Kannada Film Industry:(ಜ.30): ಜನವರಿ 31ರಿಂದ ನೈಟ ಕರ್ಫ್ಯೂ ರದ್ದುಗೊಳಿಸಿದ ರಾಜ್ಯ ಸರ್ಕಾರದ ಆದೇಶದಲ್ಲಿ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಅನುಮತಿಗೆ ನೀಡಿದ್ದು ಇದರಿಂದ ಸಿನಿಮಾರಂಗದ ಗಣ್ಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತವಿರುವ ಶೇ 50ರಷ್ಟು ಸೀಟು ಸಾಮರ್ಥ್ಯದಲ್ಲಿ ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಹಾಗೂ ಇದನ್ನು ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಚಿತ್ರರಂಗವು ಶೇಕಡ 100ರಷ್ಟು ಅವಕಾಶ ನೀಡಬೇಕೆಂಬ ಬೇಡಿಕೆ ಈಡೇರಲಿಲ್ಲ.
ಸ್ಟಾರ್ ನಟರ ಸಿನಿಮಾ ಮುಂದೂಡಿಕೆ:
ರಾಜ್ಯ ಸರ್ಕಾರದ ನಿಯಮದಿಂದ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಕೆಲವೊಂದು ಸಿನಿಮಾಗಳ ಬಿಡುಗಡೆಯ ದಿನಾಂಕವೂ ಮುಂದೂಡಲಾಗಿದೆ. ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು ರಾಜ್ಯ ಸರ್ಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಿನಿಮಾರಂಗದ ನೌಕರರು ತಂತ್ರಜ್ಞಾನ ಸೇರಿದಂತೆ ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಚಿತ್ರೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಚಲನಚಿತ್ರ ಮಂದಿರಗಳಲ್ಲಿ ಆದಷ್ಟು ಬೇಗ ಶೇ. 100ರಷ್ಟು ಸೀಟು ಸಾಮರ್ಥ್ಯದಲ್ಲಿ ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗಾಗಿ ಅವಕಾಶ ನೀಡಬೇಕು ಎಂದು ಸಿನಿಮಾರಂಗದವರು ಒತ್ತಾಯಿಸಿದ್ದಾರೆ.


ಕನ್ನಡ ಚಿತ್ರರಂಗದ ನಟ ವಿನೋದ್ ರಾಜ್ ಅವರು ರಾಜ್ಯಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಎಲ್ಲ ಉದ್ಯಮದಂತೆ ಚಿತ್ರರಂಗದ ಉದ್ಯಮ ಕೂಡಾ ಒಂದು. ಸಿನಿಮಾರಂಗವನ್ನು ನಂಬಿಕೊಂಡು ಹಲವು ಕುಟುಂಬಗಳು ಬದುಕುತ್ತಿವೆ. ಹೀಗಾಗಿ ಚಿತ್ರರಂಗವನ್ನ ಕಡೆಗಣಿಸಬೇಡಿ ಎಂದು ಹೇಳಿದ್ದಾರೆ.
ವೀಡಿಯೋ ಮೂಲಕ ಆಕ್ರೋಶ ಹೊರಹಾಕಿರುವ ನಟ ವಿನೋದ್ ರಾಜ್ ಅವರು, ಚಿತ್ರರಂಗವನ್ನು ನಂಬಿ ನಿರ್ಮಾಪಕರು ಕೋಟ್ಯಂತರ ರೂಪಾಯಿ ಬಂಡವಾಳ ಹಾಕುತ್ತಾರೆ. ಈಗಾಗಲೇ ಹಲವು ಸಿನಿಮಾಗಳು ಬಿಡುಗಡೆಯಾಗದೆ ಬಾಕಿ ಉಳಿದಿದೆ
ಗಳಿಗೆ ವಿನಾಯಿತಿ ನೀಡದೆ ಹೋದರೆ ಇವುಗಳ ಕಥೆಯೇನು? ಚಿತ್ರರಂಗವನ್ನು ನಂಬಿಕೊಂಡು ಬದುಕುವವರ ಕಥೆಯೇನು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.