ಬೆಂಗಳೂರು (ಜ.31): L R Shivaramegowda: ದಿವಂಗತ ಜಿ ಮಾದೇಗೌಡ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರನ್ನು ಪಕ್ಷದಿಂದ ಹೊರ ಹಾಕಲು ಹೆಚ್.ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ ಅವರ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಶಿವರಾಮೇಗೌಡ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಎಚ್ .ಡಿ ಕುಮಾರಸ್ವಾಮಿ ಶಿವರಾಮೇಗೌಡರ ವಿರುದ್ಧ ಗರಂ ಆಗಿದ್ದರು. ಶಿವರಾಮೇಗೌಡ ಪಕ್ಷದಿಂದ ಹೊರ ಹಾಕಲು ಎಚ್ .ಡಿ ಕುಮಾರಸ್ವಾಮಿ ಪಕ್ಷದಿಂದ ಹಾಕಲು ಸೂಚನೆ ಕೊಡಲಾಗಿತ್ತು.
30 ಕೋಟಿ ಯಾರು ಕೊಟ್ಟಿದ್ದು ಗೊತ್ತಿಲ್ಲ:
ಮಂಡ್ಯ ಜಿಲ್ಲೆಯ ಹಿರಿಯ ನಾಯಕರಾದ ಹಾಗೂ ಒಕ್ಕಲಿಗ ಸಮುದಾಯದ ಹಿರಿಯರಾದ ದಿವಂಗತ ಜಿ ಮಾದೇಗೌಡ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅಸಭ್ಯವಾಗಿ ಹಾಗೂ ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುವ ಮೊಬೈಲ್ ಕರೆ ವೈರಲ್ ಆಗಿದ್ದು ತಮಗೆ ಸಂಬಂಧವಿಲ್ಲದ ವಿಷಯಗಳನ್ನು ಅವರು ಪ್ರಸ್ತಾಪ ಮಾಡಿದ್ದಾರೆ.
ಶಿವರಾಮೇಗೌಡರು ಹಿರಿಯರ ಬಗ್ಗೆ ಅಸಭ್ಯವಾಗಿ ಮಾತಾಡಿರುವ ಆಡಿಯೋವನ್ನು ನಾನು ಕೇಳಿದ್ದೇನೆ. ಇಂತಹ ನಡವಳಿಕೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ಶಿವರಾಮೇಗೌಡರು ಮಾತನಾಡಿದರೆ ಬರಿ ಹಣದ ಬಗ್ಗೆ ಮಾತನಾಡುತ್ತಾರೆ. ಹಣವನ್ನು ಇವರೊಬ್ಬರೇ ಕಂಡಿಲ್ಲ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಣ ಖರ್ಚು ಮಾಡಿದೆ ಎಂದು ಹೇಳಿದ್ದಾರೆ. 30 ಕೋಟಿ ರೂಪಾಯಿ ಖರ್ಚು ಮಾಡಿರುವುದನ್ನು ಹೇಳಿಕೊಂಡಿದ್ದಾರೆ. ಅಷ್ಟು ಹಣ ಅವರಿಗೆ ಯಾರು ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ
ಶಿವರಾಮೇಗೌಡರು ಪ್ರತಿಬಾರಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಲ್ಲಿಯವರೆಗೆ ಅವರ ತಪ್ಪನ್ನು ತಿಳಿದುಕೊಂಡು ತಿದ್ದು ಕೊಳ್ಳುತ್ತಾರೆ ಎಂದು ಸುಮ್ಮನಿದ್ದೆವು. ಆದರೆ ಅದು ಆಗಲಿಲ್ಲ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂದು ಹೇಳಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ ಅವರ ವಿರುದ್ಧ ಮಾದೇಗೌಡ ಅವರ ಅಭಿಮಾನಿಗಳಿಂದ ದೂರು ದಾಖಲಿಸಿದ್ದಾರೆ.