Cm Ibramin: (ಜ.27) ಪರಿಷತ್ ವಿಪಕ್ಷ ನಾಯಕರಾಗಿ ಬಿ.ಕೆ ಹರಿಪ್ರಸಾದ್ರವರನ್ನು (BK Hariprasad) ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್ಸಿ ಸಿಎಂ ಇಬ್ರಾಹಿಂ (CM Ibrahim) ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸಿದ್ದರಾಮಯ್ಯಗೆ (siddaramaiah) ಹೊಸ ರಾಜಕೀಯ ಜೀವನ ಕೊಟ್ಟೆವು. ಅದಕ್ಕೀಗ ಸಿದ್ದರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ. ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ.
ಪರಿಷತ್ತ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ ಸಿಎಂ ಇಬ್ರಾಹಿಂ ಅವರು ದೇವೇಗೌಡರನ್ನು ಕೇಳಿ ಮುಂದೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ಸ್ಥಾನ ಬಿಟ್ಟು ಹೋಗುತ್ತಿರುವ ಬಗ್ಗೆ ಸಿದ್ದರಾಮಯ್ಯ ಅವರು ಉತ್ತರಿಸಬೇಕು ಹಾಗೂ ಡಿಕೆ ಶಿವಕುಮಾರ್ ಅವರಿಗೂ ನಮಗೂ ಹೊಂದಾಣಿಕೆಯಾಗುತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರಿಗೂ ನನಗೂ ಚೆನ್ನಾಗಿತ್ತು. ಚುನಾವಣಾ ಪ್ರಚಾರಕ್ಕಾಗಿ ಉತ್ತರಪ್ರದೇಶಕ್ಕೆ ಬರುವಂತೆ ಕರೆಯುತ್ತಿದ್ದಾರೆ ನಮ್ಮಿಂದ ಒಳ್ಳೆಯದಾದರೆ ಆಗಲಿ ಎಂದು ಇಬ್ರಾಹಿಂ ಅವರು ತಿಳಿಸಿದ್ದಾರೆ.
ಸೋನಿಯಾ ಗಾಂಧಿಯವರು ನಮಗೆ ಮೇಲಿದ್ದ ಭಾರ ಕಡಿಮೆ ಮಾಡಿದ್ದಾರೆ ಈಗ ನಾನು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರನಗಿದ್ದೇನೆ. ಸಿದ್ದರಾಮಯ್ಯ ಅವರಿಂದಲೇ ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದೆ. ಸಿದ್ದರಾಮಯ್ಯ ಅವರ ಸಲುವಾಗಿ ದೇವೇಗೌಡರನ್ನು ಬಿಟ್ಟು ಇಲ್ಲಿಗೆ ಬಂದೆ.

1996ರಲ್ಲಿ ರಾಜ್ಯಸಭೆ ಟಿಕೇಟ್, ಘೋಷಣೆ ಮಾಡುತ್ತೇವೆ ಎಂದು ಕ್ಯಾನ್ಸಲ್ ಮಾಡಿದ್ರು. ಆಗ ಕಾಂಗ್ರೆಸ್ ಪಕ್ಷ ಬಿಟ್ಟು 20 ವರ್ಷದ ಬಳಿಕ ಪುನಃ ಅದೇ ಕಾಂಗ್ರೆಸ್ ಇದೇ ರೀತಿ ಮಾಡಿದೆ ಎಂದು ಬೆಂಗಳೂರಿನಲ್ಲಿ ಇಬ್ರಾಹಿಂ ಅವರು ಹೇಳಿಕೆ ನೀಡಿದ್ದಾರೆ
ಕಾಂಗ್ರೆಸ್ ನಲ್ಲಿ ಇರೋದು ಮುಸ್ಲಿಂ ಮತದಾರರು:
ಕಾಂಗ್ರೆಸ್ ಮತದಾರರು ಕೇವಲ ಸಾಬರು ( ಮುಸ್ಲಿಂ) ಸಾಬರು ಹೋದಮೇಲೆ ಕಾಂಗ್ರೆಸ್ಸ ಪರಿಸ್ಥಿತಿ ಏನು ಎಂದು ಮುಂದಿನ ಚುನಾವಣೆಯಲ್ಲಿ ತಿಳಿಯುತ್ತದೆ. ಶೇಕಡ 50ರಷ್ಟು ಬಿಜೆಪಿ ಸಹಾಯ ಮಾಡಿದ್ದಕ್ಕೆ ಗೆದ್ದಿದ್ದಾರೆ.2023 ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಭ್ರಮೆಯಲ್ಲಿ ಇರಲಿ ಎಚ್ಚೆತ್ತುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.
ನಾನು ಜೆಡಿಎಸ್ ಸೇರುತ್ತೇನೋ? ಅಥವಾ ಮಾಯಾವತಿ ಪಕ್ಷ ಸೇರುತ್ತೇನೋ ಗೊತ್ತಿಲ್ಲ? ನಾನು ಕಾಂಗ್ರೆಸ್ ಬಿಡುವುದರ ಪರಿಣಾಮ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಯುಪಿ ಚುನಾವಣೆ ಫಲಿತಾಂಶದ ಪರಿಣಾಮ ರಾಜ್ಯದ ಮೇಲೂ ಆಗುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.
ನಿನ್ನೆ ರಾತ್ರಿಯಿಂದ ತುಂಬಾ ಫೋನ್ ಗಳು ಬರುತ್ತಿದೆ. ಅವರಿಗೆಲ್ಲ ಉತ್ತರ ಕೊಡಲು ನನ್ನಿಂದ ಆಗುತ್ತಿಲ್ಲ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ನಾಮಿನೇಷನ್ ಮಾಡುವಾಗ ನಾನು ಅವರ ಜೊತೆ ಇದ್ದೆ. ಅದನ್ನು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕಾಲಾಯ ತಸ್ಮೈ ನಮಃ ನಾನು ಮತ್ತೆ ಜೋಳಿಗೆ ಹಾಕಿದ್ದೇನೆ.
ಯುಪಿ ಚುನಾವಣೆ ಆಗಲೂಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆಗೆ ಬರಬಹುದು. ರಾಜಕೀಯದಲ್ಲಿ ಇವರಿಗೆ ನಾನು ಹೇಳಿದಂತೆ ನಡೆದಿದೆ ಸಂಖ್ಯಾತ ಸಮುದಾಯದ ಜನಸಂಖ್ಯೆ ನಂಬರ್ 1 ಇದೆ.
ಯಾರು ಕೈಬಿಟ್ಟರು ಮಾಧ್ಯಮದವರು ನನ್ನ ಕೈ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ.
ಜನರಿಗೆ ವಿಶ್ವಾಸ ಉಳಿದಿರುವುದು ಮಾಧ್ಯಮ ಹಾಗೂ ನ್ಯಾಯಾಂಗದ ಮೇಲೆ ಎಂದರು.