Budget Flashback: 2022- 23 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತುತ ವರ್ಷದ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದು, ಕಳೆದ ವರ್ಷದ ಬಜೆಟ್ ನಲ್ಲಿ 2 ಗಂಟೆ, 42 ನಿಮಿಷ ಬಜೆಟ್ ಭಾಷಣ ಮಾಡಿ, ಸುದೀರ್ಘ ಭಾಷಣ ಎಂದು ದಾಖಲಾಗಿತ್ತು.
ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಪೇಪರ್ಲೆಸ್ ಬಜೆಟ್ ಜಾರಿಗೆ ತಂದಿದ್ದರು. ಈ ಬಾರಿ ಅದೇ ರೀತಿ ಕಾಗದರಹಿತ ಬಜೆಟ್ ಮಂಡನೆ ಮಾಡಲಿದ್ದಾರೆ.
ಕೇಂದ್ರ ಬಜೆಟ್ ಕುರಿತು ನಿಮಗೆ ಗೊತ್ತಿಲ್ಲದ ಸಂಗತಿಗಳು ಇದೆ.
ಭಾರತದ ಮೊದಲ ಬಜೆಟ್: ಭಾರತದಲ್ಲಿ ಮೊದಲ ಬಜೆಟ್ ಆಗಿದ್ದು 1860 ಏಪ್ರಿಲ್ 7ರಂದು. ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಆರ್ಥಿಕ ತಜ್ಞರಾದ ಹಾಗೂ ರಾಜಕಾರಣಿ ಜೇಮ್ಸ್ ವಿಲ್ಸನ್ ಅವರು ಬಜೆಟ್ ಮಂಡಿಸಿದ್ದರು.

ಇನ್ನು ಸ್ವತಂತ್ರ ಭಾರತದಲ್ಲಿ 1947 ನವೆಂಬರ್ 26ರಂದು ಮೊದಲ ಬಜೆಟ್ ಮಂಡನೆ ಮಾಡಲಾಗಿತ್ತು ಅಂದಿನ ಹಣಕಾಸು ಸಚಿವರಾಗಿದ್ದ ಅರ್ ಕೆ ಷಣ್ಮುಖಮ್ ಚಟ್ಟಿ ಅವರು ಮಂಡಿಸಿದರು.
ಬಜೆಟ್ ಮಂಡನೆ ಮಾಡುವಾಗ ಸಾಮಾನ್ಯವಾಗಿ ಸುದೀರ್ಘವಾಗಿ ಭಾಷಣ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ಮನಮೋಹನ್ ಸಿಂಗ್ ಅವರು 1991 ರಲ್ಲಿ ಹಣಕಾಸು ಸಚಿವರಾಗಿದ್ದಾಗ 18,650 ಪದಗಳು ಇರುವ ಬಜೆಟ್ಟ ಭಾಷಣ ಮಾಡಿದ್ದರೂ ಇನ್ನೂ ಅರುಣ್ ಜೇಟ್ಲಿ ಅವರು 2018ರಲ್ಲಿ 18,604 ಪದಗಳ ಭಾಷಣ ಮಾಡಿದ್ದರು.
ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ. ಇವರು ಹತ್ತು ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಿದ್ದರು. 1962 – 69ರ ಕಾಲದಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು 9 ಬಜೆಟ್, ಪ್ರಣಬ್ ಮುಖರ್ಜಿ ಅವರು 8 ಬಜೆಟ್ , ಯಶವಂತ ಸಿನ್ಹಾ ಅವರು 8 ಬಜೆಟ್ ಹಾಗೂ ಮನಮೋಹನ್ ಸಿಂಗ್ ಅವರು 6 ಬಜೆಟ್ ಗಳನ್ನು ಮಂಡಿಸಿದ್ದಾರೆ.
ಬಜೆಟ್ ನಲ್ಲಿ ಈ ಹಿಂದೆ ಅಂದರೆ 2017ರಲ್ಲಿ ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡಿಸಲಾಗುತ್ತಿದ್ದು. ಆನಂತರ ಕೇಂದ್ರ ಬಜೆಟಿನಲ್ಲಿ ಗೊಳಿಸಲಾಗಿದೆ.
ಪೇಪರ್ ಲೆಸ್ ಬಜೆಟ್:
2021 22ರಲ್ಲಿ ಮೊದಲ ಬಾರಿ ಪೇಪರ್ ಲೆಸ್ ಬಜೆಟ್ ಮಂಡನೆಯಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾರಿಗೆ ತಂದಿದ್ದರು. ಈ ಮೊದಲು 1950 ರ ತನಕ ರಾಷ್ಟ್ರಪತಿ ಭವನದಲ್ಲಿ ಬಜೆಟ್ ಮುದ್ರಿಸಲಾಗುತ್ತಿತ್ತು.
ಆಂಗ್ಲಭಾಷೆಯ ಬಜೆಟ್ :
1955ರಲ್ಲಿ ಬಜೆಟ್ ಆಂಗ್ಲಭಾಷೆಯಲ್ಲಿ ಇರುತ್ತಿತ್ತು. ಆನಂತರ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿಸಲಾಗುತ್ತದೆ. 1980ರಲ್ಲಿ ಹಣಕಾಸು ಸಚಿವಾಲಯದ ಉತ್ತರ ಬ್ಲಾಕ್ ಕಚೇರಿಯಲ್ಲಿ ಸರ್ಕಾರಿ ಪ್ರಸ್ತಾಪಿಸಿ ಬಜೆಟ್ ಮುದ್ರಿಸಲಾಯಿತು.
ಬಜೆಟ ಸಮಯ ಬದಲಾವಣೆ:
ಬ್ರಿಟಿಷ ಪದ್ಧತಿಯಂತೆ ಫೆಬ್ರವರಿ ಕೊನೆಯ ಕೆಲಸ ದಿನದಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು.1999 ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಅವರು ಬಜೆಟ್ ಸಮಯವನ್ನು ಬೆಳಗ್ಗೆ 11ಗಂಟೆಗೆ ಬದಲಾಯಿಸಿದರು.