗ ರಸ್ತೆಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು.
ಟೆಲಿಕಾಂ ಕ್ಷೇತ್ರದಲ್ಲಿ 5Gಸೇವೆ:
ಟೆಲಿಕಾಂ ಕ್ಷೇತ್ರದಲ್ಲಿ 5G ಸೇವೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಪ್ರತಿ ಹಳ್ಳಿಯಲ್ಲೂ ಆಪ್ಟಿಕಲ್ ಫೈಬರ್ ಕೇಬಲ್ ಸೌಕರ್ಯ ನೀಡಲಾಗುವುದು
ಡಿಜಿಟಲ್ ಆರೋಗ್ಯ ಕ್ಷೇತ್ರ:
ದೇಶದಲ್ಲಿ ಲಭ್ಯವಿರುವ ಎಲ್ಲಾ ವೈದ್ಯಕೀಯ ಸೇವೆಗಳನ್ನು ವಿವರವಾಗಿ ಆನ್ಲೈನ್ನಲ್ಲಿ ಒದಗಿಸುವ ಮೂಲಕ ದೊರೆಯಲಿದೆ.
ಡಿಫೆನ್ಸ್ ಕ್ಷೇತ್ರಕ್ಕೆ ಖಾಸಗಿ ಸಹಭಾಗಿತ್ವ:
ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಒತ್ತು ನೀಡಿದೆ. ಭದ್ರತೆಗೆ ಬೇಕಿರುವ ಯುದ್ಧೋಪಕರಣಗಳು ಸೇರಿದಂತೆ ಎಲ್ಲ ಬಗ್ಗೆ ಆಯುಧಗಳನ್ನು ದೇಸಿ ಉತ್ಪಾದನೆಗೆ ಒತ್ತು ನೀಡಲಾಗುವುದು.
ಇಂಧನ ಉಳಿತಾಯ ಸೋಲಾರ್:
ಸೋಲಾರ್ ವಿದ್ಯುತ್ ಕ್ಷೇತ್ರಕ್ಕೆ ಈ ಬಾರಿ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ.19, 500 ಕೋಟಿ ರೂ ಅನುದಾನ ಜೊತೆಗೆ ಇಂಧನ ಉಳಿತಾಯ ಯೋಜನೆಗಳಿಗೆ ಉತ್ತೇಜಿಸಲು ಸ್ಕೀಮ್ ಜಾರಿಗೊಳಿಸಲಾಗುವುದು.
ಬಂಡವಾಳ ವೆಚ್ಚ ಏರಿಕೆ:
ಬಂಡವಾಳ ಹೂಡಿಕೆ ಮಾಡುವ ಮೂಲಕ ಆರ್ಥಿಕ ಪ್ರಗತಿಗೆ ಒತ್ತು ನೀಡಲಾಗಿದೆ. ಇಂಧನ ಕ್ಷೇತ್ರದಲ್ಲಿ ದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ. ಶೇಕಡ 35 ರಷ್ಟು ಹೆಚ್ಚಿಸಲಾಗಿದೆ.
50 ವರ್ಷಗಳ ಕಾಲ ರಾಜ್ಯಸರ್ಕಾರಗಳಿಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ.
ತೆರಿಗೆ ಪಾವತಿ ರಿಟರ್ನ್ ಸಲ್ಲಿಕೆ ಹೊಸ ನೀತಿ ಜಾರಿ ಮಾಡಲಾಗುವುದು.
ತೆರಿಗೆ ಪಾವತಿ ತಪ್ಪು ಸರಿಪಡಿಸಿಕೊಳ್ಳಲು ಎರಡು ವರ್ಷಗಳ ಕಾಲ ಅವಕಾಶ ನೀಡಲಾಗಿದೆ.
ಸಹಕಾರ ಸಂಘಗಳ ಸರ್ಚಾರ್ಜ್ ಇಳಿಕೆ:
ಸಹಕಾರ ಸಂಘಗಳ ಮೇಲಿನ ಸರ್ಚಾರ್ಜ್ ಇಳಿಕೆ ಮಾಡಲಾಗಿದೆ. 12ರಿಂದ ಶೇಕಡ 7ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ.
ಕೋಪರೇಟಿವ್ ಸೊಸೈಟಿ ಗಳಿಗೂ 15 ರಷ್ಟು ತೆರಿಗೆ ಇರಲಿದೆ.
ಅಂಗವಿಕಲ ಇರುವವರಿಗೆ ಹೆಚ್ಚುವರಿ ತೆರಿಗೆ ಡಿಡಕ್ಷನ್ ಆಗಲಿದೆ.
- ಕ್ರಿಪ್ತೋಕರೆನ್ಸಿ ಕರೆನ್ಸಿ:
ವರ್ಚುವಲ್ ಡಿಜಿಟಲ್ ಗಳಿಗೆ ಅಸೆಟ್ ಗಳಿಗೆ ಶೇಕಡ 30ರಷ್ಟು ತೆರಿಗೆ ಇರಲಿದೆ. ಯಾವುದೇ ಆದಾಯ ಹೊಂದಣಿಕೆ ಅವಕಾಶ ಇರುವುದಿಲ್ಲ. - ಬಜೆಟ್ನಲ್ಲಿ ಸರ್ಕಾರವು 39.45 ರಷ್ಟು ಕೋಟಿ ಖರ್ಚು ಮಾಡಲು ಉದ್ದೇಶಿಸಿದೆ. ಇದರಲ್ಲಿ 10.68 ಲಕ್ಷ ಕೋಟಿ ಬಂಡವಾಳ ವೆಚ್ಚ ಇರಲಿದೆ. ಸಾಲ ಹೊರತುಪಡಿಸಿದ ಆದಾಯವು 22.84 ಲಕ್ಷ ಮಾತ್ರ ಇರಲಿದೆ ಎಂದು ಹೇಳಿದ್ದಾರೆ.
- ಸ್ವತಂತ್ರ ಕ್ರಿಪ್ಟೋಕರೆನ್ಸಿ ಆರಂಭಿಸಲು ನಿರ್ಧರಿಸಲಾಗಿದೆ. ಭಾರತವು ಕ್ರಿಪ್ಟೋ ಕರೆನ್ಸಿಗೆ ಮಾನ್ಯತೆ ನೀಡಲು ಕಾನೂನು ಕ್ರಮಗಳ ನಿಯಂತ್ರಿಸಲು ಮುಂದಾಗಿದೆ.
ಬಟ್ಟೆ ಚರ್ಮದ ಉತ್ಪನ್ನಗಳ ಬೆಲೆಇಳಿಕೆ:
ಬಟ್ಟೆ ಹಾಗೂ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಮೇಲೆ ಯಾವುದೇ ಬದಲಾವಣೆ ಇರುವುದಿಲ್ಲ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS)
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆಗಾಗಿ ಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ಆದಾಯ ತೆರಿಗೆಯಲ್ಲಿ ಶೇಕಡಾ 14ರ ಮಿತಿ ಸಿಗಲಿದೆ.
ಮೊಬೈಲ್ ಉಪಕರಣಗಳ ಬೆಲೆ ಇಳಿಕೆ:
ಕೃಷಿ ಉಪಕರಣ ವಿದೇಶ ಉತ್ಪನ್ನಗಳ ಬೆಲೆ ಏರಿಕೆ ಮಾಡಿರುವ ಬೆನ್ನಲ್ಲೇ, ಮೊಬೈಲ್ ಹಾಗೂ ಮೊಬೈಲ್ ಉಪಕರಣಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ.
ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಇಳಿಕೆ ಆಗಲಿದೆ.
ಚಿನ್ನ ವಜ್ರಾಭರಣಗಳ ಬೆಲೆ ಇಳಿಕೆ:
ಚಿನ್ನ ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗುವುದು. ಹಾಗೂ ಡೈಮಂಡ್ ಕಸ್ಟಮ್ ಡ್ಯೂಟಿ ಶೇಕಡಾ ಐದರಷ್ಟು ಕಡಿತ ಮಾಡಲಾಗುವುದು.