ಬೆಂಗಳೂರು: (ಜ.28): Dr.Soundarya Neeraj:ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ವೈದ್ಯೆ ಸೌಂದರ್ಯ ಅವರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರು ಮೌನ ಮುರಿದಿದ್ದಾರೆ.
ಇಂದು ಅಪಾರ್ಟ್ಮೆಂಟ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾದ ವೈದ್ಯ ಸೌಂದರ್ಯ ಅವರ ಘಟನೆ ತಿಳಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಪ್ರಧಾನಮಂತ್ರಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಮಗು ಇದ್ದರೂ ಅಗಲಿದ ಅಮ್ಮ:
ಬಿ.ಎಸ್ ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಮಗಳಾದ ಸೌಂದರ್ಯ ಅವರಿಗೆ 9ತಿಂಗಳ ಪುಟ್ಟಮಗು ವಿದ್ದರೂ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಕಾರಣಕ್ಕೆ ಎಡೆಮಾಡಿಕೊಟ್ಟಿದೆ.


ವಸಂತ ನಗರದಲ್ಲಿರುವ ಫ್ಲ್ಯಾಟೊಂದರಲ್ಲಿ ಸೇಲಂ ಅಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ನನ್ನ ದೀರ್ಘಕಾಲದ ರಾಜಕೀಯ ಸಂಗಾತಿ ಬಿಎಸ್ ಯಡಿಯೂರಪ್ಪ, ಅವರ ಮೊಮ್ಮಗಳು ಸಾವಿನ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಗಿದೆ. ಬುಜದೆತ್ತರಕ್ಕೆ ಬೆಳೆದ ಮಕ್ಕಳು ಕುಟುಂಬ ಸದಸ್ಯರ ಅಗಲಿಕೆಯಿಂದ ನೋವು ಸಂಕಟವನ್ನು ನಾನು ಕಂಡಿದ್ದೇನೆ ಹಾಗೂ ಅದನ್ನು ಅನುಭವಿಸಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಸೌಂದರ್ಯ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಯಡಿಯೂರಪ್ಪ ಅವರು ಸೇರಿದಂತೆ ಕುಟುಂಬದ ಅನೇಕರು ಸೌಂದರ್ಯ ಅವರ ಸಾವಿನಿಂದ ಕಂಗಾಲಾಗಿದ್ದಾರೆ.
ಇದನ್ನೂ ಓದಿ: BSY Granddaughter:ಕೌಟುಂಬಿಕ ಕಲಹದಿಂದ ಮಾಜಿ ಸಿಎಂ ಬಿಎಸ್ ವೈ ಮೊಮ್ಮಗಳು ಅತ್ಮಹತ್ಯೆ