Postpartum Depression: (ಜ.29) ಬಿಎಸ್ ವೈ ಅವರ ಮೊಮ್ಮಗಳು ಡಾ. ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಅವರಿಗೆ 9 ತಿಂಗಳ ಮಗು ಇದೆ. ಹೆರಿಗೆಯ ನಂತರ ಸೌಂದರ್ಯ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತದೆ. ಹಾಗಾದ್ರೆ ಹೆರಿಗೆ ನಂತರ ಯಾಕೆ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ.ಹೆರಿಗೆ ನಂತರ ಉಂಟಾಗುವ ಪ್ರಸವವೇದನೆ ಎಂದರೇನು?

ಮಹಿಳೆಯರು ಮಗುವಿಗೆ ಜನ್ಮ ನೀಡಿದ ನಂತರ ಕೆಲವರು ಆರೋಗ್ಯವಾಗಿ ಇರುತ್ತಾರೆ ಹಾಗೂ ಮಡಿಲಲ್ಲಿರುವ ಮಗುವನ್ನು ನೋಡಿ ಖುಷಿ ಪಡುತ್ತಾರೆ. ಆದರೆ ಕೆಲವೊಮ್ಮೆ ಪ್ರಸವವಾದ ನಂತರ ಖಿನ್ನತೆಗೆ ಒಳಗಾಗುತ್ತಾರೆ.
ಗರ್ಭಾವಸ್ಥೆ ಸಮಯದಲ್ಲಿ ಅಥವಾ ಹೆರಿಗೆ ಬಳಿಕ ಹಲವಾರು ಮನದಲ್ಲಿ ಮೂಡುವ ಪ್ರಶ್ನೆಗಳಿಂದ ಖಿನ್ನತೆಗೆ ಮಹಿಳೆಯರು ಒಳಗಾಗುತ್ತಾರೆ.
ಮನಸಿನ ದುಗುಡಗಳು, ಹೆರಿಗೆಯ ನೋವು ಅಥವಾ ಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಸಿಗದೆ ಬಾಣಂತಿಯರು ನಿಶಕ್ತರಾಗಿರುತ್ತಾರೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವುದು, ಬಲಹೀನತೆ, ದೈಹಿಕ, ಮಾನಸಿಕ ವೇದನೆಗಳು ಇದೆಲ್ಲವೂ ಬಾಣಂತಿಯರನ್ನು ಖಿನ್ನತೆಗೆ ಒಳಪಡಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ.

ಖಿನ್ನತೆಗೆ ಒಳಪಡುವ ಪ್ರಮುಖ ಕಾರಣಗಳು:
ಮಹಿಳೆಯು ಹೆರಿಗೆಯಾದ ನಂತರ ಅಥವಾ ಮೊದಲು ಗರ್ಭಾವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು, ಹಾರ್ಮೋನು ಬದಲಾವಣೆ ಪ್ರಮುಖ ಕಾರಣವಾಗುತ್ತದೆ.
ಮಹಿಳೆಯರ ಗರ್ಭಾವಸ್ಥೆಯಲ್ಲಿ ಉತ್ಪತ್ತಿಯಾಗುವ ಇಸ್ಟ್ರೋಜೆನ್ ಅಥವಾ ಪ್ರೊಜೆಸ್ಟ್ರಾನ್ ಎಂಬ ಹಾರ್ಮೋನ್ ಗಳು ಸಮತೋಲನವಾಗಿರುತ್ತದೆ. ಹೆರಿಗೆಯಾದ ನಂತರ ಈ ಹಾರ್ಮೋನ್ ಗಳು ಬದಲಾವಣೆಯಾಗುತ್ತದೆ.
ಕೆಲವರಿಗೆ ಉತ್ತಮ ಆರೈಕೆಯಿಂದ ಹಾರ್ಮೋನುಗಳು ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಗಳು ಇರುತ್ತದೆ. ಆದರೆ ಕೆಲವರಿಗೆ ಹಾರ್ಮೋನುಗಳ ಬದಲಾವಣೆಯಿಂದ ಖಿನ್ನತೆಗೆ ಕಾರಣವಾಗುತ್ತದೆ.ಈ ಸಮಸ್ಯೆಯು 10ರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗುತ್ತಾರೆ.

ಬೇಬಿ ಬ್ಲೂಸ್:
ಮೊದಲ ಬಾರಿ ತಾಯಿಯಾಗುವ ಮಹಿಳೆಯರು ತಮ್ಮ ಹೆರಿಗೆಯ ನಂತರ ಬೇಬಿ ಬ್ಲೂಸ್ ಎಂಬ ಸಮಸ್ಯೆಗೆ ಸಿಲುಕುತ್ತಾರೆ. ಬೇಬಿ ಬ್ಲೂಸ್ ಎಂದರೆ ಹೆರಿಗೆಯ ನಂತರ ಸಾಮಾನ್ಯವಾಗಿ ಮಾನಸಿಕ ಸ್ಥಿತಿಯು ಬದಲಾಗುವುದು.
ಹೆರಿಗೆಯ ನಂತರ ಕೆಲವರಿಗೆ ತುಂಬಾ ಸಂತೋಷವಾಗಬಹುದು ಅಥವಾ ದುಃಖವಾಗಬಹುದು. ಸ್ಪಷ್ಟ ಕಾರಣವಿಲ್ಲದೆ ಅಳಲುಬಹುದು. ಅಸಹನೆ, ಕಿರಿಕಿರಿ, ಆತಂಕ ,ಒಂಟಿತನ ಕಾಡಬಹುದು. ಇದೆಲ್ಲವೂ ಬೇಬಿ ಬ್ಲೂಸ್ ಲಕ್ಷಣಗಳು.

ಹೆರಿಗೆ ನಂತರ ಕಾಡುವ ಖಿನ್ನತೆಯ ಲಕ್ಷಣಗಳು:
- ಮಲಗಲು ಆಗದೆ ಇರುವುದು, ಹಸಿವಿನ ಬದಲಾವಣೆಗಳು, ಆಯಾಸ, ಪತಿ-ಪತ್ನಿ ಸೇರದೆ ಇರುವುದು.
- ಹೆರಿಗೆಯಾದ ನಾಲ್ಕು ವಾರಗಳ ನಂತರ ಮಹಿಳೆಯರು ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎಂದು ಅಧ್ಯಯನ ತಿಳಿಸಿದೆ.
- ಹೆರಿಗೆ ಅಲ್ಲದೆ ಮಹಿಳೆಯರಿಗೆ ನಾನಾ ಕಾರಣಗಳಿಂದ ಖಿನ್ನತೆಗೆ ಒಳಪಡುತ್ತಾರೆ. ಗರ್ಭಿಣಿಯಾಗುವ ಮೊದಲು ಅಥವಾ ಗರ್ಭಾವಸ್ಥೆಯಲ್ಲಿರುವ ಖಿನ್ನತೆಯ ಇತಿಹಾಸವನ್ನು ಗಮನಿಸಬೇಕಾಗುತ್ತದೆ.
- ಗರ್ಭಾವಸ್ಥೆಯ ಸಮಯದಲ್ಲಿ ವಯಸ್ಸು ಚಿಕ್ಕದಾಗಿದ್ದರೆ ಖಿನ್ನತೆಗೆ ಒಳಪಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
- ಗರ್ಭಾವಸ್ಥೆ ಗಿಂತ ಮೊದಲು ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಗರ್ಭಾವಸ್ಥೆಯಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
- ಕುಟುಂಬದ ಮಾನಸಿಕ ಅಸ್ವಸ್ಥ ಗಳ ಇತಿಹಾಸ, ಪ್ರಸ್ತುತ ಉದ್ಯೋಗ ನಷ್ಟ ಅಥವಾ ಆರೋಗ್ಯ ಬಿಕ್ಕಟ್ಟಿನ ವಾತಾವರಣ.
- ಆರೋಗ್ಯ ಸಮಸ್ಯೆಗಳಿರುವ ಮಗುವನ್ನು ಹೊಂದಿರುವುದು ಅಥವಾ ಈಗಾಗಲೇ ಅವಳಿ ಮಕ್ಕಳು, ಮನೆಯಲ್ಲಿ ಬೆಂಬಲವಿಲ್ಲದೆ ಇರುವುದು, ಒಂಟಿ ಜೀವನ ಅಥವಾ ವೈವಾಹಿಕ ಸಂಬಂಧಗಳಲ್ಲಿ ಸಂಘರ್ಷಗಳು ಕೂಡ ಕಾರಣವಾಗುತ್ತದೆ.
ಖಿನ್ನತೆಯಿಂದ ಹೊರಬರಲು ಹೀಗೆ ಮಾಡಿ:
- ಗರ್ಭಾವಸ್ಥೆಯಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರೆ, ವೈದ್ಯರನ್ನು ತಕ್ಷಣವೇ ಭೇಟಿಯಾಗಬೇಕು.
- ಕುಟುಂಬದವರು ನೀಡುವ ಆತ್ಮೀಯತೆ, ಸಮಾಲೋಚನೆ ಇತರ ಚಿಕಿತ್ಸೆಗಳಯಿಂದ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು.
- ವೈದ್ಯರು ನೀವು ಗರ್ಭಿಣಿಯಾಗಿರುವ ಮೊದಲು ಆದಮೇಲೂ ಕೂಡ ವೈದ್ಯರು ನೀಡುವ ಔಷಧಿಗಳನ್ನು ಸೇವಿಸಬೇಕು.
- ಗರ್ಭಿಣಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿಸುವುದು ಅತಿ ಮುಖ್ಯವಾಗಿರುತ್ತದೆ, ಹಾಗಾಗಿ ಪತಿ, ಕುಟುಂಬದವರು ಯಾವಾಗಲೂ ಬೆಂಬಲವಾಗಿ ನಿಲ್ಲಬೇಕು.
- ನಕಾರಾತ್ಮಕ ಮಾತುಗಳನ್ನಾಡದೇ, ಒಳ್ಳೆಯ ವಿಚಾರಗಳನ್ನು ಆಕೆಗೆ ತಿಳಿಸಬೇಕು.
ಹೆರಿಗೆಯಾದ ನಂತರ ಮಗುವನ್ನು ನೋಡಿಕೊಳ್ಳುವುದು ಹೇಗೆ?
- ಹೆರಿಗೆಯಾದ ನಂತರ ಮಗುವನ್ನು ನಿಭಾಯಿಸಲು ಸಾಧ್ಯವಾಗದೆ ಇದ್ದರೆ, ಇತರರನ್ನು ಸಹಾಯ ಕೇಳಿ ಅವರಿಂದ ಹೇಗೆ ಮಗುವನ್ನು ನೋಡಿಕೊಳ್ಳಬಹುದು ಎಂಬುದನ್ನು ಕೇಳಿ ತಿಳಿಯಿರಿ.
- ಹೆರಿಗೆಯಾದ ನಂತರ ತಾಯಿಗೂ ಹಾಗೂ ಮಗುವಿಗೆ ಆರೈಕೆ ಬೇಕಾಗಿರುತ್ತದೆ. ನಿಮ್ಮ ಕುಟುಂಬದಲ್ಲಿರುವ ಹಿರಿಯರು ಈ ವಿಷಯದಲ್ಲಿ ಸಹಾಯ ಮಾಡಬೇಕು.
- ಮಗುವಿಗಾಗಿ ಹಾಗೂ ನಿಮ್ಮ ಭವಿಷ್ಯಕ್ಕಾಗಿ ನಿರಂತರವಾಗಿ ಚಟುವಟಿಕೆಯಿಂದ ಇರಬೇಕು, ವ್ಯಾಯಾಮ ಸೇವಿದಂತೆ ನಿಮ್ಮ ಮನಸ್ಸಿನ ಬದಲಾಯಿಸಿಕೊಳ್ಳಬೇಕು.
- ಆಲ್ಕೋಹಾಲ್ ಸೇವನೆ ಮಾಡಬೇಡಿ. ನಿಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಿ ಒಬ್ಬರಿಗೊಬ್ಬರು ಸಮಯವನ್ನು ಮೀಸಲಿಡಿ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಯಾವಾಗಲೂ ಸಂಪರ್ಕದೊಂದಿಗೆ ನಿಮ್ಮನ್ನು ನೀವೇ ಒಂಟಿ ಎಂದು ಭಾವಿಸಿ ಕೊಳ್ಳಬೇಡಿ.
- ನಿಮ್ಮ ಮಗು ಮಲಗಿದ್ದಾಗ ನೀವು ಮಲಗಿಕೊಂಡು ವಿಶ್ರಾಂತಿ ಪಡೆಯಿರಿ. ಹೆರಿಗೆಯಾದ ನಂತರ ವಿಶ್ರಾಂತಿ ಅವಶ್ಯಕ ವೈದ್ಯರು ಹೇಳುವ ವ್ಯಾಯಾಮಗಳು, ಯಾವುದು ಕೆಲಸಗಳನ್ನು ಮಾಡಬಾರದು ಎಂದು ಹೇಳಿರುತ್ತಾರೋ ಕೆಲಸಗಳನ್ನು ಮಾಡಬಾರದು.
- ವೈದ್ಯರು ನೀಡಿರುವ ಸಂದರ್ಶನದ ಸಮಯವನ್ನು ನೆನಪಿಟ್ಟುಕೊಂಡು, ಆಗಾಗ ಭೇಟಿಯಾಗುತ್ತಿರಿ.