ಬೆಂಗಳೂರು: (ಜ.29): IPS Ravi D Channannanavar: ಐಪಿಎಸ್ ರವಿ ಚನ್ನಣ್ಣನವರ್ ವರ್ಗಾವಣೆ ಆದೇಶಕ್ಕೆ ಸರ್ಕಾರ ಬ್ರೇಕ್ ಹಾಕಿದ್ದು ಈ ಮೂಲಕ ಒಂದು ದಿನದ ಮಟ್ಟಿಗೆ ಆದೇಶವನ್ನ ತಡೆ ಹಿಡಿದಿದೆ.
ಎರಡು ದಿನಗಳ ಹಿಂದೆ ರವಿಚನ್ನನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸಿಐಡಿ ಎಸ್ಪಿ ಆಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ ಡಿ ಅಗಿ ವರ್ಗಾಯಿಸಲಾಗಿತ್ತು. ಆದರೆ ಇದೀಗ ಸರ್ಕಾರ ಮುಂದಿನ ಆದೇಶದವರೆಗೆ ವರ್ಗಾವಣೆಯನ್ನು ತಡೆಹಿಡಿದಿದೆ.

ರವಿ ಡಿ ಚನ್ನಣ್ಣನವರ್ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದೆ ಈ ಸಂಬಂಧ ಹಲವಾರು ಸಂಘಟನೆಗಳು ಚರ್ಚೆ ನಡೆಸಿದ್ದು, ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಪ್ರಸಾರವಾಗದಂತೆ ಚನ್ನಣ್ಣನವರ್ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು ಇದರ ಮಧ್ಯೆ ಅವರ ವರ್ಗಾವಣೆ ಮಾಡಿ ಆದೇಶ ವನ್ನು ಹೊರಡಿಸಲಾಗಿತ್ತು.