ಬೆಂಗಳೂರು:(ಜ.30): Towing : ನಗರದಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲುವ ಗಾಡಿಗಳನ್ನು ಟೋಯಿಂಗ್ ಸಿಬ್ಬಂದಿಗಳು ತೆಗೆದುಕೊಂಡು ಹೋಗುತ್ತಾರೆ. ಆದರೆ ಸಿಬ್ಬಂದಿಗಳು ಮನಬಂದಂತೆ ವಾಹನಗಳನ್ನ ಎತ್ತಿಕೊಂಡು ಹೋಗುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಅಂಥದೇ ಒಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ನಗರದಲ್ಲಿ ಸಂಚಾರ ವಿಭಾಗದ ಟೋಯಿಂಗ್ ಸಿಬ್ಬಂದಿಯು ಆನ್ಲೈನ್ ವಸ್ತುಗಳನ್ನು ಡೆಲಿವರಿ ಮಾಡುವ ಯುವಕನ ವಾಹನವನ್ನು ಸಿಬ್ಬಂದಿ ದ್ವಿಚಕ್ರವಾಹನವನ್ನು ತಮ್ಮ ವಾಹನಕ್ಕೆ ತುಂಬಿಕೊಂಡಿದ್ದಾರೆ.

ಇಂದಿರಾನಗರದ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಡೆಲಿವರಿ ಹುಡುಗ ಆನ್ಲೈನ್ ವಸ್ತುಗಳನ್ನು ಕೊಡಲು ವಾಹನವನ್ನು ನಿಲ್ಲಿಸಿ ಹೋಗಿದ್ದರು. ಈ ವೇಳೆ ಟೋಯಿಂಗ್ ಸಿಬ್ಬಂದಿಗಳು ವಾಹನವನ್ನು ಏಕಾಏಕಿ ವಾಹನಕ್ಕೆ ತುಂಬಿಕೊಂಡಿದ್ದಾರೆ.
ಅದನ್ನು ಕಂಡ ಆತ ಕೂಡಲೇ ವಾಹನವನ್ನು ಹಿಡಿದು ನಿಲ್ಲಿಸುವಂತೆ ಗೋಳಾಡಿದ್ದಾನೆ ಆದರೂ ಟೋಯಿಂಗ್ ಸಿಬ್ಬಂದಿಗಳು ವಾಹನ ನಿಲ್ಲಿಸಲಿಲ್ಲ ವಾಹನ ಸವಾರ ಬಿಡಿಸಿಕೊಳ್ಳಲು ನೋಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ವಾಹನ ಸವಾರ ಅಂಗಲಾಚಿದರು, ವಾಹನವನ್ನು ಕೊಡದೆ ಸಂಚಾರ ಪೊಲೀಸರ ಅಮಾನವೀಯ ವರ್ತನೆಗೆ ಇದೊಂದು ಸಾಕ್ಷಿಯಾಗಿದೆ.
ಟೋಯಿಂಗ್ ರೌಡಿಗಳು:
ಟೋಯಿಂಗ್ ಸಿಬ್ಬಂದಿಗಳು ಮೊದಲು ಗಾಡಿ ತೆಗೆದುಕೊಳ್ಳುವ ಮೊದಲು ಧ್ವನಿವರ್ಧಕವನ್ನು ಬಳಸಿ ಅನೌನ್ಸ್ ಮಾಡಬೇಕು. 5 ನಿಮಿಷದವರೆಗೆ ಗಾಡಿಯ ಮಾಲಿಕ ಬಾರದೆ ಹೋದರೆ ಟೋಯಿಂಗ್ ಮಾಡಬೇಕು. ಆದರೆ ನಗರದಲ್ಲಿ ಎಂದು ಧ್ವನಿವರ್ಧಕ ಮೂಲಕ ಅನೌನ್ಸ್ ಮಾಡದೆ ಮನಬಂದಂತೆ ದ್ವಿಚಕ್ರವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇವರನ್ನು ಟೋಯಿಂಗ್ ರೌಡಿಗಳು ಎಂದು ನಮೂದಿಸಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗುವಾಗ ಸರಿಯಾಗಿ ವಾಹನದ ಮೇಲೆ ನಿಲ್ಲಿಸುವುದಿಲ್ಲ. ಇತರ ಗಾಡಿಗಳ ಜೊತೆ ನಿಲ್ಲಿಸುವಾಗ ಒಂದರ ಮೇಲೆ ಒಂದು ಬೀಳುತ್ತದೆ. ಆದರೂ ಇದರ ಬಗ್ಗೆ ನಿರ್ಲಕ್ಷ್ಯವಹಿಸುತ್ತಾರೆ. ಇದರಿಂದ ವಾಹನಗಳು ಹಾಳಾಗುತ್ತದೆ ಎಂದು ಗೊತ್ತಿದ್ದರೂ ಹೀಗೆ ಮಾಡುತ್ತಾರೆ ಎಂದು ಸಾರ್ವಜನಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: