Vikrant Rona: (ಜ.27): ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇದೊಂದು ಬೇಸರದ ಸುದ್ದಿ ಎಂದೇ ಹೇಳಬಹುದು. ಮಹಾಮಾರಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಲ್ಲಾ ಉದ್ಯಮಗಳಲ್ಲಿಯೂ ಏರಿಳಿತವಾಗುತ್ತದೆ.
ಕನ್ನಡ ಚಿತ್ರರಂಗದಲ್ಲಿ ಕೂಡ ಇದೇ ವ್ಯತ್ಯಾಸವಾಗುತ್ತಿದೆ. ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ದಿನಾಂಕವನ್ನು ಮುಂದೂಡಿದೆ. ಈ ಸಾಲಿನಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಕೂಡ ಒಂದು.


ಎಲ್ಲ ಅಂದುಕೊಂಡಂತೆ ಇದ್ದರೆ ಫೆಬ್ರವರಿ 24ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಿಡುವುದಾಗಿ ಚಿತ್ರತಂಡ ಘೋಷಿಸಿದೆ.
ನಮ್ಮ ಕನಸನ್ನು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ಉತ್ಸುಕರಾಗಿದ್ದರೂ, ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು, ಪ್ರಪಂಚದಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲಕರವಾಗಿರಲಿಲ್ಲ. ನಿಮ್ಮ ಪ್ರೀತಿ ಹಾಗೂ ತಾಳ್ಮೆಗೆ ನಾವು ಅಭಾರಿ. ಅದಕ್ಕೆ ಪ್ರತಿಯಾಗಿ ನೀವು ಮನಸಾರೆ ಸ್ವೀಕರಿಸುವಂತಹ ಚಿತ್ರ ನಿಮ್ಮ ಮುಂದೆ ತರುತ್ತೇವೆ ಎಂಬ ಭರವಸೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಪ್ರಪಂಚಕ್ಕೆ ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ ಜಾಕ್ ಮಂಜು.

ರಂಗಿತರಂಗ ಸಿನಿಮಾದ ಅನೂಪ್ ಭಂಡಾರಿ ಅವರು ವಿಕ್ರಾಂತ್ ರೋಣ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ಹಾಗೂ ಶಾಲಿನಿ ಮಂಜುನಾಥ ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ್ದು, ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಪ್ರಸಾರ ಹಕ್ಕುಗಳನ್ನು ಖರೀದಿಸಲು OTT ಸಂಸ್ಥೆಯೊಂದು ಬಂದಿತ್ತು ಎನ್ನಲಾಗಿದೆ ಆದರೆ ಚಿತ್ರತಂಡ ರಿಜೆಕ್ಟ್ ಮಾಡಿದೆ.

ಈಗಾಗಲೇ ಪೋಸ್ಟರ್ ಗಳು ಎಲ್ಲೆಡೆ ಅದ್ದೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೈಟಲ್ ಲಾಂಚ್ ಮಾಡಿದ್ದು ಸಿನಿಮಾದ ವಿಶೇಷ ವಿಶೇಷತೆ. ಮುಖ್ಯಪಾತ್ರದಲ್ಲಿ ಕಿಚ್ಚ ಸುದೀಪ್, ನೀತ ಅಶೋಕ್, ನಿರೂಪ್ ಭಂಡಾರಿ, ಜಾಕ್ವಲಿನ್ ಫರ್ನಾಂಡೀಸ್ ಮುಂತಾದವರು ನಟಿಸಿದ್ದಾರೆ.