Towing Rules: (ಜ.31):ನಗರದಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನಗಳ ಟೋಯಿಂಗ್ ಮಾಡುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡದೆ ಟೋಯಿಂಗ್ ಮಾಡಲಾಗುತ್ತಿದೆ.
ಟ್ರಾಫಿಕ್ ಪೊಲೀಸರು ವಾಹನ ಟೋಯಿಂಗ್ ಮಾಡುವ ಸಂದರ್ಭದಲ್ಲಿ ವಾಹನ ಮಾಲೀಕರು ಸ್ಥಳದಲ್ಲಿದ್ದರೆ ಅವರಿಂದ ‘ನೋ ಪಾರ್ಕಿಂಗ್’ ಶುಲ್ಕವನ್ನು ಮಾತ್ರ ವಸೂಲಿ ಮಾಡಬೇಕು ಹಾಗೂ ವಾಹನವನ್ನು ಅವರಿಗೆ ಅಲ್ಲಿಯೇ ಹಿಂದಿರುಗಿಸಬೇಕು ಎಂದು ಈ ಹಿಂದೆಯೇ ಗೃಹ ಸಚಿವರು ಹೇಳಿದ್ದರು

ಟೋಯಿಂಗ್ ಸಿಬ್ಬಂದಿಗಳ ಮೇಲೆ ಇರುವ ಆರೋಪಗಳೇನು?
ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವಂತ ವಾಹನಗಳನ್ನು ಮಾತ್ರ ಟೋಯಿಂಗ್ ಸಿಬ್ಬಂದಿಗಳು ತೆಗೆದುಕೊಂಡು ಹೋಗಬೇಕು. ಆದರೆ ಮನಬಂದಂತೆ ಎಲ್ಲೆಂದರಲ್ಲಿ ಟೋಯಿಂಗ್ ಸಿಬ್ಬಂದಿಗಳು ವಾಹನಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗುವಾಗ ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ, ಜಗಳ ಮಾಡುವುದು ಟೋಯಿಂಗ್ ಸಿಬ್ಬಂದಿಗಳು ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಟೋಯಿಂಗ್ ಸಿಬ್ಬಂದಿಗಳು ಇರುವ ರೂಲ್ಸ್ ಗಳನ್ನು ಫಾಲೋ ಮಾಡದೆ ಅವರಿಗೆ ಮನಬಂದಂತೆ ಗಾಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಗಾಡಿಗಳನ್ನು ತೆಗೆದುಕೊಂಡು ಹೋಗುವ ಮುಂಚೆ ಯಾವುದೇ ಅನ್ನೌನ್ಸ್ಮೆಂಟ್ ಮಾಡುವುದಿಲ್ಲ ಹೀಗಾಗಿ ಸಾರ್ವಜನಿಕರು ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸಂಚಾರ ವಿಭಾಗದ ಪೊಲೀಸರು, ವಾಹನಗಳನ್ನ ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನ ಈ ಕೆಳಗಿನಂತಿವೆ.

- ಟೋಯಿಂಗ್ ಆಪರೇಷನ್ಗೂ ಮುನ್ನ ಮೈಕ್ ಮೂಲಕ ಅನೌನ್ಸ್ ಮಾಡಬೇಕು.
- ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು
- 5 ನಿಮಿಷದವರೆಗೆ ವಾಹನದ ಮಾಲೀಕರು ಬರದೇ ಇದ್ದಲ್ಲಿ ಟೋಯಿಂಗ್ ಮಾಡಬಹುದು.
- ಟೋಯಿಂಗ್ ಮಾಡುವಾಗ ವಾಹನ ಮಾಲೀಕರು ಬಂದರೆ ವಾಹನವನ್ನು ಬಿಡಬೇಕು. ಶುಲ್ಕ ವಸೂಲಿ ಮಾಡಿ ವಾಹನವನ್ನು ನೀಡಬೇಕು.
- ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಂತಿದ್ದರೇ, ನೋ ಪಾರ್ಕಿಂಗ್ ಫೈನ್ ಕಟ್ಟಿಸಿಕೊಂಡು ವಾಹನವನ್ನು ಬಿಡಬೇಕು.
- ಟೋಯಿಂಗ್ ಮಾಡುವಾಗ ಸಿಬ್ಬಂದಿಗಳು ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಬೇಕು.
- ಟೋಯಿಂಗ್ ಮಾಡುವ ವೇಳೆ ವಾಹನಗಳಿಗೆ ಡ್ಯಾಮೇಜ್ ಆದರೆ ಸಿಬ್ಬಂದಿಗಳೇ ಹೊಣೆಯಾಗುತ್ತಾರೆ
- ನೋ ಪಾರ್ಕಿಂಗ್ ಇರುವ ಸ್ಥಳದಲ್ಲಿ ಬೋರ್ಡ್ ಅಥವಾ ನಾಮಫಲಕವನ್ನು ಹಾಕಬೇಕು. ವಾಹನ ದಟ್ಟಣೆಗೆ ಕಾರಣವಾಗುವ ಸ್ಥಳಗಳಲ್ಲಿ ಮಾತ್ರ ನಾಮಫಲಕ ಅಳವಡಿಸಬೇಕು.
- ವಾಹನದ ನಾಲ್ಕೂ ಭಾಗದಿಂದ ಫೋಟೋ ಕ್ಲಿಕ್ಕಿಸಬೇಕು.
- ಎಎಸ್ಐ ಅಥವಾ ಮೇಲ್ದರ್ಜೆಯ ಅಧಿಕಾರಿ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು.
- ಟೋಯಿಂಗ್ ಮಾಡುವಾಗ ಸಾರ್ವಜನಿಕರ ಜೊತೆ ಅಸಭ್ಯ ವರ್ತನೆ ಮಾಡುವಂತಿಲ್ಲ. ದರ್ಪ ತೋರುವುದು. ಉಡಾಫೆ ಮಾತುಗಳನ್ನು ಆಡುವಹಾಗಿಲ್ಲ.
- ದಂಡ ವಸೂಲಿ ಮಾಡಿದರೆ ಅದಕ್ಕೆ ತಕ್ಕ ರಸೀತಿಯನ್ನು ನೀಡಬೇಕು. ಇವೆಲ್ಲವೂ ಟೋಯಿಂಗ್ ಮಾಡುವಾಗ ಸಿಬ್ಬಂದಿಗಳು ಅನುಸರಿಸಬೇಕಾದ ನಿಯಮಗಳು.
ಇದನ್ನೂ ಓದಿ:Towing: ಡೆಲಿವರಿ ಹುಡುಗನ ಜೊತೆ ಟೋಯಿಂಗ್ ಸಿಬ್ಬಂದಿಗಳ ಅನುಚಿತ ವರ್ತನೆ: ಅಂಗಲಾಚಿದರೂ ಕೊಡನಿಲ್ಲ ಗಾಡಿ