ದಕ್ಷಿಣ ಕನ್ನಡ: (ಜ.29) Harish Poonja: ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜಾ ವಿರುದ್ಧ ಅರಣ್ಯಾಧಿಕಾರಿ ಸಂಧ್ಯಾ ಅವರು ದೂರು ದಾಖಲಿಸಿದ್ದಾರೆ.
ದ.ಕ ಜಿಲ್ಲೆಯ ಅರಣ್ಯ ಸಂಚಾರಿ ದಳದ ಅಧಿಕಾರಿಯಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಧ್ಯಾ ಅವರು ಅಕ್ರಮ ಮರ ಕಳ್ಳತನದ ವಿರುದ್ಧ ಕ್ರಮ ಕೈಗೊಂಡಿದ್ದು. ಇದರ ವಿರುದ್ಧ ಹರೀಶ್ ಪೂಂಜಾ ಅವರು ಬೀದರ್ ಜಿಲ್ಲೆಗೆ ವರ್ಗಾಯಿಸುವಂತೆ ಸಿಎಂ ಅವರಿಗೆ ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿ ಅರಣ್ಯಾಧಿಕಾರಿ ಸಂಧ್ಯಾ ಅವರು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಿಗೆ ದೂರು ನೀಡಿರುವ ಪತ್ರ ವೈರಲ್ ಆಗಿದೆ.

ಈ ಹಿಂದೆ ಸಂಧ್ಯಾ ಅವರು ಉಡುಪಿ ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿಯಾಗಿದ್ದರು ಅರಣ್ಯ ಸಂಚಾರಿ ದಳದ ಪ್ರಭಾರಿಯಾಗಿ ಕರ್ತವ್ಯ ಸುತ್ತಿರುವ ಸಂಧ್ಯಾ ಸಚಿನ್ ಅವರು ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಗಳ್ಳರ ಹಾಗೂ ಅಕ್ರಮ ಮರಮುಟ್ಟು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದರು.
ಮರಗಳ್ಳರಿಗೆ ಸಹಾಯ?
ಅರಣ್ಯ ಅಧಿಕಾರಿಗಳು ವಾಹನ ಹಾಗೂ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಹಿನ್ನೆಲೆ ಶಾಸಕ ಹರೀಶ್ ಪೂಂಜಾ ಅವರು ಕೋಪಗೊಂಡು ನನ್ನಮೇಲೆ ಅಧಿಕಾರಿಗಳ ಆದೇಶದ ಮೇರೆಗೆ ನಾನು ಅಕ್ರಮ ಮರದ ದಾಸ್ತಾನು ಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸುತ್ತೇನೆ.


ಬೆಳ್ತಂಗಡಿ ತಾಲೂಕಿನ ಶಾಸಕರು ನನ್ನಲ್ಲಿ ವೈಯಕ್ತಿಕ ದ್ವೇಷವನ್ನು ಸಾಧಿಸಿಕೊಳ್ಳಲು, ಅಕ್ರಮ ಮರಗಳ್ಳರಾದ ಬಾಲಕೃಷ್ಣರು ಬದ್ಯಾರು, ಹಾಗೂ ಇನ್ನಿತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹಿಳಾ ಅಧಿಕಾರಿಯಾದ ನನ್ನ ಮೇಲೆ ಹಗೆ ಸಾಧಿಸಿ ನನ್ನನ್ನು ದೂರದ ಬೀದರ್ ಜಿಲ್ಲೆಗೆ ವರ್ಗಾಯಿಸಿದ್ದಾರೆ.
ವರ್ಗಾವಣೆ ಪತ್ರ ವೈರಲ್:
ನನ್ನ ವಿರುದ್ಧ ನಡೆಸಿದ ದಬ್ಬಾಳಿಕೆಯಿಂದ ಖಂಡಿಸಿ ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಂಧ್ಯಾ ಅವರು ಆಗ್ರಹಿಸಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಈ ಕುರಿತು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರು ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ಅವರನ್ನು ಅಕ್ರಮ ಮರಗಳ್ಳತನ ವಿರುದ್ಧ ಕ್ರಮಕೈಗೊಂಡಿರುವ ಕಾರಣಕ್ಕಾಗಿ ಬೀದರ್ ಜಿಲ್ಲೆಗೆ ವರ್ಗಾಯಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನಡೆ ತೀವ್ರ ಖಂಡನೀಯವಾಗಿದೆ.
ಅಧಿಕಾರಿಗಳಿಗೆ ಕಾರಣವಿಲ್ಲದೆ ಈ ರೀತಿಯ ವರ್ಗಾವಣೆ ಶಿಕ್ಷೆ ನೀಡುವುದನ್ನು ತಕ್ಷಣ ರದ್ದುಮಾಡಬೇಕು ಹಿಂದೂ ಸಂಘದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಅಧಿಕಾರಿಯನ್ನು ವರ್ಗಾವಣೆ ಕಳಿಸುವಂತೆ ಮುಖ್ಯಮಂತ್ರಿಗಳಿಗೆ ಬರೆಯಲಾದ ಹರೀಶ್ ಪೂಂಜ ಅವರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Night Curfew:ಜನವರಿ 31ರಿಂದ ರಾಜ್ಯದ್ಯಾಂತ ನೈಟ್ ಕರ್ಫ್ಯೂ ರದ್ದು: ಸೋಮವಾರದಿಂದ ಶಾಲಾ ತರಗತಿಗಳು ಆರಂಭ