ಬೆಂಗಳೂರು: (ಜ.28)Soundarya Neeraj: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ನೇಣಿಗೆ ಶರಣಾಗಿದ್ದು ಮೃತ ಸೌಂದರ್ಯ ಅಂತ್ಯಸಂಸ್ಕಾರಕ್ಕೆ ಪುರೋಹಿತರು ಆಗಮಿಸಿದ್ದಾರೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿದ್ದು ಅಂತಿಮ ವಿಧಿವಿಧಾನಕ್ಕೆ ಶಿವಗಂಗೆಯ ಹೊನ್ನಗವಿ ಮಠದ ರುದ್ರಮುನಿ ಸ್ವಾಮೀಜಿ ಸಮ್ಮುಖದಲ್ಲಿ ಸಿದ್ಧತೆ ನಡೆಸಲಾಗಿದೆ.
ಫಾರಂ ಹೌಸ್ ನಲ್ಲಿ ಅಂತ್ಯಕ್ರಿಯೆ
ಅಬ್ಬಿಗೆರೆಯ ಫಾರಂಹೌಸ್ನಲ್ಲಿ ಸೌಂದರ್ಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ. ಸ್ಥಳಕ್ಕೆಸ್ಥಳಕ್ಕೆ ಬಿ.ವೈ ಬಿಜಯೇಂದ್ರ ಸೇರಿದಂತೆ ಬಿಎಸ್‌ವೈ ಕುಟುಂಬಸ್ಥರ ಆಗಮಿಸಿದ್ದಾರೆ. ಸೌಂದರ್ಯ ಅಂತಿಮ ಸಂಸ್ಕಾರ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿಸಲಾಗಿದೆ. ಡಾ.ನೀರಜ್ ನಿವಾಸ ಕಲ್ಪವೃಕ್ಷದ ಬಳಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ..
ಡಾ. ಸೌಂದರ್ಯ ಕುತ್ತಿಗೆಯ ಭಾಗದಲ್ಲಿ ಮಾತ್ರ ಮಾರ್ಕ್ ಇದೆ. ಕುತ್ತಿಗೆಯ ಭಾಗದಲ್ಲಿ ಬಿಟ್ಟರೆ ಬೇರೆ ಯಾವುದೇ ಮಾರ್ಕ್ ಇಲ್ಲ. ಡಾ. ಸೌಂದರ್ಯ ಮರಣೋತ್ತರ ಪರೀಕ್ಷೆ ವರದಿ ಸಿದ್ಧವಾಗಿದೆ. ಮರಣೋತ್ತರ ಪರೀಕ್ಷೆ ವರದಿ ಅಧಿಕಾರಿಗಳಿಗೆ ಹಸ್ತಾಂತರಿಸ್ತೇವೆ ಎಂದು ಮರಣೋತ್ತರ ಪರೀಕ್ಷೆ ಬಳಿಕ ವೈದ್ಯ ಸತೀಶ್ ಹೇಳಿಕೆ ನೀಡಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. 3 ವೈದ್ಯರ ಸಮ್ಮುಖದಲ್ಲಿ ನಡೆಸಲಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮರಣೋತ್ತರ ಪರೀಕ್ಷೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು. ಸೌಂದರ್ಯ ನೇಣಿಗೆ ಬಳಸಿದ್ದ ವೇಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತಿ ನೀರಜ್ ದೂರಿನ ಆಧಾರದ ಮೇಲೆ ಯುಡಿಆರ್ ಕೇಸ್ ದಾಖಲಿಸಲಾಗಿದೆ. ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಾ. ನೀರಜ್ಗೆ ಬೆಳಗ್ಗೆ ಹತ್ತು ಗಂಟೆಗೆ ಫೋನ್ ಕಾಲ್ ಬಂದಿದೆ. ಮೇಡಂ ರೂಂ ಬಾಗಿಲು ಓಪನ್ ಮಾಡ್ತಾ ಇಲ್ಲ ಎಂದು ಹೇಳಿದ್ದಾರೆಂ
10.30 ರ ಸುಮಾರಿಗೆ ಪತಿ ನೀರಜ್ ಮನೆಗೆ ಆಗಮಿಸಿದ್ದಾರೆ. ಬಾಗಿಲು ಮುರಿದು ಒಳ ಹೋದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿರೋದು ಬೆಳಕಿಗೆ ಬಂದಿದೆ. ಪೊಲೀಸರು ಯುಡಿಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: BSY Granddaughter:ಕೌಟುಂಬಿಕ ಕಲಹದಿಂದ ಮಾಜಿ ಸಿಎಂ ಬಿಎಸ್ ವೈ ಮೊಮ್ಮಗಳು ಅತ್ಮಹತ್ಯೆ