ಬೆಂಗಳೂರು:( ಜ.29) Night Curfew: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ್ಯಾಂತ ವಿಧಿಸಲಾಗಿದ್ದ ನೈಟ್ ಕರ್ಫ್ಯೂ ರದ್ದು ಮಾಡಲು ಆದೇಶ ಹೊರಡಿಸಿದೆ. ಜನವರಿ 31ರಿಂದ ರಾತ್ರಿ ನೈಟ್ ಕರ್ಫ್ಯೂ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ.
ಕೋವಿಡ್-19 ಸ್ಥಿತಿಗತಿಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು ಚಿತ್ರಮಂದಿರ ಈಜುಕೊಳ ಜಿಮ್ ನಲ್ಲಿ ಶೇಕಡಾ 50ರಷ್ಟು ನಿಯಮ ಮುಂದುವರಿಕೆಗೆ ತೀರ್ಮಾನಿಸಲಾಗಿದೆ ಹಾಗೂ ಎಲ್ಲಾ ದೇವಾಲಯಗಳಲ್ಲಿ ಧಾರ್ಮಿಕ ಸೇವೆಗೆ ಅವಕಾಶ ನೀಡಲಾಗಿದೆ. ಜಾತ್ರೆಗಳು ಧರಣಿಗಳು ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ
- ಸಾರಿಗೆ ವಾಹನಗಳಲ್ಲಿ ಶೇಕಡ ನೂರರಷ್ಟು ಭರ್ತಿಗೆ ಅನುಮತಿ ದೊರೆತಿದೆ.
- ಬಾರ್ ಪಬ್ ರೆಸ್ಟೋರೆಂಟ್ ಗಳು ಹೋಟೆಲ್ ನಲ್ಲಿ ಶೇಕಡ ನೂರರಷ್ಟು ಅನುಮತಿ ದೊರೆತಿದೆ.
- ಸಿನಿಮಾ ಮಲ್ಟಿಪ್ಲೆಕ್ಸ್ ನಲ್ಲಿ ಶೇಕಡ 50ರಷ್ಟು ಅನುಮತಿ. ಮದುವೆಗಳಿಗೆ ಹಾಗೂ ಹೊರಾಂಗಣದಲ್ಲಿ ನಡೆಯುವ ಸಮಾರಂಭಗಳಿಗೆ 300 ಮಂದಿಗೆ ಅವಕಾಶ ನೀಡಲಾಗಿದೆ. ಒಳಾಂಗಣದಲ್ಲಿ ನಡೆಯುವ ಸಭೆಗಳಿಗೆ ಸಮಾರಂಭಗಳಿಗೆ ಇನ್ನೂರರಷ್ಟು ಮಂದಿಗೆ ಅವಕಾಶ.
- ಎಲ್ಲಾ ಕಚೇರಿಗಳಲ್ಲಿ ಶೇಕಡ ನೂರರಷ್ಟು ಹಾಜರಾತಿ ಕಡ್ಡಾಯ ಎಂದು ಹೇಳಿದ್ದಾರೆ.
- ಧಾರ್ಮಿಕ ಸ್ಥಳಗಳಲ್ಲಿ ಅಥವಾ ಎಲ್ಲಾ ಸೇವೆಗಳಿಗೆ ಅರ್ಚನೆಯ ಮಂಗಳಾರತಿ ಸೇರಿದಂತೆ ಅನುಮತಿ ನೀಡಲಾಗಿದೆ ಆದರೆ ಒಮ್ಮೆ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಜಾತ್ರೆಗಳು ರ್ಯಾಲಿಗಳು ಧರಣಿ ಪ್ರತಿಭಟನೆ ಸಾಮಾಜಿಕ ಕಾರ್ಯಕ್ರಮಗಳು ಧಾರ್ಮಿಕ ಸಭೆಗಳಿಗೆ ನಿರ್ಬಂಧ ಮುಂದುವರಿಕೆ.
- ಕ್ರೀಡಾ ಕಾಂಪ್ಲೆಕ್ಸ್, ಕ್ರೀಡಾಂಗಣದಲ್ಲಿ ಶೇಕಡ 50ರಷ್ಟು ಅವಕಾಶ. ಮಹಾರಾಷ್ಟ್ರದಿಂದ ಕೇರಳ ಗೆ ಬರುವವರಿಗೆ ಆರ್ಟಿ ಪಿಸಿಆರ್ ತಪಾಸಣೆ ವರದಿ ಕಡ್ಡಾಯ.
- ಬೆಂಗಳೂರಿನಲ್ಲಿ ಶಾಲೆಗಳಲ್ಲಿ ಎಲ್ಲ ತರಗತಿಗಳು ಸೋಮವಾರದಿಂದ ಆರಂಭವಾಗಲಿದೆ. ಕೋವಿಡ್ ಪತ್ತೆಯಾದರೆ ಅಂತಹ ತರಗತಿಗಳನ್ನು ಮಾತ್ರ ಬಂದ್ ಮಾಡಲಾಗುವುದು. ಶಾಲೆಯಲ್ಲಿ ಎಷ್ಟು ಮಂದಿಗೆ ಕೋವಿಡ್ ದೃಡಪಟ್ಟಿದೆ ಎನ್ನುವುದನ್ನು ಆಧರಿಸಿ ಅಂತಹ ಶಾಲೆಗಳನ್ನು ಎಷ್ಟು ದಿನ ಬಂದ್ ಮಾಡಬೇಕು ಎಂಬುದರ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತೀರ್ಮಾನಿಸುತ್ತಾರೆ ಎಂದು ವಿವರಿಸಿದ್ದಾರೆ